ಜಾನುವಾರುಗಳಿಗೆ ಕಾಲುಬಾಯಿ ಲಸಿಕೆ

30ldh2 animal
ನಂದಿಟ್ಟಲು ಪಶು ಚಿಕಿತ್ಸಾಲಯ ವ್ಯಾಪ್ತಿಯ ಜಯಪುರ ಗ್ರಾಮದಲ್ಲಿ ಪಶು ಚಿಕಿತ್ಸಕಿ ಸುಚಿತ್ರಾ ಜಾನುವಾರುಗಳಿಗೆ ಕಾಲುಬಾಯಿ ಜ್ವರದ ಲಸಿಕೆ ನೀಡಿದರು.
Published on

ಲಿಂಗದಹಳ್ಳಿ: ತರೀಕೆರೆ ತಾಲೂಕು ವ್ಯಾಪ್ತಿಯ ಜಾನುವಾರುಗಳಿಗೆ ಮೊದಲ ಸುತ್ತಿನ ಕಾಲುಬಾಯಿ ಜ್ವರದ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದ್ದು, ಎಲ್ಲ ಹೈನುಗಾರರೂ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕೆಂದು ತಾಲೂಕು ಪಶು ವೈದ್ಯ ಇಲಾಖೆ ಉಪನಿರ್ದೇಶಕ ಡಾ. ದೇವೆಂದ್ರಪ್ಪ ತಿಳಿಸಿದರು.

ನಂದಿಬಟ್ಟಲು ಪಶು ಚಿಕಿತ್ಸಾಲಯ ವ್ಯಾಪ್ತಿಯ ಗ್ರಾಮಗಳ ಜಾನುವಾರುಗಳಿಗೆ ಕಾಲುಬಾಯಿ ಲಸಿಕಾ ಔಷಧಗಳ ಕಿಟ್‌ಗಳನ್ನು ವೈದ್ಯರಿಗೆ ವಿತರಿಸಿ ಮಾತನಾಡಿದ ಅವರು, ತರೀಕೆರೆ ತಾಲೂಕಿನಲ್ಲಿ ಭದ್ರಾ ಅಭಯಾರಣ್ಯ ತಣಿಗೆಬೈಲು ಮತ್ತು ಲಕ್ಕವಳ್ಳಿ ವಲಯ ಅರಣ್ಯಗಳಿದ್ದು ಸಹಜವಾಗಿ ವನ್ಯಪ್ರಾಣಿಗಳಿಂದ ಸಾಕುಪ್ರಾಣಿಗಳಿಗೆ, ಸಾಕುಪ್ರಾಣಿಗಳಿಂದ ವನ್ಯಪ್ರಾಣಿಗಳಿಗೆ ರೋಗಗಳು ಹರಡುವ ಸಂಭವವವಿದೆ. ಹೀಗಾಗಿ ಹೈನುಗಾರರು ಜಾನುವಾರುಗಳಿಗೆ ಸರ್ಕಾರ ನೀಡುವ ಉಚಿತ ಕಾಲುಬಾಯಿ ಲಸಿಕೆಗಳನ್ನು ಹಾಕಿಸಬೇಕು ಎಂದು ತಿಳಿಸಿದರು. ನಂದಿಬಟ್ಟಲು ಪಶು ಚಿಕಿತ್ಸಾಲಯದ ನಿರೀಕ್ಷಕ ಸಕ್ರಾನಾಯ್ಕ, ಸಿಬ್ಬಂದಿ ಸುಚಿತ್ರಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net