ಛಾಯಾಗ್ರಹಣ ಐತಿಹಾಸಿಕ ದಾಖಲೆ ಸೃಷ್ಟಿಸುವ ಮಾಧ್ಯಮ

20bhr 1 photo
ಬಾಳೆಹೊನ್ನೂರಿನ ಜೆಸಿಐ ಆಯೋಜಿಸಿದ್ದ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಛಾಯಾಗ್ರಾಹಕರಾದ ದಯಾಕರ್ ನಾ. ಸುವರ್ಣ, ಚೇತನ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಇಬ್ರಾಹಿಂ ಶಾಫಿ, ವಿ.ಅಶೋಕ್, ಚೈತನ್ಯ ವೆಂಕಿ, ಸುರೇಂದ್ರ, ಸುಧಾಕರ್, ಸತೀಶ್ ಇದ್ದರು.
Published on

ಬಾಳೆಹೊನ್ನೂರು: ಒಂದು ಚಿತ್ರವು ಸಾವಿರ ಕಥೆ ಹೇಳುವ ಸಾಮರ್ಥ್ಯ ಹೊಂದಿದ್ದು ಛಾಯಾಗ್ರಹಣ ಐತಿಹಾಸಿಕ ದಾಖಲೆ ಸೃಷ್ಟಿಸುವ ಅದ್ಭುತ ಮಾಧ್ಯಮ ಎಂದು ಜೆಸಿಐ ಪೂರ್ವಾಧ್ಯಕ್ಷ ಚೈತನ್ಯ ವೆಂಕಿ ಹೇಳಿದರು.

ಜೆಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪದಗಳಲ್ಲಿ ವರ್ಣಿಸಲಾಗದ ಮಾತುಗಳನ್ನು ಕೇವಲ ಒಂದು ಚಿತ್ರ ಹೇಳುತ್ತದೆ. ಒಬ್ಬ ವ್ಯಕ್ತಿಯ ಭವಿಷ್ಯವನ್ನು ನಿರ್ಧರಿಸುವ ಶಕ್ತಿಯೂ ಛಾಯಾಗ್ರಹಣಕ್ಕಿದೆ. ಯಾವುದೇ ಛಾಯಾಚಿತ್ರವು ಸಂಬಂಧಿಸಿದ ವಿಷಯಕ್ಕೆ ಪೂರಕವಾಗಿದ್ದರೆ ಅದಕ್ಕೆ ಹೆಚ್ಚು ಬೆಲೆ ಬರುತ್ತದೆ. ಮುಂದುವರಿದ ತಂತ್ರಜ್ಞಾನದ ಪರಿಣಾಮ ೆಟೋ, ವಿಡಿಯೋ ಕ್ಷೇತ್ರವು ಸಾಕಷ್ಟು ಸಂಕಷ್ಟಗಳನ್ನು ಅನುಭವಿಸುತ್ತಿದ್ದರೂ ಸಹ ತನ್ನದೇ ಆದ ಮಹತ್ವ ಉಳಿಸಿಕೊಂಡಿದೆ ಎಂದರು.

ಮಾಧ್ಯಮ ಕ್ಷೇತ್ರದಲ್ಲಿ ಯಾವುದೇ ಒಂದು ಸುದ್ದಿಗೆ ಒಂದು ಛಾಯಾಚಿತ್ರವಿದ್ದರೆ ಅದರ ಮಹತ್ವ ಮೇರುಮಟ್ಟದಲ್ಲಿರುತ್ತದೆ. ಮೊಬೈಲ್‌ಗಳ ಹಾವಳಿಯಿಂದ ಛಾಯಾಗ್ರಾಹಕರು ಮೂಲೆಗುಂಪಾಗುತ್ತಿದ್ದಾರೆ. ಆದರೂ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಛಾಯಾಗ್ರಾಹಕರು ಸಾಧನೆ ಮಾಡುತ್ತಿದ್ದಾರೆ ಎಂದರು.

ಛಾಯಾಗ್ರಾಹಕರಾದ ದಯಾಕರ್ ನಾ. ಸುವರ್ಣ, ಚೇತನ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಜೇಸಿ ಕಾರ್ಯದರ್ಶಿ ವಿ.ಅಶೋಕ್, ಪೂರ್ವಾಧ್ಯಕ್ಷ ಸುರೇಂದ್ರ, ಸುಧಾಕರ್, ಎ.ಆರ್.ಸುರೇಂದ್ರ, ಸತೀಶ್ ಅರಳೀಕೊಪ್ಪ, ಸದಸ್ಯರಾದ ಬಿ.ಪಿ.ಪ್ರಶಾಂತ್‌ಕುಮಾರ್, ಪ್ರಕಾಶ್ ಮುದುಗುಣಿ, ರಾಮ್‌ಪ್ರಸಾದ್ ಅಯ್ಯಂಗಾರ್, ವಿ.ರೋಹಿತ್, ಯು.ಸಿ.ಪ್ರದೀಪ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net