ಜಿಲ್ಲೆಯಲ್ಲಿ ಅಪರಾಧ ಸಂಖ್ಯೆ ಹೆಚ್ಚಳ / ಪೋಲಿಸರ ಯಶಸ್ವಿ ಕಾರ್ಯಾಚರಣೆಯು ಲೆಕ್ಕಿಸದ ಅಪರಾಧ ಪ್ರಕರಣಗಳು / ಬಾಲಕಿಯರ ಸರಣಿ ನಾಪತ್ತೆ ಪ್ರಕರಣಗಳು ಪೋಷಕರಲ್ಲಿ ಆತಂಕ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಜಿಲ್ಲೆಯಲ್ಲಿ ಕಳೆದ ಎರಡು-ಮೂರು ತಿಂಗಳಿAದ ಅಪರಾಧ ಪ್ರಕರಣಗಳ ಸಂಖ್ಯೆಗಳು ಹೆಚ್ಚಾಗುತ್ತಿದೆ. ಇದರ ಜೊತೆಗೆ ಕಳೆದ ೨೦ ದಿನಗಳಿಂದ ಸರಣಿ ಎಂಬAತೆ ಬಾಲಕಿಯರ ನಾಪತ್ತೆ ಪ್ರಕರಣಗಳು ವರದಿಯಾಗುತ್ತಿದ್ದು, ಸಾರ್ವಜನಿಕರಲ್ಲಿ ಮತ್ತು ಪೋಷಕರಲ್ಲಿ ಭೀತಿಯ ವಾತಾವರಣ ಉಂಟಾಗಿದೆ.

ಕಳೆದ ೩ ದಿನಗಳ ಹಿಂದೆ ನಗರದ ಹೊರವಲಯದ ರಾಷ್ಟಿçÃಯ ೭೫ರಲ್ಲಿ ದಾಯಾದಿಗಳ ಕಲಹದಿಂದ ವ್ಯಕ್ತಿಯನ್ನು ಮಾರಾಕಾಸ್ತçಗಳಿಂದ ಕೊಚ್ಚಿ ಕೊಲೆ ಮಾಡಿ ಆಟೋದಲ್ಲಿಯೇ ಶವವನ್ನು ಬಿಟ್ಟು ಪರಾರಿಯಾಗಿದ್ದರು. ಇದಕ್ಕೂ ಮುನ್ನ ೨೦ ದಿನಗಳ ಹಿಂದೆ ನರಸಾಪುರದ ಗೃಹಿಣಿಯೊಬ್ಬಳನ್ನು ಕೆ.ಎಸ್.ಆರ್.ಟಿ.ಸಿ. ಮೆಕಾನಿಕ್ ಕೊಲೆ ಮಾಡಿದ್ದ. ಕಳೆದ ೨ ದಿನಗಳ ಹಿಂದೆ ನರಸಾಪುರದ ಕಾರ್ಖಾನೆಯ ವಾಚ್‌ಮ್ಯಾನ್‌ನನ್ನು ಕಾರ್ಖಾನೆಯಲ್ಲಿ ಕೆಲಸ ಮಾಡುವ ಯುವಕನೇ ಕೊಲೆ ಮಾಡಿದ್ದ. ಈ ಎಲ್ಲಾ ಪ್ರಕರಣಗಳನ್ನು ಪೋಲಿಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೂ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತಿರುವುದಕ್ಕೆ ಸಾರ್ವಜನಿಕರು ಆತಂಕಗೊಳ್ಳುವAತಾಗಿದೆ.

ಕಳೆದ ೨೦ ದಿನಗಳಿಂದ ಸರದಿಯಾಗಿ ಹದಿಹರಿಯದ ಬಾಲಕಿಯರು ನಾಪತ್ತೆ ಪ್ರಕರಣಗಳು ವರದಿಯಾಗುತ್ತಿವೆ. ಆದರೆ ಪತ್ತೆಯಾದ ಕೆಲವೇ ಗಂಟೆಗಳಲ್ಲಿ ಪೋಲಿಸರು ಪತ್ತೆಹಚ್ಚಿ ಪೋಷಕರಿಗೆ ಒಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ವಿನಾಕಾರಣ ಶಾಲೆಗೆ ಹೋದ ಮಕ್ಕಳು ಮತ್ತೆ ಮರಳಿ ವಾಪಸ್ಸು ಬಾರದೆ ನಾಪತ್ತೆಯಾಗಿ ಪೋಷಕರಲ್ಲಿ ಆತಂಕ ಸೃಷ್ಟಿ ಮಾಡಿ, ಪೋಲಿಸರ ತುರ್ತು ಕಾರ್ಯಾಚರಣೆಯಿಂದ ಮನೆ ಸೇರಿಸುವಂತಹ ಕೆಲಸ ಮಾಡುತ್ತಿದ್ದಾರೆ.

ಇದಕ್ಕೆ ಕಾರಣಗಳು ಹಿರಿಯ ಶಿಕ್ಷಣ ತಜ್ಞರ ಪ್ರಕಾರ ಇತ್ತೀಚಿನ ಮಕ್ಕಳು ಸನ್ನಿಗೆ ಒಳಗಾಗುತ್ತಿದ್ದಾರೆ. ದೃಶ್ಯ ಮಾಧ್ಯಮಗಳ ಹಾವಳಿ, ಮನೆಯ ವಾತಾವರಣ, ಶಾಲೆಯಲ್ಲಿನ ಒತ್ತಡಗಳು, ಓದಿನ ಕಡೆ ಹೆಚ್ಚು ಆಕರ್ಷಿತಗೊಂಡು ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಿಷ್ಕಿçಯೆಗೊಂಡಿರುವುದೇ ಕಾರಣ ಎಂದು ಹೇಳಲಾಗುತ್ತಿದೆ. ಪೋಷಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳ ಮನೋಭಾವವನ್ನು ಅರ್ಥ ಮಾಡಿಕೊಂಡು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಂತಹ ಕೆಲಸ ಮಾಡದೇ ಇರುವುದೇ ಕಾರಣ ಎನ್ನಲಾಗುತ್ತಿದೆ.

ಅಕ್ಟೋಬರ್ ೨ ರಂದು ಮುಳಬಾಗಿಲು ತಾಲೂಕಿನ ಗ್ರಾಮವೊಂದರ ಇಬ್ಬರು ಬಾಲಕಿಯರು ನಾಪತ್ತೆಯಾಗಿ ಎರಡು ದಿನಗಳ ನಂತರ ಬಾವಿ ಒಂದರಲ್ಲಿ ಶವಗಳು ಪತ್ತೆಯಾಗಿದ್ದವು.

ಡೆತ್ ನೋಟ್ ಬರೆದಿಟ್ಟು ಬಾಲಕಿಯೊಬ್ಬಳು ತನ್ನ ಶಾಲಾ ಸಹಪಾಠಿಯನ್ನು ಕರೆದುಕೊಂಡು ಹೋಗಿ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ದುರ್ಘಟನೆಯ ಕಹಿ ನೆನಪು ಮಾಸುವ ಮೊದಲೇ ಗುರುವಾರ ಮುಳಬಾಗಿಲು ನಗರದ ಇಬ್ಬರು ಬಾಲಕಿಯರು ಶಾಲೆಗೆಂದು ತೆರಳಿದವರು ನಾಪತ್ತೆಯಾಗಿದ್ದರು. ಪೊಲೀಸರ ಸಕಾಲಿಕ ಕಾರ್ಯಾಚರಣೆಯಿಂದಾಗಿ ಸಂಜೆ ಇಬ್ಬರನ್ನು ಬೆಂಗಳೂರು ಸಮೀಪ ಪತ್ತೆಹಚ್ಚಲಾಗಿತ್ತು.

ಇದೇ ರೀತಿ ಶುಕ್ರವಾರ ಬೆಳಗ್ಗೆ ಕೋಲಾರ ತಾಲೂಕಿನ ನರಸಾಪುರ ಗ್ರಾಮದ ಇಬ್ಬರೂ ಬಾಲಕಿಯರು ಶಾಲೆಗೆಂದು ತೆರಳಿದವರು ಮನೆಗೆ ಮರಳಿ ಬಂದಿರಲಿಲ್ಲ. ಈ ಇಬ್ಬರು ಮಕ್ಕಳು ಕರ್ನಾಟಕ ಪಬ್ಲಿಕ್ ಶಾಲೆಯ ೧೦ನೇ ತರಗತಿಯ ಮಕ್ಕಳಾಗಿದ್ದು, ಪೋಷಕರು ಆತಂಕಗೊAಡು ಹುಡುಕಾಡಿ ನಂತರ ನಗರದ ಮಹಿಳಾ ಪೋಲಿಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಪೋಲಿಸರು ಶನಿವಾರ ರಾತ್ರಿ ಬೆಂಗಳೂರು ನಗರದಲ್ಲಿ ಮಕ್ಕಳನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಪೋಷಕರ ವಶಕ್ಕೆ ನೀಡಿದ್ದಾರೆ.

ಈ ರೀತಿಯ ಸರಣಿಯ ಪ್ರಕರಣಗಳು ಆತಂಕಕ್ಕೆ ಕಾರಣವಾಗಿದ್ದು, ಪೋಷಕರು ತಮ್ಮ ಮಕ್ಕಳ ಚಲನವಲನ ಕುರಿತು ಇನ್ನಷ್ಟು ನಿಗಾ ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಪೋಷಕರು ಮತ್ತು ಶಿಕ್ಷಕರು ಮಕ್ಕಳ ಕೌನ್ಸಲಿಂಗ್ ನಡೆಸುವ ಕಾರ್ಯ ಶಿಕ್ಷಣ ಇಲಾಖೆ ಮಾಡಬೇಕಾಗಿದೆ. ಕೋರೋನಾ ಕಾಲದಲ್ಲಿ ಮೊಬೈಲ್ ಮೂಲಕ ಮಕ್ಕಳಿಗೆ ನೋಟ್ಸ್ ನೀಡುತ್ತಿದ್ದ ಸಂದರ್ಭದಲ್ಲಿ ಮಕ್ಕಳು ಹೆಚ್ಚು ಮೊಬೈಲನ್ನು ಬಳಸುವಂತಾಗಿದ್ದು, ಅಲ್ಲಿಂದೀಚೆಗೆ ಮಕ್ಕಳ ಚಲನವಲನಗಳ ಬದಲಾಗಿದ್ದು, ಪೋಷಕರು ಗಮನಿಸದೇ ಇರುವುದೇ ಕಾರಣ. ಹಾಗೂ ಈಗಲೂ ಕೆಲವು ಶಿಕ್ಷಕರು ಮೊಬೈಲ್‌ನಲ್ಲಿ ಪಿಡಿಎಫ್ ಫೈಲ್‌ಗಳನ್ನು ಮಕ್ಕಳಿಗೆ ರವಾನೆ ಮಾಡುತ್ತಿರುವುದು ಇದಕ್ಕೆ ಮತ್ತೊಂದು ಕಾರಣ ಎಂದು ಹಿರಿಯ ಉಪನ್ಯಾಸಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net