ಜಿಲ್ಲೆಯಲ್ಲಿ ಅಲ್ಲಲ್ಲಿ ಮಳೆ / ಮಾವು ಟೊಮೆಟೋಗೆ ತಂಪು

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಜಿಲ್ಲೆಯಲ್ಲಿ ಅಲ್ಲಲ್ಲಿ ಮಳೆ ಕಾಣಿಸಿಕೊಂಡಿದ್ದು, ರೈತರಲ್ಲಿ ಹರ್ಷ ತಂದಿದ್ದು, ಪ್ರಥಮ ವರ್ಷದ ಯುಗಾದಿಯ ಪ್ರಥಮ ಮಳೆಯು ಇದಾಗಿರುವ ಕಾರಣ ರೈತರಿಗೆ ಈ ಮಳೆ ಶುಭ ಸಂಕೇತವಾಗಿದ್ದು, ಮಾವು ಫಸಲು ಸೇರಿದಂತೆ ವಿವಿಧ ತರಕಾರಿ ಬೆಳೆಗಳಿಗೆ ಮಳೆಯು ತಂಪೆರದAತೆ ಆಗಿದೆ.

ಶನಿವಾರ ಬೆಳ್ಳಿಗ್ಗಿನಿಂದಲೂ ಆಗಾಗ ಮೋಡ ಮುಚ್ಚಿದ ವಾತಾವರಣದಂತೆ ಕಂಡುಬAದು ಸಂಜೆ ವೇಳೆಗೆ ಶ್ರೀನಿವಾಸಪುರ ತಾಲ್ಲೂಕು, ಕೆ.ಜಿ.ಎಫ್.ತಾಲ್ಲೂಕುಗಳ ಕೆಲವು ಭಾಗಗಳಲ್ಲಿ ಮಳೆ ಕಾಣಿಸಿಕೊಂಡಿದೆ. ಕೋಲಾರ ಸೇರಿದಂತೆ ವಿವಿಧ ತಾಲ್ಲೂಕುಗಳಲ್ಲಿ ಅಲ್ಲಲ್ಲಿ ಮಳೆ ಕಾಣಿಸಿಕೊಂಡಿದ್ದು, ಸಂಜೆ ೬ ಗಂಟೆಯ ನಂತರವೂ ಮೋಡ ಮುಚ್ಚಿದ ವಾತಾವರಣ ಹಾಗೂ ತುಂತುರು ಮಳೆ ಕಾಣಿಸಿಕೊಂಡಿತ್ತು.

ಶುಕ್ರವಾರ ರಾತ್ರಿಯೂ ಕೆಲವು ಭಾಗಗಳಲ್ಲಿ ಮಳೆ ಕಾಣಿಸಿಕೊಂಡಿದೆ. ಹೆಚ್ಚು ಮಳೆ ಇಲ್ಲದಿದ್ದರು ಭೂಮಿಯ ಮೇಲಿನ ಧೂಳು ಅಣಗಿಸುವಂತಹ ಮಳೆ ಅಲ್ಲಲ್ಲಿ ಕಾಣಿಸಿಕೊಂಡಿತ್ತು. ಶನಿವಾರ ರಾತ್ರಿ ಮಳೆಯ ಸೂಚನೆಗಳು ಕಂಡು ಬಂದಿವೆ.

ಮಳೆಯಿಂದ ಮಾವಿಗೆ ಹಾನಿಯಿಲ್ಲ :

ಮಾವು ಹೂವು ನಂತರ ಪಿಂದೆಯಾಗಿರುವ ಕಾರಣ ಈಗ ಮಳೆ ಅವಶ್ಯಕತೆ ಇರುವುದರಿಂದ ಬಿಸಿಲಿನ ತಾಪಕ್ಕೆ ತಂಪೆರೆಯುವAತೆ ಮಳೆ ಆದರೆ ಮಾವಿನ ಫಸಲಿಗೆ ಉತ್ತಮ ಮಳೆಯ ನಿರೀಕ್ಷೆಯಲ್ಲಿ ರೈತರು ಕಾಯುತ್ತಿದ್ದಾರೆ. ಹಾಗೂ ಟೊಮೆಟೋ ಸಸಿಗಳನ್ನು ನಾಟಿ ಮಾಡುವ ಸುಗ್ಗಿಯು ಇದಾದ ಕಾರಣ ಟೊಮೆಟೋ ನಾಟಿ ಮಾಡಲು ಹದ ಮತ್ತು ಸಿದ್ಧತೆ ಮಾಡಿಕೊಂಡಿರುವವರಿಗೂ ಹಾಗೂ ಸಸಿಗಳನ್ನು ನಾಟಿ ಮಾಡಿರುವವರಿಗೂ ಈ ಮಳೆ ತಂಪೆರದAತೆ ಆಗಿದೆ. ಇದರಿಂದ ರೈತನ ಮುಖದಲ್ಲಿ ಮಂದಹಾಸ ಮೂಡುವಂತೆ ಆಗಿದೆ.

ಚಿತ್ರ ೨೨ ಕೆ.ಎಲ್.ಆರ್. ೦೬ : ಕೋಲಾರ ತಾಲ್ಲೂಕಿನ ಶ್ರೀನಿವಾಸಪುರದಲ್ಲಿ ಮಳೆ ಬಿದ್ದಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net