ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಜಿಲ್ಲೆಯಲ್ಲಿ ಮುಂದುವರೆದ ಮಳೆಯ ಆರ್ಭಟದಿಂದ ಮಾವು, ಟೊಮೆಟೋ ಸೇರಿದಂತೆ ತರಕಾರಿ ಬೆಳೆಗಳಿಗೆ ತೇವಾಂಶ ಹೆಚ್ಚಾಗುವ ಸಾಧ್ಯತೆ ಇದ್ದು, ಟೊಮೆಟೋ ಬೆಳೆಗಳಿಗೆ ವೈರಸ್ ಕಾಟ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ರೈತರ ಆತಂಕಕ್ಕೆ ಒಳಗಾಗಿದ್ದಾರೆ.
ವಾರ್ಷಿಕ ಬೆಳೆಯಾದ ಮಾವು ಇನ್ನೇನು ಒಂದು ವಾರದಲ್ಲಿ ಮಾರುಕಟ್ಟೆ ಪ್ರವೇಶ ಮಾಡುವ ಹಂತದಲ್ಲಿರುವುದರಿAದ ಮಳೆಯ ಆರ್ಭಟದ ಜೊತೆಗೆ ಬಿರುಗಾಳಿಯು ಬೀಸುತ್ತಿರುವುದರಿಂದ ಮಾವಿನಕಾಯಿಯ ಗಾತ್ರ ಹೆಚ್ಚಾಗಿ ಗಾಳಿಗೆ ಬೀಳುವ ಸಾಧ್ಯತೆಗಳಿವೆ. ಈಗಾಗಲೇ ಬಿರುಗಾಳಿಗೆ ಅಲ್ಲಲ್ಲಿ ಮಾವು ನೆಲಕಚ್ಚುತ್ತಿದೆ.
ನೆಲಕಚ್ಚಿದ ಮಾವನ್ನು ರೈತರು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ನೆಲಕಚ್ಚಿದ ಮಾವಿಗೆ ಮಾರುಕಟ್ಟೆಯ ಸೌಲಭ್ಯ ಇಲ್ಲದ ಕಾರಣ ದಲ್ಲಾಳಿಗಳು ಕೇಳಿದ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ನೆಲಕಚ್ಚಿದ ಮಾವನ್ನು ಬೆಂಗಳೂರು ಸೇರಿದಂತೆ ಇತರೆ ನಗರ ಪ್ರದೇಶಗಳಲ್ಲಿ ಹಸಿ ಮಾವನ್ನು ವ್ಯಾಪಾರಸ್ಥರು ಮಾರಾಟ ಮಾಡುತ್ತಿದ್ದಾರೆ. ಇನ್ನು ಕೆಲವರು ಇದನ್ನು ಉಪ್ಪಿನಕಾಯಿಗೆ ಖರೀದಿ ಮಾಡುತ್ತಿದ್ದಾರೆ.
ಇದೇ ಮಳೆ ಮುಂದುವರೆದರೆ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಮಾವಿನ ಕಾಯಿಗೆ ನೀರಿನ ಅಂಶ ಸೇರಿ ಗಾತ್ರ ಹೆಚ್ಚಾಗಿ ಮಳೆ ಬಿರುಗಾಳಿಗೆ ಬಂದಲ್ಲಿ ಉದುರಿ ಬೀಳುವ ಸಾಧ್ಯತೆಗಳು ಇವೆ. ಹಾಗೂ ನೀರಿನಾಂಶ ಹೆಚ್ಚಾದಂತೆ ತೋತಾಪುರಿ, ಬೇನಿಷ ಮುಂತಾದ ತಳಿಯ ಕಾಯಿಗಳು ಹೊಡೆಯುವ ಸಾಧ್ಯತೆ ಇದೆ ಎಂದು ರೈತರು ಆತಂಕ ಪಡುತ್ತಿದ್ದಾರೆ.
ಜೂನ್, ಜುಲೈ, ಆಗಸ್ಟ್ ತಿಂಗಳಿನಲ್ಲಿ ಟೊಮೆಟೋಗೆ ಉತ್ತಮ ಬೆಲೆ ಬರುತ್ತದೆಂದು ರೈತರು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೋವನ್ನು ಬೆಳೆಯುತ್ತಿದ್ದಾರೆ. ಕಳೆದ ನಾಲ್ಕೆöÊದು ದಿನಗಳಿಂದ ಎಡೆಬಿಡದೆ ಪ್ರತಿದಿನ ಮಳೆ ಸುರಿಯುತ್ತಿರುವುದರಿಂದ ಎಲ್ಲಿ ವೈರಸ್ ಬರುತ್ತದೆ ಎಂಬ ಆತಂಕ ರೈತರನ್ನು ಕಾಡುತ್ತಿದೆ.
ಈಗಿನ ಸದ್ಯದ ಪರಿಸ್ಥಿತಿಯಲ್ಲಿ ಟೊಮೆಟೋ ಬೆಳೆ ಮಳೆ ಬಂದರೆ ಮರುದಿನವೇ ಔಷಧಿ ಸಿಂಪಡಣೆ ಮಾಡಬೇಕು. ಪ್ರತಿದಿನ ಮಧ್ಯಾಹ್ನಕ್ಕೆ ಮಳೆ ಪ್ರಾರಂಭವಾಗುತ್ತಿರುವುದರಿAದ ಔಷಧಿ ಸಿಂಪಡಣೆ ಮಾಡಲು ಸಾಧ್ಯವಾಗುತ್ತಿಲ್ಲ. ತೇವಾಂಶ ಹೆಚ್ಚಾಗುವುದರಿಂದ ಎಲೆ ಮುದುರುವುದು ಸೇರಿದಂತೆ ಬೆಂಕಿ ರೋಗ ಮುಂತಾದ ರೋಗಭಾದೆಗಳು ಆವರಿಸುವ ಸಾಧ್ಯತೆ ಇದೆ ಎಂದು ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಆದರೂ ಸಹ ಮಳೆಯನ್ನು ನೋಡಿಕೊಂಡು ಔಷಧಿಗಳ ಸಿಂಪಡಣೆಗೆ ಮುಂದಾಗಿದ್ದಾರೆ.
ಕ್ಯಾಪ್ಸಿಕಂ, ಬಜ್ಜಿ, ಬೀಟ್‌ರೋಟ್, ಮೂಲಂಗಿ, ಎಲೆಕೋಸು, ಕೊತ್ತಂಬರಿ ಸೊಪ್ಪು ಇವುಗಳಿಗೂ ಸಹ ತೇವಾಂಶ ಹೆಚ್ಚಾಗಿ ತರಕಾರಿಗಳು ಭೂಮಿಯಲ್ಲಿ ಕೊಳೆಯಲು ಪ್ರಾರಂಭಿಸುತ್ತವೆ. ಮಳೆ ಈಗಲೇ ಮುಂದುವರೆದರೆ ಎಲ್ಲಾ ತರಕಾರಿ ಬೆಳೆಗಳು ನೆಲಕಚ್ಚುವ ಸಾಧ್ಯತೆ ಇದೆ.
ಕೋಟ್
ಬಿಸಿಲಿಗೆ ಬೆಂದು ಬರಡಾಗಿದ್ದ ಭೂಮಿಗೆ ಇತ್ತೀಚೆಗೆ ಬೀಳುತ್ತಿರುವ ಮಳೆಯಿಂದ ತಂಪಾಗುತ್ತಿದೆ. ಆದರೆ ಪ್ರತಿದಿನ ಸುರಿಯುತ್ತಿರುವ ಮಳೆಯಿಂದಾಗಿ ತರಕಾರಿ ಬೆಳೆಗಳಿಗೆ ತೇವಾಂಶ ಹೆಚ್ಚಾಗುವ ಸಾಧ್ಯತೆ ಇದೆ. ಅತಿಯಾದ ಮಳೆ ಮತ್ತು ಗಾಳಿಯಿಂದ ಮಾವಿನ ಫಸಲಿಗು ಧಕ್ಕೆಯಾಗುವ ಸಾಧ್ಯತೆಗಳಿವೆ. ಮಾವು ಇನ್ನೇನು ಒಂದು ವಾರದಲ್ಲಿ ಹಂತ ಹಂತವಾಗಿ ಮಾರುಕಟ್ಟೆಗೆ ಪ್ರವೇಶ ಮಾಡುವ ಸಾಧ್ಯತೆ ಇದೆ. ಮಳೆಯಿಂದ ಇಳುವರಿ ಬರುವ ಸಾಧ್ಯತೆಗಳ ಜೊತೆಗೆ ಗಾಳಿಗೆ ನಷ್ಟ ಉಂಟಾಗುವ ಸಾಧ್ಯತೆಗಳು ಇವೆ. ಈ ವರ್ಷ ಶೇ.೩೦ ರಷ್ಟು ಮಾತ್ರ ಫಸಲು ಇರುವುದರಿಂದ ಇರುವ ಫಸಲು ಎಷ್ಟರ ಮಟ್ಟಿಗೆ ರೈತರ ಕೈ ಸೇರುತ್ತದೆಯೋ ಕಾದು ನೋಡಬೇಕಾಗಿದೆ.
-ಶ್ರೀರಾಮರೆಡ್ಡಿ, ರೈತ
ಚಿತ್ರ ೧೭ ಕೆ.ಎಲ್.ಆರ್. ೦೪ : ಇತ್ತೀಚೆಗೆ ಬೀಳುತ್ತಿರುವ ಮಳೆ ಮತ್ತು ಗಾಳಿಗೆ ಮಾವು ನೆಲಕಚ್ಚುತ್ತಿರುವುದು.
ಚಿತ್ರ ೧೭ ಕೆ.ಎಲ್.ಆರ್. ೦೪ಎ : ಶ್ರೀರಾಮರೆಡ್ಡಿ, ರೈತ ಭಾವಚಿತ್ರ