ಜಾನಪದ ಅತ್ಯಂತ ಶ್ರೀಮಂತ ಸಾಹಿತ್ಯ

19sri-2 janapada
ನೇರಳಕುಡಿಗೆ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ ಉದ್ಘಾಟಿಸಿದರು. ಆನಂದಸ್ವಾಮಿ, ರಮೇಶ್ ಶೂನ್ಯ, ಕೌಸ್ತುಭಾ, ಮಂಜುನಾಥ್ ಇದ್ದರು.
Published on

ಶೃಂಗೇರಿ: ಜಾನಪದ ಅತ್ಯಂತ ಶ್ರೀಮಂತವಾದ ಸಾಹಿತ್ಯ. ಜಾನಪದ ಸಂಸ್ಕೃತಿಯ ವಿವಿಧ ಪ್ರಕಾರಗಳು ಜಾನಪದ ವೃದ್ಧಿಗೆ ಪೂರಕ. ಕಂಸಾಳೆ, ಡೊಳ್ಳುಕುಣಿತ, ನಂದಿಕೋಲು, ವೀರಗಾಸೆ ಸಂಸ್ಕೃತಿಯ ಅಸ್ಮಿತೆಯಾಗಿದ್ದು ಜನಪದ ಕಲೆಗಳನ್ನು ಜತನವಾಗಿ ಕಾಪಾಡುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಗೌರವಾಧ್ಯಕ್ಷೆ ಕೌಸ್ತುಭಾ ಎಂ. ಭಟ್ ತಿಳಿಸಿದರು.

ತಾಲೂಕು ಕಸಾಪ ಮಂಗಳವಾರ ನೇರಳಕುಡಿಗೆ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ನಂದೊಳ್ಳಿ ಎನ್.ಸಿ.ಪ್ರದೀಪ್ ಸ್ಮರಣಾರ್ಥ ಆಯೋಜಿಸಿದ್ದ ದತ್ತಿ ಉಪನ್ಯಾಸದಲ್ಲಿ ಜಾನಪದ ಸಾಹಿತ್ಯ ವೃದ್ಧಿ ವಿಷಯ ಕುರಿತು ಮಾತನಾಡಿದರು.

ಜಾನಪದ ಸಂಸ್ಕೃತಿಯ ಭಾಗ. ನಾಡಿನ ವಿವಿಧ ಪ್ರದೇಶಗಳ ಸೊಗಡುಗಳು ಜನಪದ ಸಾಹಿತ್ಯದಲ್ಲಿ ಅಡಕವಾಗಿವೆ. ಪಾಶ್ಚಾತ್ಯ ಶೈಲಿಯ ಸಂಗೀತದ ನಡುವೆಯೂ ಜನಪದ ಗೀತೆಗಳ ವೈಭವ ಮರೆಯಾಗದೆ ಹಳ್ಳಿಗಳಲ್ಲಿ ಇನ್ನೂ ನೆಲೆಯನ್ನು ಭದ್ರವಾಗಿ ಉಳಿಸಿಕೊಂಡಿದೆ ಎಂದರು.

ರಾಗಿ ಬೀಸೋ ಹಾಡು, ಸುಗ್ಗಿ ಹಾಡುಗಳು ಹೀಗೆ ಜನಪದ ಗೀತೆಗಳು ಜನರ ದೈನಂದಿನ ಚಟುವಟಿಕೆ, ಕೌಟುಂಬಿಕ ಬದುಕಿನ ಬಾಂಧವ್ಯ ಹಾಗೂ ಧಾರ್ಮಿಕ ಆಚರಣೆಗಳನ್ನು ನಮ್ಮ ಮುಂದೆ ತೆರೆದಿಡುತ್ತವೆ. ಜನಪದ ಸಾಹಿತ್ಯದ ಪ್ರತಿ ಪದವೂ ಸಾಮಾನ್ಯ ಜನರ ನಡುವೆ ಹುಟ್ಟಿಕೊಂಡು ಬಾಯಿಂದ ಬಾಯಿಗೆ ಹರಿದುಬಂದಂತಹ ಸಿರಿನುಡಿ ಎಂದು ತಿಳಿಸಿದರು.

ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ, ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಿ, ಕಿಗ್ಗಾ ಹೋಬಳಿ ಘಟಕದ ಅಧ್ಯಕ್ಷ ಎಚ್.ಟಿ.ಮಂಜುನಾಥ್, ಸಾಹಿತಿ ಲಕ್ಷ್ಮೀನಾರಾಯಣ್, ಬಾಲಕಿಯರ ವಿದ್ಯಾರ್ಥಿನಿಲಯದ ಮೇಲ್ವಿಚಾರಕ ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net