ಜಿಲ್ಲಾ ನೌಕರರ ಸಂಘದ ಚುನಾವಣೆ/ ೧೬ ಸ್ಥಾನಗಳಿಗೆ ಮತದಾನ/ ಪ್ರತಿಷ್ಟೆಯ ಕಣವಾಗಿದ್ದ ಶಿಕ್ಷಕರ ಕ್ಷೇತ್ರ/ ಶಿಕ್ಷಕ ಗೆಳೆಯರ ಬಳಗ ಹಾಗೂ ಅನಿಲ್‌ಕುಮಾರ್ ಬಣಕ್ಕೆ ತಲಾ ೨ ಸ್ಥಾನ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಸರ್ಕಾರಿ ನೌಕರರ ಸಂಘದ ೧೧ ಇಲಾಖೆಗಳ ೧೬ ಸ್ಥಾನಗಳಿಗೆ ಶನಿವಾರ ನಡೆದ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಸಂಜೆ ನಡೆದ ಮತ ಎಣಿಕೆಯಲ್ಲಿ ತೀವ್ರ ಪ್ರತಿಷ್ಟೆಯ ಕಣವಾಗಿದ್ದ ಪ್ರಾಥಮಿಕ ಶಾಲಾ ವಿಭಾಗದಿಂದ ನಾಲ್ಕು ಸ್ಥಾನಗಳಿಗೆ ಶಿಕ್ಷಕ ಗೆಳೆಯರ ಬಳಗದಿಂದ ಇಬ್ಬರು ಹಾಗೂ ಅನಿಲ್‌ಕುಮಾರ್ ಬಣದಿಂದ ಇಬ್ಬರು ಆಯ್ಕೆಯಾಗಿದ್ದಾರೆ.

ಪ್ರಾಥಮಿಕ ಶಾಲಾ ವಿಭಾಗದಲ್ಲೇ ಅತಿ ಹೆಚ್ಚು ಅಂದರೆ ಸುಮಾರು ೧೨೦೦ ಮತದಾರರಿದ್ದು, ಪ್ರತಿಷ್ಟೆಯ ಕಣವಾಗಿ ೪ ಸ್ಥಾನಗಳಿಗೆ ೧೩ ಮಂದಿ ಕಣದಲ್ಲಿದ್ದರು. ಅವರಲ್ಲಿ ಶಿಕ್ಷಕ ಗೆಳೆಯರ ಬಳಗದ ಯು.ಗೋವಿಂದ್, ಎಸ್.ಬಿ.ವೆಂಕಟಾಚಲಪತಿಗೌಡ ಹಾಗೂ ಅನಿಲ್ ಕುಮಾರ್ ಬಣದಿಂದ ಅನಿಲ್‌ಕುಮಾರ್ ಹಾಗೂ ಸಿ.ನಾರಾಯಣಸ್ವಾಮಿ ಆಯ್ಕೆಯಾದರು.

ವೈದ್ಯಕೀಯ ಶಿಕ್ಷಣ ಮತ್ತು ಜಿಲ್ಲಾಸ್ಪತ್ರೆಗಳ ವಿಭಾಗದಿಂದ ಕೆ.ವಿಜಯ್, ಡಾ. ಸೈಯದಾಶಗುಪ್ತ ತಬಸ್ಯುಂ, ಶಾಲಾ ಶಿಕ್ಷಣ ಇಲಾಖೆಯಿಂದ ಕೇಶವರೆಡ್ಡಿ, ಕೃಷಿ ಇಲಾಖೆಯಿಂದ ಕೆ.ಎನ್.ಮಂಜುನಾಥ್ ಮತ್ತಿತರರು ಆಯ್ಕೆಯಾದರು.

ತೋಟಗಾರಿಕಾ ಇಲಾಖೆಯಿಂದ ಎ.ಹೆಚ್.ನವೀನ್, ಪಿಎಂಜೆಎಸ್‌ವೈ ಜಿಪಂ ಇಂಜಿನಿಯರಿAಗ್ ವಿಭಾಗದಿಂದ ಸಿ.ಎಂ.ನೀಲಮ್ಮ, ಜಿಲ್ಲಾ ಪಂಚಾಯಿತಿ ಕಚೇರಿ ಕ್ಷೇತ್ರದಿಂದ ಕೆ.ಕಿರಣ್‌ಕುಮಾರ್, , ಸರ್ಕಾರಿ ಪ್ರೌಢಶಾಲೆಗಳ ವಿಭಾಗದಿಂದ ವಿ.ಮುರಳಿಮೋಹನ್, ಎಸ್.ಚೌಡಪ್ಪ, ತಾಪಂ ಉಳಿದ ಸಿಬ್ಬಂದಿ ವಿಭಾಗದಿಂದ ಜಿ.ಎಸ್.ಸತೀಶ್‌ಕುಮಾರ್, ಸಮಾಜಕಲ್ಯಾಣ ಇಲಾಖೆಯಿಂದ ಸಿ.ಎ.ಅಶ್ವಿನ್‌ಕುಮಾರ್, ಖಜಾನೆ ಇಲಾಖೆಯಿಂದ ಆರ್.ಸೋಮಶೇಖರ್ ಆಯ್ಕೆಯಾಗಿದ್ದಾರೆ.

ಈಗಾಗಲೇ ಜಿಲ್ಲಾ ಕೇಂದ್ರದ ವಿವಿಧ ಇಲಾಖೆಗಳಿಂದ ೫೦ ಮಂದಿ ಅವಿರೋಧ ಆಯ್ಕೆಯಾಗಿದ್ದಾರೆ.

ಜಿಲ್ಲಾಧ್ಯಕ್ಷರ ಚುನಾವಣೆ ನ.೨೮ಕ್ಕೆ ನಿಗಧಿ:

ಜಿಲ್ಲಾ ನೌಕರರ ಸಂಘದ ಎಲ್ಲಾ ಜಿಲ್ಲಾ ಕೇಂದ್ರದ ೬೬ ಹಾಗೂ ತಾಲ್ಲೂಕು ಅಧ್ಯಕ್ಷರುಗಳು ೫ ಮಂದಿ ಸೇರಿದಂತೆ ೭೧ ಮಂದಿ ಆಯ್ಕೆ ಪ್ರಕ್ರಿಯೆ ಮುಗಿದಿದ್ದು, ಇದೀಗ ಜಿಲ್ಲಾಧ್ಯಕ್ಷರ ಚುನಾವಣೆಯತ್ತ ಎಲ್ಲರ ಗಮನ ಕೇಂದ್ರೀಕೃತವಾಗಿದೆ.

ಜಿಲ್ಲಾಧ್ಯಕ್ಷರ ಆಯ್ಕೆಗೆ ಇದೀಗ ಆಯ್ಕೆಯಾಗಿರುವ ೬೬ ಮಂದಿ ಜಿಲ್ಲಾಕೇಂದ್ರದ ನಿರ್ದೇಶಕರು, ಐದು ತಾಲೂಕುಗಳ ಅಧ್ಯಕ್ಷರು ಮತ ಹಾಕಬೇಕಾಗುತ್ತದೆ.

ನ.೨೮ ರಂದು ನಡೆಯುವ ಈ ಚುನಾವಣೆಗೆ ಜಿದ್ದಾಜಿದ್ದಿನ ಪೈಪೋಟಿ ಇದ್ದು, ಇದರಲ್ಲಿ ರಾಜಕೀಯ ವ್ಯಕ್ತಿಗಳ ಕೈವಾಡವೂ ಗೋಚರಿಸತೊಡಗಿದೆ. ಹಾಲಿ ಜಿಲ್ಲಾಧ್ಯಕ್ಷ ಜಿ.ಸುರೇಶ್‌ಬಾಬು ತಂಡ ಈಗಾಗಲೇ ಜಿಲ್ಲೆಯ ಹಿರಿಯ ರಾಜಕಾರಣಿಗಳ ಆಶೀರ್ವಾದ ಪಡೆದುಕೊಂಡು ಕಣಕ್ಕಿಳಿಯುವ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್‌ಕುಮಾರ್ ಸುರೇಶ್‌ಬಾಬು ವಿರುದ್ದ ಮತ್ತೊಂದು ಗುಂಪನ್ನು ಸಿದ್ದಗೊಳಿಸುತ್ತಿದ್ದಾರೆ ಎನ್ನಲಾಗಿದ್ದು, ಆ ಗುಂಪಿನಲ್ಲಿ ಕೆ.ಎನ್.ಮಂಜುನಾಥ್, ಅಜಯ್, ಮಾಲೂರಿನ ಮುನೇಗೌಡ ಮತ್ತಿತರರ ಹೆಸರು ಹರಿದಾಡುತ್ತಿದೆ.

ಚಿತ್ರ೧೭ ಕೆ.ಎಲ್.ಆರ್. ೦೧ಕೋಲಾರ ಜಿಲ್ಲಾ ಸರ್ಕಾರಿ ನೌಕರರ ಸಂಘಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ವೈದ್ಯಕೀಯ ಶಿಕ್ಷಣ ಮತ್ತು ಜಿಲ್ಲಾಸ್ಪತ್ರೆಗಳ ವಿಭಾಗದಿಂದ ಕೆ.ವಿಜಯ್,ಡಾ. ಸೈಯದಾಶಗುಪ್ತ ತಬಸ್ಯುಂ ಗೆಲುವಿನ ನಗೆ ಬೀರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net