ಜನಮಾನಸದಲ್ಲಿ ನೆಲೆಸಿರುವ ಮಹಾಕಾವ್ಯರಾಮಾಯಣ

SBR-Valmiki jayanthi photo
Published on

ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ
ಶ್ರೀ ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣ ನಮ್ಮ ನೆಲದ ಮೊದಲ ಮಹಾಕಾವ್ಯವಾಗಿದ್ದು,ಇಂದಿಗೂ ಅದು ಜನಮಾನಸದಲ್ಲಿ ನೆಲೆಸಿದೆ ಎಂದು ಡಯಟ್ ಪ್ರಾಂಶುಪಾಲ ಎಸ್.ಕೆ.ಬಿ.ಪ್ರಸಾದ್ ಹೇಳಿದರು.
ಡಯಟ್‌ನಲ್ಲಿ ಶನಿವಾರ ಆಯೋಜಿಸಿದ್ದ ಶ್ರೀ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ,ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ,ವಿಶ್ವದ ಸರ್ವೋತ್ಕೃಷ್ಟ ಕಾವ್ಯಗಳಲ್ಲಿ ಒಂದಾಗಿರುವ ರಾಮಾಯಣ,ಭಾರತದ ಸಾಂಸ್ಕೃತಿಕ ಹಿರಿಮೆ ಸಾರುತ್ತಾ ಬಂದಿದೆ. ಜೀವನ ಮೌಲ್ಯಗಳ ಸಂದೇಶ ಸಾರುವಂಥ ಕಾವ್ಯ ಇದಾಗಿದೆ. ವಾಲ್ಮೀಕಿ,ತಾತ್ವಿಕತೆ,ಆದರ್ಶ ಮತ್ತು ಸಮನ್ವಯತೆಯನ್ನು ಒಳಗೊಂಡಿರುವ ಕವಿಯಾಗಿದ್ದಾರೆ. ಶ್ರೀರಾಮ-ಲಕ್ಮಣರ ಸಹೋದರತ್ವ, ಪಿತೃ ವಾಕ್ಯ ಪರಿಪಾಲನೆ,ದಾಂಪತ್ಯ ಧರ್ಮ ಮೊದಲಾದ ಮೌಲ್ಯಗಳು ನಮ್ಮ ಬದುಕಿಗೆ ರಾಮಾಯಾಣ ಉಣಬಡಿಸುತ್ತದೆ. ಸಾರ್ವಕಾಲಿಕ ಸತ್ಯ ವನ್ನು ಒಳಗೊಂರುವ ಈ ಕೃತಿಯಲ್ಲಿರುವ ಅಂಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಹಸನಾಗುತ್ತದೆ ಎಂದರು. ಉಪನ್ಯಾಸಕರು,ಕಚೇರಿ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net