ಜಿಲ್ಲಾಡಳಿತದಿಂದ ವೆಬ್ ಕಾಸ್ಟಿಂಗ್ / ಅಧಿಕಾರಿಗಳ ಕಾರ್ಯವೈಖರಿ ಮೇಲೆ ಹೆಚ್ಚಿನ ನಿಗಾ ವ್ಯವಸ್ಥೆ ಜಾರಿ

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ದಿನೇ ದಿನೇ ರಂಗೇರುತ್ತಿದ್ದು, ಅಂತಿಮ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ನಾನಾ ಕಸರುತ್ತುಗಳನ್ನು ವಿಭಿನ್ನವಾಗಿ ಮಾಡುತ್ತಿದ್ದು, ಮತದಾರರ ಮನ ಗೆಲ್ಲಲು ಹರಸಾಹಸ ಪಡುತ್ತಿರುವುದು ಜಿಲ್ಲೆಯ ಪ್ರಜಾತಂತ್ರ ಹಬ್ಬದ ತೀವ್ರತೆಯನ್ನು ಹೆಚ್ಚಿಸಿದೆ.

ಈ ನಿಟ್ಟಿನಲ್ಲಿ ಪ್ರಜಾತಂತ್ರ ಹಬ್ಬವನ್ನು ತುಂಬಾ ವಿಶಿಷ್ಟವಾಗಿ ಆಚರಿಸಲು, ಎಲ್ಲರನ್ನೂ ಒಳಗೊಳ್ಳುವಂತಹ, ಪಾರದರ್ಶಕ ಹಾಗೂ ಪರಿಣಾಮಕಾರಿ ಚುನಾವಣಾ ಹಬ್ಬವನ್ನು ಯಶಸ್ವಿಗೊಳಿಸಲು ಹಾಗೂ ಅಧಿಕಾರಿಗಳ ಕಾರ್ಯವೈಖರಿ ಮೇಲೆ ಹಿಡಿತವನ್ನು ಸಾಧಿಸಲು ಚುನಾವಣಾ ಆಯೋಗವು ವಿಶಿಷ್ಟ ಮತ್ತು ವಿನೂತನ ಕ್ರಮಗಳನ್ನು ಅನುಷ್ಠಾನಗೊಳಿಸಿದೆ.

ಅಂತಹ ವಿನೂತನ ಕ್ರಮಗಳಲ್ಲಿ 'ವೆಬ್ ಕಾಸ್ಟಿಂಗ್' ತಂತ್ರಜ್ಞಾನ ಪದ್ಧತಿ ಅಳವಡಿಕೆಯು ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಒಂದೇ ತಂತ್ರಜ್ಞಾನ ವೇದಿಕೆ ಅಡಿಯಲ್ಲಿ ನೇರ ಪ್ರಸಾರ ಮೂಲಕ ಜಿಲ್ಲಾ ದೂರು ನಿರ್ವಹಣಾ ಘಟಕದಿಂದ ಅತ್ಯಂತ ಪರಿಣಾಮಕಾರಿಯಾಗಿ ನಿಯಂತ್ರಿಸಲಾಗುತ್ತಿದೆ.

ಏನಿದು ವೆಬ್ ಕಾಸ್ಟಿಂಗ್?
ಕೋಲಾರ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಅನುಷ್ಠಾನಗೊಳಿಸಲು ನಿಯೋಜಿಸಲಾಗಿರುವ ಎಲ್ಲಾ ಮಾದರಿಯ ತಂಡಗಳಾದ ಎಸ್‌ಎಸ್‌ಟಿ, ಫ್ಲೈಯಿಂಗ್ ಸ್ಕ್ವಾಡ್, ವಿಡಿಯೋ ಸರ್ವೈವ್‌ಲೈನ್ಸ್ ತಂಡ, ಪೊಲೀಸ್ ಗಸ್ತು ವಾಹನಗಳು, ಸೆಕ್ಟರ್ ಅಧಿಕಾರಿಗಳು ಮುಂತಾದ ತಂಡಗಳನ್ನು ಇಂಟರ್ನೆಟ್ ಮತ್ತು ವೈಫೈ ತಂತ್ರಜ್ಞಾನವನ್ನು ಬಳಸಿಕೊಂಡು ಜಿಪಿಎಸ್ ಮತ್ತು ಸಿಸಿಟಿವಿಗಳ ಮೂಲಕ ಅಲ್ಲಿನ ಅಧಿಕಾರಿ ಮತ್ತು ತಂಡಗಳ ಕಾರ್ಯ ಚಟುವಟಿಕೆಗಳನ್ನು ಜಿಲ್ಲಾ ನಿಯಂತ್ರಣ ಕೊಠಡಿಯಲ್ಲಿ ಅಳವಡಿಸಿರುವ ದೊಡ್ಡದಾದ ಪರದೆಯ ಮೇಲೆ ನೇರ ಪ್ರಸಾರದಲ್ಲಿ ಮೂಡಿ ಬರುವಂತೆ ೨೪/೭ ಮಾದರಿಯಲ್ಲಿ ಮೇಲ್ವಿಚಾರಣೆ ಮಾಡುವ ಪದ್ಧತಿಯಾಗಿದೆ.

ಜಿಲ್ಲೆಯಲ್ಲಿ ವೆಬ್ ಕಾಸ್ಟಿಂಗ್ ಹೇಗೆ ಕಾರ್ಯನಿರ್ವಹಿಸುತ್ತದೆ?
ಜಿಲ್ಲೆಯಲ್ಲಿ ಮಾದರಿ ನೀತಿ ಸಮಿತಿ ಉಲ್ಲಂಘಿಸುವ ಪ್ರಕರಣಗಳನ್ನು ಭೋದಿಸಲು ಹಾಗೂ ದೂರುಗಳನ್ನು ಸಮರ್ಪಕವಾಗಿ ನಿರ್ವಹಿಸುವ ಸಂಬAಧ ಮಾದರಿ ನೀತಿ ಸಂಹಿತೆ ತಂಡಗಳನ್ನು ರಚಿಸಲಾಗಿದೆ. ಅವುಗಳಲ್ಲಿ ಬಹು ಮುಖ್ಯವಾಗಿ ಚೆಕ್‌ಪೋಸ್ಟ್ ತಂಡಗಳು. ಜಿಲ್ಲೆಯಲ್ಲಿ ಒಟ್ಟು ೮೪ ತಂಡಗಳು ದಿನದ ೨೪ ಗಂಟೆಯೂ ಈ ಚೆಕ್‌ಪೋಸ್ಟ್ಗಳಲ್ಲಿ ಹಗಲಿರಲು ಶ್ರಮಿಸುತ್ತಿದ್ದಾರೆ.

ಒಂದು ತಂಡದಲ್ಲಿ ಸ್ಥಾನಿಕ ನಿಗಾ ತಂಡದ ಮುಖ್ಯಸ್ಥರು, ಸಹಾಯಕ ಸಿಬ್ಬಂದಿ, ಪೊಲೀಸ್, ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳ ಒಳಗೊಂಡ ತಂಡ ಕಾರ್ಯನಿರ್ವಹಿಸುತ್ತಿದು,್ದ ಜಿಲ್ಲೆಯ ಲೋಕಸಭಾ ವ್ಯಾಪ್ತಿಗೆ ಬರುವ ಚಿಂತಾಮಣಿ ಮತ್ತು ಶಿಡ್ಲಘಟ್ಟ ಸೇರಿದಂತೆ ಜಿಲ್ಲೆಯ ಆರು ತಾಲೂಕುಗಳಲ್ಲಿ ಒಟ್ಟು ೩೬ ಚೆಕ್‌ಪೋಸ್ಟ್ಟ್ ರಚಿಸಲಾಗಿದ್ದು, ಅಂತರಾಜ್ಯ ಗಡಿಗಳು ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಮಾದರಿ ನೀತಿ ಸಂಹಿತೆ ಪ್ರಕರಣಗಳನ್ನು ಭೇದಿಸಲು ಇವು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತೇವೆ.

ಈ ಚೆಕ್‌ಪೋಸ್ಟ್ಗಳು ಸಿಸಿಟಿವಿ ಕಣ್ಗಾವಲಿನಲ್ಲಿದ್ದು, ಈ ಎಲ್ಲಾ ಚೆಕ್‌ಪೋಸ್ಟ್ಗಳ ಎಲ್ಲಾ ಸಿಸಿಟಿವಿಗಳು ಜಿಲ್ಲಾ ದೂರು ನಿಯಂತ್ರಣ ಕೊಠಡಿಯಿಂದ ವೆಬ್ ಕಾಸ್ಟಿಂಗ್ ಮೂಲಕ ಸದರಿ ಚೆಕ್ ಪೋಸ್ಟ್ನ ಚಲನವಲನಗಳನ್ನು ದಾಖಲಿಸಲಾಗುತ್ತಿದೆ.

ಪ್ರತಿ ಚೆಕ್‌ಪೋಸ್ಟ್ನಲ್ಲಿ ಅಧಿಕಾರಿಗಳ ಹಾಜರಾತಿ, ಚೆಕ್‌ಪೋಸ್ಟ್ನಲ್ಲಿ ಅಧಿಕಾರಿಗಳ ಸೌಲಭ್ಯಗಳು, ಅವರ ಕಾರ್ಯ ವೈಖರಿ ಮುಂತಾದವುಗಳನ್ನು ವೆಬ್ ಕಾಸ್ಟಿಂಗ್ ಮೂಲಕ ನಿಯಂತ್ರಣ ಕೊಠಡಿಯಿಂದಲೇ ನಿರಂತರವಾಗಿ ವೀಕ್ಷಿಸಲಾಗುತ್ತಿದ್ದು, ಏನೇ ಸಲಹೆ ಸೂಚನೆಗಳಿದ್ದರೆ ನಿಯಂತ್ರಣ ಕೊಠಡಿಯಿಂದಲೇ ನಿರ್ದೇಶನಗಳನ್ನು ನೀಡಲಾಗುತ್ತಿದೆ.

ಚೆಕ್‌ಪೋಸ್ಟ್ನಲ್ಲಿನ ಯಾವುದೇ ಸಿಬ್ಬಂದಿಯು ಸಮರ್ಪಕವಾಗಿ ವಾಹನಗಳನ್ನು ತಪಾಸಣೆ ಮಾಡದಿದ್ದಲ್ಲಿ ನಿಯಂತ್ರಣ ಕೊಠಡಿಯಿಂದಲೇ ವೀಕ್ಷಿಸಿ ಎಚ್ಚರಿಕೆಯನ್ನು ನೀಡಲಾಗುತ್ತಿದೆ. ಇದರಿಂದಾಗಿ ಎಲ್ಲಾ ಅಧಿಕಾರಿಗಳು ನೇರವಾಗಿ ವೆಬ್ ಕಾಸ್ಟಿಂಗ್‌ನಲ್ಲಿ ನಿಯಂತ್ರಣ ಕೊಠಡಿಯ ಮೇಲ್ವಿಚಾರಣೆಯಲ್ಲಿ ಇದ್ದು, ಎಲ್ಲರೂ ಅತ್ಯಂತ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿರುವುದು ಕಂಡುಬAದಿದೆ. ಹಾಗೂ ಇದರಿಂದಾಗಿ ಜಿಲ್ಲೆಯ ಎಲ್ಲಾ ಚೆಕ್‌ಪೋಸ್ಟ್ಗಳಲ್ಲಿ ತಪಾಸಣೆಗಳನ್ನು ಬಿಗಿಗೊಳಿಸಲಾಗಿದ್ದು, ಯಾವುದೇ ಅಪರಾಧಗಳು ಕಂಡು ಬಂದಲ್ಲಿ ದೂರನ್ನು ದಾಖಲಿಸಲಾಗುತ್ತಿದೆ.

ಅದೇ ರೀತಿಯಾಗಿ ಜಿಲ್ಲೆಯಲ್ಲಿ ಕಟ್ಟುನಿಟ್ಟಿನಲ್ಲಿ ನೀತಿ ಸಂಹಿತೆ ಪಾಲನೆ ಸಂಬAಧ ಒಟ್ಟು ೪೫ ಫ್ಲೈಯಿಂಗ್ ಸ್ಕ್ವಾಡ್ ತಂಡಗಳು, ೧೨ ವಿಡಿಯೋ ಸರ್ವೆಲೆನ್ಸ್ ತಂಡಗಳು, ೪೯ ಪೊಲೀಸ್ ವಾಹನಗಳು ಒಟ್ಟು ೧೦೮ ವಾಹನಗಳಿಗೆ ಜಿಪಿಎಸ್ ಸಾಧನವನ್ನು ಅಳವಡಿಸಲಾಗಿದ್ದು, ಈ ಎಲ್ಲಾ ವಾಹನಗಳು ಜಿಲ್ಲಾ ನಿಯಂತ್ರಣ ಕೊಠಡಿಯಿಂದ ಜಿಪಿಎಸ್ ಲೈವ್ ಟ್ರ‍್ಯಾಕಿಂಗ್ ಮಾಡಿ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಪ್ರತಿ ವಾಹನದಲ್ಲಿನ ಜಿಪಿಎಸ್ ಅಳವಡಿಕೆಯಿಂದಾಗಿ ಪ್ರತಿವಾಹನ ನಿಲ್ಲುವ ಸ್ಥಳ, ಚಲನೆಯ ಸ್ಥಳ ನಿರಂತರವಾಗಿ ರಿಯಲ್ ಟೈಮ್ ನಲ್ಲಿ ಜಿಪಿಎಸ್ ಟ್ರಾಕಿಂಗ್ ಪರದೆಯ ಮೇಲೆ ೨೪/೭ ನಿಗ ವಹಿಸಲಾಗುತ್ತಿದ್ದು, ಒಂದು ವೇಳೆ ಹೆಚ್ಚು ಸಮಯದವರೆಗೂ ಒಂದೇ ಸ್ಥಳದಲ್ಲಿದಲ್ಲಿ ನಿಯಂತ್ರಣ ಕೊಠಡಿಯಿಂದ ಕರೆ ಮಾಡಿ ವಿವರಣೆ ಕೇಳಲಾಗುತ್ತಿದೆ.

ಬಾಕ್ಸ್
ಜಿಲ್ಲೆಯಲ್ಲಿ ಚುನಾವಣೆಯನ್ನು ಅತ್ಯಂತ ಪಾರದರ್ಶಕವಾಗಿಸಲು ಮತ್ತೆ ಸುಸೂತ್ರವಾಗಿ ನಡೆಸಲು ಜಿಲ್ಲೆಯಲ್ಲಿ ವೆಬ್ ಕಾಸ್ಟಿಂಗ್ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಪ್ರತಿಯೊಬ್ಬ ಸಿಬ್ಬಂದಿಗೂ ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಲು ಅನುವು ಮಾಡಿಕೊಡಲಿದೆ.

ಈ ವೆಬ್ ಕಾಸ್ಟಿಂಗ್ ಮತ್ತು ಜಿಪಿಎಸ್ ಟ್ರಾಕಿಂಗ್ ವ್ಯವಸ್ಥೆಯ ನಿಗಾ ವ್ಯವಸ್ಥೆಯನ್ನು ಸ್ವತಃ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಚುನಾವಣಾಧಿಕಾರಿಗಳು ಪ್ರತಿದಿನ ದೂರು ನಿಯಂತ್ರಣ ಘಟಕಕ್ಕೆ ಖುದ್ದು ಭೇಟಿ ನೀಡಿ ಪ್ರಗತಿಯನ್ನು ಪರಿಶೀಲಿಸುತ್ತಿರುವುದು ವಿಶೇಷವಾಗಿದೆ.

ಜಿಲ್ಲೆಯ ಈ ವಿನೂತನ ಕ್ರಮದಿಂದಾಗಿ ಮತ್ತು ತಂತ್ರಜ್ಞಾನದ ಸದ್ಬಳಕೆಯ ಬಗ್ಗೆ ಜಿಲ್ಲೆಗೆ ಆಗಮಿಸಿರುವ ಸಾಮಾನ್ಯ ಚುನಾವಣಾ ವೀಕ್ಷಕರು, ವೆಚ್ಚ ವೀಕ್ಷಕರು ಸೇರಿದಂತೆ ಎಲ್ಲಾ ಹಿರಿಯ ಅಧಿಕಾರಿಗಳ ತಂಡವು ಈ ವಿನೂತನ ಪ್ರಯತ್ನಕ್ಕೆ ಮೆಚ್ಚುಗೆಯನ್ನು ಸೂಚಿಸಿದೆ. ಈ ಕ್ರಮಗಳಿಂದಾಗಿ ಜಿಲ್ಲೆಯಲ್ಲಿ ಚುನಾವಣೆಯು ಸುಗಮವಾಗಿ ಕಾರ್ಯನಿರ್ವಹಿಸುವಂತಾಗಲಿದೆ ಎನ್ನುವ ಅಭಿಪ್ರಾಯವನ್ನು ಚುನಾವಣಾ ಆಯೋಗದ ತಂಡವು ಅಭಿಪ್ರಾಯಪಟ್ಟಿದೆ.

ಈ ಎಲ್ಲಾ ವಿನೂತನ ವೆಬ್‌ಕಾಸ್ಟಿಂಗ್ ತಂತ್ರಜ್ಞಾನ ಕ್ರಮಗಳಿಂದಾಗಿ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಬಳಕೆ ಮಾಡುತ್ತಿರುವುದರಿಂದ ಜಿಲ್ಲೆಯಲ್ಲಿ ಚುನಾವಣೆಯು ಅತ್ಯಂತ ದಕ್ಷತೆ ಪಾರದರ್ಶಕತೆ ಎಲ್ಲರೂ ಕರ್ತವ್ಯ ನಿರ್ವಹಿಸುವಂತಾಗಿದೆ ಎಂದು ಜಿಲ್ಲಾ ದೂರು ನಿರ್ವಹಣಾ ಘಟಕದ ನೋಡಲ್ ಅಧಿಕಾರಿಗಳಾದ ಮುರಳಿ ರವರು ತಿಳಿಸಿದರು.

ಚಿತ್ರ ೧೪ ಕೆ.ಎಲ್.ಆರ್. ೦೯ : ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಅಳವಡಿಸಿರುವ ವೆಬ್‌ಕ್ಯಾಸ್ಟಿಂಗ್ ತಂತ್ರಜ್ಞಾನ ಪರದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net