

ಗುಂಡ್ಲುಪೇಟೆಯ ದುಂದಾಸನಪುರ ಹೊಸೂರು ರಸ್ತೆಯಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ (ಜಿಟಿಟಿಸಿ) ಡಿಪ್ಲೊಮಾ ಇನ್ ಎಲೆಕ್ಟಿಕಲ್ ಆಂಡ್ ಎಲೆಕ್ಟೋನಿಕ್ಸ್ ಇಂಜಿನಿಯರಿoಗ್ ಮತ್ತು ಡಿಪ್ಲೊಮಾ ಇನ್ ಮೆಕಾಟ್ರಾನಿಕ್ಸ್ ಕೋರ್ಸ್ಗಳ 2025-26ನೇ ಸಾಲಿನ ಪ್ರವೇಶಾತಿಯು ಪ್ರಾರಂಭವಾಗಿದೆ.
ಕೋರ್ಸ್ ಮುಗಿಸಿದ ಬಳಿಕ ಪ್ರತಿಷ್ಠಿತ ಕಂಪನಿಗಳಾದ ಟಯೋಟ, ಇಂಡೋಮಿಮ್, ಟಫೆ, ಇನ್ಫೋಸಿಸ್, ವಿಪ್ರೋ, ಟಿಸಿಎಸ್ ಮುಂತಾದ ಕಂಪನಿಗಳಲ್ಲಿ ಉದ್ಯೋಗ ಅವಕಾಶವಿದೆ. ಕೋರ್ಸ್ಗಳ ಪ್ರವೇಶಾತಿಗೆ ಎಸ್.ಎಸ್.ಎಲ್.ಸಿ ಪಾಸ್ ಅಥವಾ ಪಿಯುಸಿ ಪಾಸ್/ಫೇಲ್ ಆದ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ. ಈ ಕೋರ್ಸ್ಗಳು ಕೌಶಲ್ಯಭಿವೃದ್ಧಿಗೆ ಸಂಬoಧಿಸಿದ್ದಾಗಿದ್ದು ಶೇ. 30/- ರಷ್ಟು ಥಿಯರಿ, ಶೇ 70/- ರಷ್ಟು ಪ್ರಾಕ್ಟಿಕಲ್ ಕೋರ್ಸ್ಗಳಾಗಿವೆ. ಈ ಕೋರ್ಸ್ ಅಧ್ಯಾಯನ ಮಾಡುವಾಗ 3 ವರ್ಷಗಳ ಡಿಪ್ಲೊಮಾ ತರಬೇತಿಯ ನಂತರ ಕಡ್ಡಾಯ ಒಂದು ವರ್ಷದ ಇಂಟರ್ನ್ ಶಿಪ್ ತರಬೇತಿ ನೀಡಲಾಗುತ್ತದೆ. ಈ ಸಮಯದಲ್ಲಿ ವಿದ್ಯಾರ್ಥಿಗೆ ಪ್ರತಿ ತಿಂಗಳು 20,000 ವರೆಗೆ ಶಿಷ್ಯ ವೇತನ ನೀಡಲಾಗುತ್ತದೆ. ಡಿಪ್ಲೊಮಾ ಇನ್ ಎಲೆಕ್ಟಿಕಲ್ ಆಂಡ್ ಎಲೆಕ್ಟೋನಿಕ್ಸ್ ಇಂಜಿನಿಯರಿoಗ್ ವಿಭಾಗದಲ್ಲಿ 25 ಸೀಟುಗಳು ಮತ್ತು ಡಿಪ್ಲೊಮಾ ಇನ್ ಮೆಕಾಟ್ರಾನಿಕ್ಸ್ ವಿಭಾಗದಲ್ಲಿ 30 ಸೀಟುಗಳು ಲಭ್ಯವಿರುತ್ತದೆ.
ಜಿ.ಟಿ.ಟಿ.ಸಿ ಯಲ್ಲಿ ಲಭ್ಯವಿರುವ ಧೀರ್ಘಾವಧಿ ಕೋರ್ಸ್ಗಳು: ಡಿಪ್ಲೋಮಾ ಇನ್ ಮೆಕಾಟ್ರೋನಿಕ್ಸ್, 3+1 ವರ್ಷ ತರಬೇತಿ ಅವಧಿ, 30 ಸೀಟುಗಳು ಉಳೀದಿರುತ್ತದೆ. ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು, ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿoಗ್ 3+1 ವರ್ಷ ತರಬೇತಿ ಅವಧಿ, 25 ಸೀಟುಗಳು ಉಳೀದಿರುತ್ತದೆ. ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು, DIDM/DEEE (ಪಾರ್ಶ್ವ ಪ್ರವೇಶಾತಿ) 2+1 ವರ್ಷ ತರಬೇತಿ ಅವಧಿ, 12 ಸೀಟುಗಳು ಉಳಿದಿರುತ್ತದೆ. ಪಿಯುಸಿ (Science)/ITI ಉತ್ತೀರ್ಣರಾಗಿರಬೇಕು.
ಅಲ್ಪಾವಧಿ ಕೋರ್ಸ್ಗಳು: ಟೂರ್ ರೂಂ ಮಿಷನಿಸ್ಟ್ ಕೋಸ್ ðನಲ್ಲಿ 11 ಉಳಿಕೆ ಸೀಟುಗಳು ಇದ್ದು, 1 ವರ್ಷ ಅವಧಿಗೆ ತರಬೇತಿಯನ್ನು ನೀಡಲಾಗುತ್ತದೆ. ಇತರೆ ಅಲ್ಪವಧಿ ಕೋರ್ಸ್ಗಳನ್ನು 3 ತಿಂಗಳು, 6 ತಿಂಗಳು ಅವಧಿಗೆ ತರಬೇತಿ ನೀಡಲಾಗುತ್ತದೆ. ಎಸ್.ಎಸ್.ಎಲ್.ಸಿ ಉತ್ತೀರ್ಣ/ಅನುತ್ತೀರ್ಣರಾಗಿರಬೇಕು.
ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಮೂರು ಭಾವಚಿತ್ರಗಳು, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ವರ್ಗವಣೆ ಪ್ರಮಾಣ ಪತ್ರ TC, ವ್ಯಾಸಂಗ ಪ್ರಮಾಣ ಪತ್ರ, ದಾಖಲೆಗಳನ್ನು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲರು ಮೊ. 9945479700 ಹಾಗೂ ಪ್ರವೇಶಾತಿ ಮಾಹಿತಿಗಾಗಿ ದೂ.ಸಂ: 8147384716, 8861412626, 9164261642 ನ್ನು ಸಂಪರ್ಕಿಸಬಹುದು ಎಂದು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲರಾದ ವಿನಯ್ ಎಸ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.