

ಎನ್.ಆರ್.ಪುರ: ನಾವು ನಮಗಾಗಿ ಬದುಕುವುದಲ್ಲ. ಬೇರೆಯವರಿಗಾಗಿ ಬದುಕುವುದಾಗಿದೆ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಹೇಳಿದರು.
ಇಲ್ಲಿನ ಲಿಟ್ಲ್ ್ಲವರ್ ಹಾಲ್‌ನಲ್ಲಿ ಶನಿವಾರ ಎಚ್.ಟಿ.ರಾಜೇಂದ್ರ ಅವರಿಗೆ 50ಕ್ಕೂ ಹೆಚ್ಚು ಸಂಘಸಂಸ್ಥೆಗಳಿಂದ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ‘ಧ್ರುವತಾರೆ ರಾಜೇಂದ್ರ ಬಾಳ ನೆನಪಿನ ಹನಿಗಳು’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ರಾಜೇಂದ್ರ ಅವರು ಬೇರೆಯವರಿಗಾಗಿ ಬದುಕಿದವರು. ಮರಣ ಹೊಂದುವುದು ಅನಿವಾರ್ಯ. ಪ್ರತಿಯೊಬ್ಬರ ಬದುಕಿನಲ್ಲೂ ಇದು ಬರುವಂಥದ್ದು. ಮರಣದಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಜನಪ್ರಿಯತೆ ವ್ಯಕ್ತಿತ್ವದಿಂದ ಬರುವಂಥದ್ದು ಅಧಿಕಾರದಿಂದಲ್ಲ ಎಂಬುದಕ್ಕೆ ರಾಜೇಂದ್ರ ಅವರ ಅಂತ್ಯಸಂಸ್ಕಾರದ ಮೆರವಣಿಗೆಯಲ್ಲಿ ಸೇರಿದ್ದ ಜನಸ್ತೋಮವೇ ಸಾಕ್ಷಿ ಎಂದರು.
ಜನತಾ ಪರಿವಾರದ ಪ್ರಮುಖರ ಸಂಪರ್ಕವಿದ್ದ ರಾಜೇಂದ್ರ ಅವರಿಗೆ ಶಾಸಕರಾಗಲು ಸಾಧ್ಯವಿತ್ತು. ರಾಜೇಂದ್ರ ಅವರು ಲೋಹಿಯಾ ಸಿದ್ಧಾಂತದಿಂದ ಆಕರ್ಷಿತರಾದವರು. ಕುವೆಂಪು ಅವರ ಸಿದ್ಧಾಂತ ಮತ್ತು ಸಾಹಿತ್ಯ ಅಪ್ಪಿಕೊಂಡವರು. ಕಡಿದಾಳ್ ಮಂಜಪ್ಪ, ಶಾಂತವೇರಿ ಗೋಪಾಲಗೌಡರ ಚಿಂತನೆಗಳನ್ನು ಅಳವಡಿಸಿಕೊಂಡಿದ್ದರು. ಅವರು ಅಧಿಕಾರಕ್ಕಾಗಿ ಹಪಹಪಿಸದೆ ಒಂದೇ ದಾರಿಯಲ್ಲಿ ಹೋಗುವ ಪ್ರಯತ್ನ ಮಾಡಿದವರು ಎಂದು ಬಣ್ಣಿಸಿದರು.
ರೋಮನ್ ಕ್ಯಾಥೋಲಿಕ್ ಚರ್ಚ್‌ನ ಾದರ್ ಟಿನೋ, ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ, ಎಸ್.ಎಸ್.ಶಾಂತಕುಮಾರ್, ವಿವಿಧ ಸಂಘ ಸಂಸ್ಥೆಗಳ ಮಂಜು ಎನ್.ಗೌಡ, ಜಗದೀಶ್, ಎನ್.ಎಂ.ಕಾಂತರಾಜ್, ಕಣಿವೆ ವಿನಯ, ಆಬೀದ್, ಜೋಸ್, ಹಷರ್, ಪಿ.ಆರ್.ಸದಾಶಿವ, ಮನೋಹರ, ಜುಬೇದಾ, ಪುಸ್ತಕದ ಲೇಖಕ ಪಿ.ಕೆ.ಬಸವರಾಜಪ್ಪ ಇದ್ದರು.