ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರ ಜಿಲ್ಲೆಯ ಪೊಲೀಸರು ವಿವಿಧ ಕಡೆಗಳಲ್ಲಿ ದಾಳಿ ನಡೆಸಿ ೩೧ ಪ್ರಕರಣಗಳಲ್ಲಿ ೯೭ ಕೆ.ಜಿ. ೬೨೪ ಗ್ರಾಂ ಗಾಂಜಾ ಮತ್ತು ೦.೦೪ ಗ್ರಾಂ ಎಂಡಿಎAಎ ಅನ್ನು ವಶ ಪಡಿಸಿಕೊಳ್ಳಲಾಗಿದ್ದು, ಅದನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ವ್ಯಾಪ್ತಿಯಲ್ಲಿನ ಚೊಕ್ಕಹಳ್ಳಿ ಸಮೀಪದ ಸೆಂಚೂರಿ ಘಟಕದಲ್ಲಿ ನಾಶಪಡಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ತಿಳಿಸಿದರು.
ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ೬೦.೩೧,೮೫೦ ರೂ.ಗಳ ಮೌಲ್ಯದ ಗಾಂಜಾ, ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಇದೀಗ ಸದರಿ ಅಮಲು ಪದಾರ್ಥಗಳನ್ನು ಪೊಲೀಸ್ ಪ್ರಧಾನ ಕಛೇರಿಯ ಆದೇಶದಂತೆ ಮತ್ತು ಪರಿಸರ ಇಲಾಖೆಯ ಅನುಮತಿಯೊಂದಿಗೆ ಪರಿಸರ ಮಾಲಿನ್ಯಕ್ಕೆ ಧಕ್ಕೆಯಾಗದಂತೆ ಮಾದಕ ವಸ್ತುಗಳ ವಿಲೇವಾರಿ ಸಮಿತಿಯ ಸಮಕ್ಷಮದಲ್ಲಿ ಬೆಂಗಳೂರು ಜಿಲ್ಲೆಯ ಹೊಸಕೋಟೆ ವ್ಯಾಪ್ತಿಯಲ್ಲಿನ ಚೊಕ್ಕಹಳ್ಳಿ ಸಮೀಪದ ಸೆಂಚೂರಿ ಘಟಕದಲ್ಲಿ ನಾಶಪಡಿಸಲಾಗುವುದು ಎಂದು ತಿಳಿಸಿದರು.
ಈ ಮಾದಕ ವಸ್ತುಗಳನ್ನು ನನ್ನ ಹಾಗೂ ಇಬ್ಬರು ಡಿ.ವೈ.ಎಸ್.ಪಿ. ಸಮ್ಮುಖದಲ್ಲಿ ವಶಪಡಿಸಿಕೊಂಡು ಬೀಗ ಮುದ್ರೆ ಹಾಕಿದ್ದ ಕೊಠಡಿಯನ್ನು ತೆರೆದು ಸೆಂಚೂರಿಗೆ ಸಾಗಣೆ ಮಾಡಲಾಯಿತು. ಕಳೆದ ಏಪ್ರಿಲ್, ಮೇ ಯಿಂದ ಡಿಸೆಂಬರ್ ಮಾಹೆಯವರೆಗೆ ಕೋಲಾರ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಕೋಲಾರ, ಮಾಲೂರು, ಮುಳಬಾಗಿಲು ಹಾಗೂ ಶ್ರೀನಿವಾಸಪುರ ತಾಲ್ಲೂಕುಗಳಲ್ಲಿ ಕಾರ್ಯಚರಣೆ ನಡೆಸಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿತ್ತು ಎಂದು ತಿಳಿಸಿದರು.
ಬಹುತೇಕ ರಾಷ್ಟಿçÃಯ ಹೆದ್ದಾರಿ ಸಮೀಪದಲ್ಲಿ ಮಾದಕ ವಸ್ತುಗಳ ದಂಧೆಗಳು ನಡೆಸಲಾಗುತ್ತಿತ್ತು. ಇವುಗಳು ಆಂಧ್ರ ಪ್ರದೇಶದ ಚಿತ್ತೂರು ಮತ್ತು ಗಡಿ ಭಾಗದ ವಿಕೋಟೆಯಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿವೆ.
ಆಂಧ್ರ ಪ್ರದೇಶಕ್ಕೂ ಹೋಗಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಹೆಚ್ಚಾಗಿ ಮುಳಬಾಗಲು ಮತ್ತು ಕೋಲಾರದಲ್ಲಿ ಮಾರಾಟದ ದಂಧೆ ಪ್ರಕರಣಗಳು ದಾಖಲಾಗಿದೆ ಎಂದು ತಿಳಿಸಿದರು.
ಮಾದಕ ವಸ್ತುಗಳ ಸೇವನೆ, ಮಾರಾಟ ಸಾಗಣೆಯು ಅಪರಾಧವಾಗಿದೆ. ಇವುಗಳ ವಿರುದ್ದ ಪೊಲೀಸ್ ಇಲಾಖೆಯು ನಿಯಂತ್ರಿಸಲು ಶಕ್ತಿ ಮೀರಿ ಶ್ರಮಿಸುತ್ತಿದ್ದು, ಕೋಲಾರ ಜಿಲ್ಲೆಯನ್ನು ಮಾದಕ ಮುಕ್ತ ಜಿಲ್ಲೆಯನ್ನಾಗಿ ಮಾಡಲಾಗುವುದು ಎಂದು ವಿವರಿಸಿದರು.
ವಶಪಡಿಸಿಕೊಂಡಿದ್ದ ಗಾಂಜಾ ಚೀಲಗಳನ್ನು ಮಾಧ್ಯಮದವರ ಸಮ್ಮುಖದಲ್ಲಿಯೇ ಡಿ.ಎಆರ್, ವ್ಯಾನಿಗೆ ತುಂಬಿ ಹೊಸಕೋಟೆ ಸೆಂಚೂರಿ ಘಟಕಕ್ಕೆ ಸಾಗಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಡಿವೈಎಸ್‌ಪಿ ಹೆಚ್.ಎಂ.ನಾಗ್ತೆ ಹಾಗೂ ನಂದಕುಮಾರ್ ಉಪಸ್ಥಿತರಿದ್ದರು.
ಚಿತ್ರ ೨೪ ಕೆ.ಎಲ್.ಆರ್. ೦೭ : ಜಿಲ್ಲೆಯ ೩೧ ಪ್ರಕರಣಗಳಲ್ಲಿ ಪೋಲಿಸರು ವಶಪಡಿಸಿಕೊಳ್ಳಲಾಗಿರುವ ಗಾಂಜಾ ಮತ್ತು ಮಾದಕ ವಸ್ತುಗಳನ್ನು ಹೊಸಕೋಟೆ ವ್ಯಾಪ್ತಿಯಲ್ಲಿನ ಚೊಕ್ಕಹಳ್ಳಿ ಸಮೀಪದ ಸೆಂಚೂರಿ ಘಟಕದಲ್ಲಿ ನಾಶಪಡಿಸಲು ಸಿದ್ಧವಾಗಿರುವ ಚೀಲಗಳು ಸಿದ್ಧವಿರುವುದು. ಎಸ್.ಪಿ.ಬಿ.ನಿಖಿಲ್, ಡಿ.ವೈ.ಎಸ್.ಪಿ. ನಾಗ್ತೆ, ನಂದಕುಮಾರ್ ಇದ್ದರು.