ಜ.8 ಮತ್ತು 9ರಂದು ಹೈ ಲೈಫ್ ವಸ್ತುಪ್ರದರ್ಶನ

Business Guidance Questions
Business guidance questions and career path as a business person walking to a crossroad highway with two clouds shaped as arrows pointing in opposite directions on a blue summer sky and grass representing financial advice guide and looking for answers.
Published on

ಹೊಸ ವರ್ಷಾರಂಭದಲ್ಲಿ ಹೆಂಗಳೆಯರ ನೆಚ್ಚಿನ ವಿನ್ಯಾಸದ ವಸ್ತ್ರಗಳು, ಆಭರಣಗಳನ್ನು ಒಂದೇ ಸೂರಿನಡಿ ದೊರಕಿಸುವ ಉದ್ದೇಶದಿಂದ ನಗರದ ರ‌್ಯಾಡಿಸನ್ ಬ್ಲ್ಯೂ ಪ್ಲಾಜಾ ಹೋಟೆಲ್‌ನಲ್ಲಿ ಜ.8 ಮತ್ತು 9ರಂದು ಹೈ ಲೈಫ್ ವಸ್ತುಪ್ರದರ್ಶನ ಆಯೋಜಿಸಲಾಗಿದೆ ಎಂದು ಆಯೋಜಕಿ ಶೌಮಿಕಾ ತಿಳಿಸಿದರು.

ಮಹಿಳಾ ಉದ್ಯಮಿಗಳನ್ನೇ ದೃಷ್ಟಿಯಲ್ಲಿಟ್ಟುಕೊಂಡು ಈ ಪ್ರದರ್ಶನ ಆಯೋಜಿಸಲಾಗಿದೆ. ಪ್ರದರ್ಶನ ಬೆಳಗ್ಗೆ 10 ರಿಂದ ರಾತ್ರಿ 9 ಗಂಟೆವರೆಗೆ ಇರಲಿದ್ದು, ಸುಮಾರು 70 ಮಳಿಗೆಗಳಲ್ಲಿ ದೇಶದ ಬೇರೆ ಬೇರೆ ನಗರಗಳ ವಿಶಿಷ್ಟ ವಿನ್ಯಾಸದ ವಸ್ತ್ರಗಳು, ಆಭರಣಗಳು, ಮಕ್ಕಳ ಉಡುಪುಗಳು 100 ರೂ.ಗಳಿಂದ 20 ಸಾವಿರ ರೂ.ಗಳವರೆಗೂ ದೊರೆಯಲಿವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net