ವಿಜಯವಾಣಿ ಸುದ್ದಿಜಾಲ ಕೋಲಾರ
ಗ್ರಾಮೀಣ ಪ್ರದೇಶದ ಬಡವರಿಗೆ ಕೈಗೆಟಕುವ ದರದಲ್ಲಿ ಅತ್ಯುತ್ತಮ ಆರೋಗ್ಯ ಸೇವೆಯನ್ನು ಒದಗಿಸುತ್ತಿರುವ ಹಿನ್ನಲೆಯಲ್ಲಿ ಕೋಲಾರದ ಟಮಕದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ವೈದ್ಯಕೀಯ ರಂಗದಲ್ಲಿ ರಾಷ್ಟçಪ್ರಶಸ್ತಿ ಲಭಿಸಿದೆ.
ನವದೆಹಲಿಯ ಏರೋಸಿಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದೆಹಲಿ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಸಚಿವ ರವೀಂದ್ರಸಿAಗ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ರಾಷ್ಟçದ ಪ್ರತಿಷ್ಟಿತ ಸಂಸ್ಥೆಯಾದ ವಾಯ್ಸ್ ಆಫ್ ಹೆಲ್ತ್ ಕೇರ್ ಅವರು ಆಯೋಜಿಸಿದ್ದ ಸ್ವರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳ ನೂರಾರು ಆಸ್ಪತ್ರೆಗಳು ಭಾಗವಹಿಸಿ ಪೈಪೋಟಿ ನೀಡಿದ್ದವು.
ಗ್ರಾಮೀಣ ವಿಭಾಗದ ಮತ್ತು ಬಡವರ್ಗದವರ ಸೇವೆಯನ್ನು ಸಮರ್ಪಕವಾಗಿ ಅಧ್ಯಯನ ಮಾಡಿ ಉತ್ತಮ ಚಿಕಿತ್ಸೆಯನ್ನು ನೀಡುತ್ತಿರುವ ಸಲುವಾಗಿ ಹಾಗೂ ಬಹು ರಿಯಾಯಿತಿ ದರದಲ್ಲಿ ಕ್ಯಾನ್ಸರ್, ಡಯಾಲಿಸಿಸ್, ಅಪಘಾತ ವಿಭಾಗ, ಜಿನೋಮ್, ಇನ್ಫೆಕ್ಷನ್ ನಿಯಂತ್ರಣ ಮತ್ತು ತುರ್ತುಚಿಕಿತ್ಸೆಯನ್ನು ನಿಖರ, ನವೀನತೆ ಹಾಗೂ ವ್ಯಕ್ತಿಗತ ವೈದ್ಯಕೀಯ ಸೇವೆಗಳನ್ನು ನೀಡುತ್ತಿರುವ ಸಲುವಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಜಾಲಪ್ಪ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಜೆ.ಕೃಷ್ಣಪ್ಪ, ಉಪ ವೈದ್ಯಕೀಯ ಅಧೀಕ್ಷಕರುಗಳಾದ ಡಾ.ದಿನೇಶ್ ಕಾರ್ತಿಕ್ ಹಾಗೂ ಡಾ. ಎಂ.ಜಿ.ರಾಜ್‌ಕುಮಾರ್ ಈ ಉನ್ನತ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿದರು.
ಶ್ರೀ ದೇವರಾಜ್ ಅರಸ್ ಉನ್ನತ ಸಂಸ್ಥೆಯ ಅಡಳಿತ ಮಂಡಳಿಯ ಪ್ರೋತ್ಸಾಹ ಹಾಗೂ ಆಸ್ಪತ್ರೆಯ ವೈದ್ಯರು, ಎಲ್ಲಾ ಸಿಬ್ಬಂದಿಯ ಸಂಯುಕ್ತ ಪ್ರಯತ್ನದ ಫಲವಾಗಿ ಈ ಪ್ರಶಸ್ತಿ ಲಭಿಸಿದೆ ಮತ್ತು ತಾಂತ್ರಿಕವಾಗಿ ಪರಿಷ್ಕೃತ ಮತ್ತು ಕಾಳಜಿಯ ಆರೋಗ್ಯ ಸೇವೆಗಳನ್ನು ರೂಪಿಸುವತ್ತ ಸದಾ ಶ್ರಮಿಸುತ್ತಿದೆ ಎಂದು ವೈದ್ಯಕೀಯ ಅಧೀಕ್ಷಕ ಜೆ.ಕೃಷ್ಣಪ್ಪ ತಿಳಿಸಿದ್ದಾರೆ.
ಚಿತ್ರ ೨೨ ಕೆ.ಎಲ್.ಆರ್. ೦೨ : ದೆಹಲಿಯಲ್ಲಿ ರಾಷ್ಟçದ ಪ್ರತಿಷ್ಟಿತ ಸಂಸ್ಥೆಯಾದ ವಾಯ್ಸ್ ಆಫ್ ಹೆಲ್ತ್ ಕೇರ್ ರವರು ಆಯೋಜಿಸಿದ್ದ ಸ್ಪರ್ಧೆಯಲ್ಲಿ ರಾಷ್ಟçಪ್ರಶಸ್ತಿಯನ್ನು ಸ್ವೀಕರಿಸಿದ ಜಾಲಪ್ಪ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಜೆ.ಕೃಷ್ಣಪ್ಪ ಮತ್ತು ಉಪಾಧ್ಯಕ್ಷ ಡಾ.ದಿನಾಶ್ ಕಾರ್ತಿಕ್ ಮುಂತಾದವರು ಇದ್ದರು.