ಜಿಲ್ಲೆಯಲ್ಲಿ ಚರ್ಮಗಂಟು ರೋಗಕ್ಕೆ ವಾಕ್ಸೀನ್ / ೧.೮೦ ಲಕ್ಷ ರಾಸುಗಳಿಗೆ ವಾಕ್ಸೀನ್ / ಕುರಿಗಳಲ್ಲಿ ಕಾಣಿಸಿಕೊಂಡಿರುವ ಕರುಳುಬೇನೆಗೆ ವಾಕ್ಸೀನ್ / ತುಳಸೀರಾಮಯ್ಯ

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ಜಿಲ್ಲೆಯಲ್ಲಿ ಕಳೆದ ೨ ವರ್ಷಗಳ ಹಿಂದೆ ಹಸುಗಳಲ್ಲಿ ಕಾಣಿಸಿಕೊಂಡಿದ್ದ ಚರ್ಮಗಂಟು ರೋಗ ಹತೋಟಿಗೆ ತರಲು ಹಂತ ಹಂತವಾಗಿ ಪಶು ಇಲಾಖೆ ಮುಂದಾಗಿದ್ದು, ೨ನೇ ಹಂತದಲ್ಲಿ ಚರ್ಮಗಂಟು ರೋಗ ಬಾರದಂತೆ ವ್ಯಾಕ್ಸೀನ್ ನೀಡುವ ಕಾರ್ಯ ಜಿಲ್ಲೆಯಾದ್ಯಂತ ಮುಂದುವರೆದಿದ್ದು, ಶೇ.೭೦ ರಷ್ಟು ರಾಸುಗಳಿಗೆ ಈಗಾಗಲೇ ವ್ಯಾಕ್ಸೀನ್ ನೀಡಲಾಗಿದೆ ಎಂದು ಪಶು ಇಲಾಖೆ ಉಪನಿರ್ದೇಶಕ ತುಳಸೀ ರಾಮಯ್ಯ ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ೨ ಲಕ್ಷ ೯ ಸಾವಿರ ರಾಸುಗಳು ಇದ್ದು, ಈಗಾಗಲೇ ೧ ಲಕ್ಷ ೮೦ ಸಾವಿರ ರಾಸುಗಳಿಗೆ ವ್ಯಾಕ್ಸೀನ್ ಹಾಕಲಾಗಿದೆ. ಜುಲೈ ೩೦ರ ಒಳಗಾಗಿ ೨ನೇ ಹಂತದ ವ್ಯಾಕ್ಸೀನ್ ಕಾರ್ಯ ಮುಕ್ತಾಯಗೊಳ್ಳಲಿದೆ. ಜಿಲ್ಲೆಯಲ್ಲಿ ಸದ್ಯಕ್ಕೆ ಚರ್ಮಗಂಟು ರೋಗ ರಾಸುಗಳಲ್ಲಿ ಕಾಣಿಸಿಕೊಂಡಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಪ್ರತಿವರ್ಷ ವ್ಯಾಕ್ಸೀನ್ ಕಾರ್ಯವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಪಶು ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

ಕರುಳುಬೇನೆ :
ಜಿಲ್ಲೆಯಲ್ಲಿ ೫ ಲಕ್ಷ ೭೯ ಸಾವಿರ ಕುರಿಗಳು ಇದ್ದು, ಇವುಗಳಿಗೆ ಕರುಳುಬೇನೆ ಬಾರದಂತೆ ವ್ಯಾಕ್ಸೀನ್ ಹಾಕುವ ಕಾರ್ಯ ಮುಂದುವರೆದಿದೆ. ಈಗಾಗಲೇ ಶೇ.೭೦ ರಷ್ಟು ಕುರಿಗಳಿಗೆ ವ್ಯಾಕ್ಸೀನ್ ಹಾಕಲಾಗಿದೆ. ಜುಲೈ ೩೦ಕ್ಕೆ ಪೂರ್ಣ ಪ್ರಮಾಣದಲ್ಲಿ ವ್ಯಾಕ್ಸೀನ್ ಹಾಕುವ ಕಾರ್ಯ ಪೂರ್ಣಗೊಳ್ಳಲಿದೆ. ವರ್ಷಕ್ಕೆ ೨ ಬಾರಿ ಜನವರಿ ಮತ್ತು ಡಿಸೆಂಬರ್ ನಲ್ಲಿ ವ್ಯಾಕ್ಸೀನ್ ಹಾಕುವ ಕಾರ್ಯವನ್ನು ಹಮ್ಮಿಕೊಳ್ಳಲಾತ್ತದೆ. ಇದರಿಂದ ಕುರಿಗಳಿಗೆ ಕರುಳುಬೇನೆ ಖಾಯಿಲೆಗಳು ಹತೋಟಿಗೆ ತರುವಂತಾಗಿದೆ. ಎಂದರು.

ಕುರಿ / ಹಸು ಪರಿಹಾರ :
ಕುರಿ ಮತ್ತು ಹಸುಗಳನ್ನು ವಿಮೆ ಪಾಲಿಸಿ ಮಾಡಿಸಲು ಇರುವ ಪಾಲಕರ ಕುರಿ ಅಥವಾ ಹಸು ಮೃತಪಟ್ಟರೆ ಹಸುವಿಗೆ ೧೦ ಸಾವಿರ ಕುರಿಗಳು ೫ ಸಾವಿರ ಪರಿಹಾರ ಹಣವನ್ನು ನೀಡಲಾಗುತ್ತಿದೆ. ಕಳೆದ ವರ್ಷ ಸರ್ಕಾರದಲ್ಲಿ ಅನುದಾನ ಇಲ್ಲದ ಕಾರಣ ಇದನ್ನು ನಿಲ್ಲಿಸಲಾಗಿತ್ತು. ಈಗ ಮುಂದುವರೆದಿದೆ. ಸತ್ತ ಕುರಿ ಮತ್ತು ಹಸು ಪರಿಹಾರಕ್ಕಾಗಿ ಅರ್ಜಿ ನೀಡುವ ಪಶುಪಾಲಕರಿಗೆ ಹಂತ ಹಂತವಾಗಿ ಪರಿಹಾರ ಹಣವನ್ನು ನೀಡಲಾಗುತ್ತಿದೆ ಎಂದರು.

ಮೇವಿನ ಬೀಜ ವಿತರಣೆ :
ಜಿಲ್ಲೆಯಾದ್ಯಂತ ೨೮ ಸಾವಿರ ಮೇವಿನ ಬೀಜದ ಕಿಟ್ಟುಗಳನ್ನು ಜಿಲ್ಲೆಯ ೬ ತಾಲ್ಲೂಕುಗಳಲ್ಲಿ ವಿತರಿಸಲಾಗುತ್ತಿದೆ. ಮಳೆ ಬೀಳುತ್ತಿರುವ ಕಾರಣ ರಾಸುಗಳಿಗೆ ಮೇವಿನ ಕೊರತೆಯಿಲ್ಲ. ಹಸಿರು ಮೇವು ಸಿಗುತ್ತಿದೆ ಎಂದರು.

ಚಿತ್ರ ೨೨ ಕೆ.ಎಲ್.ಆರ್. ೦೩ : ಪಶು ಇಲಾಖೆಯ ಉಪನಿರ್ದೇಶಕ ತುಳಸೀರಾಮಯ್ಯ ರವರ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net