

ಶೃಂಗೇರಿ: ಮಲೆನಾಡಿನ ರಂಗಕರ್ಮಿ ಶೃಂಗೇರಿಯ ರಮೇಶ್ ಬೇಗಾರು ರಚಿಸಿ ನಿರ್ದೇಶಿಸುತ್ತಿರುವ ಜಲಪಾತ ಚಲನಚಿತ್ರದ ಥೀಮ್ ಸಾಂಗ್ ಮೇದಿನಿಗೂ ಮಾತಿದೆ-ನಮ್ಮ ಭಾವ ಸೋತಿದೆ ಸೋಮವಾರ ಎ-2 ಮ್ಯೂಸಿಕ್ ವಾಹಿನಿಯಲ್ಲಿ ಬೆಂಗಳೂರಿನಲ್ಲಿ ಬಿಡುಗಡೆಗೊಂಡಿದೆ.
ಪ್ರಕೃತಿ ನಮಗೆ ನೀಡಿದ ಕೊಡುಗೆ ಹಾಗೂ ಪ್ರಕೃತಿಗೆ ನಾವು ನೀಡುವ ಕೊಡುಗೆಯನ್ನು ಬಿಂಬಿಸುವ ಪರಿಸರದ ಅರಿವಿನ ಹಾಡು ಇದಾಗಿದ್ದು ಗಾಯಕಿ ಸಾದ್ವಿನಿ ಕೊಪ್ಪ ಅವರ ಸಂಗೀತ ನಿರ್ದೇಶನದಲ್ಲಿ ಗಾಯಕ ವಿಜಯಪ್ರಕಾಶ್ ಹಾಡಿದ್ದಾರೆ.
ವಿಜಯ್‌ಪ್ರಕಾಶ್ ಮಾತನಾಡಿ, ಜಲಪಾತ ಒಂದು ಸದಭಿರುಚಿಯ ಚಿತ್ರ. ಪ್ರಸ್ತುತ ಕಾಲಘಟ್ಟಕ್ಕೆ ಅತ್ಯಂತ ವಿಶೇಷ ಸಂದೇಶವನ್ನು ನೀಡುತ್ತಿದ್ದು ಸರ್ವರಲ್ಲೂ ಪರಿಸರ ಜಾಗೃತಿ ಮೂಡಬೇಕಿದೆ ಎಂದರು.
ಸಂಗೀತ ನಿರ್ದೇಶಕಿ ಸಾದ್ವಿನಿ ಕೊಪ್ಪ ಮಾತನಾಡಿ, ಗೀತೆಗೆ ಸೂಫಿ ಶೈಲಿಯ ಆರಂಭ ಒದಗಿಸಿ ಬಳಿಕ ಸಮೂಹ ಸೆಳೆಯುವ ರೀತಿ ಕೋರಸ್, ಸ್ವರಪ್ರಸಾರದಂತಹ ಪ್ರಾಯೋಗಿಕ ಅಂಶಗಳಿಂದ ಅಲಂಕರಿಸಿದ್ದೇನೆ ಎಂದು ತಿಳಿಸಿದರು.
ನಿರ್ಮಾಪಕ ಟಿ.ಸಿ.ರವೀಂದ್ರ, ನಿರ್ದೇಶನ ರಮೇಶ್ ಬೇಗಾರು ಹಾಗೂ ಮಲೆನಾಡಿನ ಉದಯೋನ್ಮುಖ ಕಲಾವಿದರು ನಟಿಸಿದ ಚಿತ್ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಆಗಲಿದೆ.