ಚಿನ್ನಾಭರಣ, ನಗದು ಕಳವು

Crime Logo
Published on

ತಾಲೂಕಿನ ಇಲವಾಲ ಗ್ರಾಮದಲ್ಲಿ ಮನೆ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು, 24 ಲಕ್ಷ ರೂ.ಮೌಲ್ಯದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದಾರೆ.

ಗ್ರಾಮದ ನಿವಾಸಿ ರೇಣುಕಮ್ಮ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ರೇಣುಕಮ್ಮ ಅವರು ಪುತ್ರನೊಂದಿಗೆ ವಾರದ ಹಿಂದೆ ಮನೆ ಬೀಗ ಹಾಕಿ ಕೊಂಡು ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದು, ಗುರುವಾರ ಬೆಳಗ್ಗೆ ಮನೆಗೆ ಬಂದಿದ್ದಾರೆ. ಈ ವೇಳೆ ಮನೆ ಬಾಗಿಲು ತೆರೆದಿದ್ದು, ಕೋಣೆಯ ಬೀರುವಿನಲ್ಲಿದ್ದ 250 ಗ್ರಾಂ ಚಿನ್ನಾಭರಣ, 1.25 ಕೆಜಿ ಬೆಳ್ಳಿ ಪದಾರ್ಥ ಮತ್ತು 3 ಲಕ್ಷ ರೂ. ನಗದು ಕಳವಾಗಿದೆ ಎಂದು ಮನೆ ಮಾಲೀಕರು ದೂರು ನೀಡಿದ್ದು, ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net