ಜಿಪಂ, ತಾಪಂ ಚುನಾವಣೆ ಬಹಳಕಾಲ ಮುಂದೂಡಿಕೆ ಸರಿಯಾದ ಕ್ರಮವಲ್ಲ / ಸರ್ಕಾರಕ್ಕೆ ಸುದರ್ಶನ್ ಮನವಿ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಸರ್ಕಾರ ಜಿಪಂ, ತಾಪಂ, ಬಿಬಿಎಂಪಿ ಚುನಾವಣೆಗಳನ್ನು ಬಹಳ ಕಾಲ ಮುಂದೂಡುವುದು ಸರಿಯಾದ ಕ್ರಮವಲ್ಲ ಎಂಬುದನ್ನು ಅರಿತು ಸರ್ಕಾರ ಕ್ರಮವಹಿಸಬೇಕು ಎಂದು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮನವಿ ಮಾಡಿದರು.

ನಗರದ ಟಿ.ಚನ್ನಯ್ಯ ರಂಗಮAದಿರದಲ್ಲಿ ದಿವಂಗತ ವಿ.ವೆಂಕಟಮುನಿಯಪ್ಪ ಅಭಿಮಾನಿಗಳ ಬಳಗದಿಂದ ಆಯೋಜಿಸಿದ್ದ ಪುಣ್ಯಸ್ಮರಣೆ ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಜಿಪಂ, ತಾಪಂ ಮೂಲಕ ಅನೇಕ ಹೊಸ ನಾಯಕರ ಉದಯಕ್ಕೆ ಅವಕಾಶವಾಗಲಿದೆ ಎಂದು ತಿಳಿಸಿದರು.

ಜನಗಣತಿ, ಕ್ಷೇತ್ರ ವಿಂಗಡಣೆ ಕಾರ್ಯ ಈ ವರ್ಷ ನಡೆಯುವ ಸಾಧ್ಯತೆ ಇದ್ದು, ದಿವಂಗತ ಸಿ.ಬೈರೇಗೌಡರು ಹಾಗೂ ಅವರ ಪುತ್ರ ಸಚಿವ ಕೃಷ್ಣಬೈರೇಗೌಡರಿಗೆ ರಾಜಕೀಯವಾಗಿ ಅವಕಾಶ ನೀಡಿದ ವೇಮಗಲ್ ಕ್ಷೇತ್ರ ಮರಳಿ ಪಡೆಯುವ ಹಂತದಲ್ಲಿ ಪ್ರಯತ್ನ ನಡೆಸಬೇಕು ಎಂದು ಕೃಷ್ಣಬೈರೇಗೌಡರಿಗೆ ಮನವಿ ಮಾಡಿದರು.

ರಮೇಶ್‌ಕುಮಾರ್ ಅವರಿಗೆ ಕಳೆದ ಚುನಾವಣೆಯಲ್ಲಿ ಆದ ಸೋಲು ಇಡೀ ಕರ್ನಾಟಕದ ಪ್ರಗತಿಗೆ ಆದ ಸೋಲು ಎಂದ ಅವರು, ವಿಷಯ, ಸನ್ನಿವೇಶ, ವ್ಯಕ್ತಿಗಳ ಮೇಲೆ ರಾಜಕಾರಣ ಬದಲಾಗುತ್ತಾ ಹೋಗುತ್ತದೆ ಎಂದು ತಿಳಿಸಿದರು.

ಕೋಲಾರ ಕ್ಷೇತ್ರದಲ್ಲಿ ೨೦೦೪ರಲ್ಲಿ ರಾಜಕೀಯ ಧ್ರುವೀಕರಣದಿಂದಾಗಿ ಜನತಾಪರಿವಾರದ ನಾಯಕರು ಕಾಂಗ್ರೆಸ್‌ಗೆ ಬಂದರು ಆಗ ನಾಯಕರು ಒಂದಾದರೂ ಕಾರ್ಯಕರ್ತರು ಒಂದಾಗಲಿಲ್ಲ, ಇದು ವರ್ತೂರು ಪ್ರಕಾಶ್‌ಗೆ ಲಾಭ ಮಾಡಿಕೊಟ್ಟಿತು ಎಂದು ಸ್ಮರಿಸಿದರು.

ಚಿತ್ರ ೧೫ ಕೆ.ಎಲ್.ಆರ್. ೦೫ : ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ರವರ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net