

ಚಿತ್ರದುರ್ಗ: ಚಿತ್ರದುರ್ಗ ಎನ್‌ಡಿಎ ಅಭ್ಯರ್ಥಿ ಗೋವಿಂದ ಎಂ.ಕಾರಜೋಳ ಅವರು ಈ ಲೋಕಸಭಾ ಚುನಾವಣೆಯಲ್ಲಿ ಗೆದ್ದರೇ,ನನ್ನನ್ನೇ ಗೆಲ್ಲಿಸಿದಂತೆ ಎಂ ದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.
ನಗರದ ಎಸ್‌ಜೆ ಕನ್ವೇಷನ್‌ಹಾಲ್‌ನಲ್ಲಿ ಮಂಗಳವಾರ ಏರ್ಪಡಿಸಿದ್ದ ಎನ್‌ಡಿಎ ಬೆಂಬಲಿತ ವೀರಶೈವ-ಲಿಂಗಾಯತ ಸಮಾಜದ ಮುಖಂಡರ ಸ ಭೆಯಲ್ಲಿ ಮಾತನಾಡಿದ ಅವರು,ಪ್ರಧಾನಿ ನರೇಂದ್ರಮೋದಿ-ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಒಂದಾಗಿ ಚುನಾವಣೆ ಎ ದುರಿಸುತ್ತಿದ್ದೇವೆ. ತಮ್ಮ ಪ್ರಧಾನಿ ಯಾರೆಂದು ಹೇಳಲು ಧೈರ್ಯ ತೋರದ ಕಾಂಗ್ರೆಸ್ ಚುನಾವಣೆ ಮೊದಲೇ ಸೋಲನ್ನು ಒಪ್ಪಿದೆ. ಹಂಪಿ ಉ ತ್ಸವ ಮಾದರಿ ಚಿತ್ರದುರ್ಗದಲ್ಲಿ ಮದಕರಿ ನಾಯಕರ ಉತ್ಸವ ಮಾಡಲಾಗುವುದು. ಭದ್ರಾ ಮೇಲ್ದಂಡೆ ಯೋಜನೆಗೆ ಮಂಜೂರಾಗಿರುವ 5300 ಕೋಟಿ ರೂ.ಅನುದಾನವನ್ನು ಕೇಂದ್ರದಿಂದ ತರಲಾಗುವುದು.
ಕಿಸಾನ್‌ಸಮ್ಮಾನ್‌ನ 4 ಸಾವಿರ ರೂ.ಸೇರಿ ತಮ್ಮ ಅಧಿಕಾರಾವಧಿ ಜಾರಿಗೊಳಿಸಿದ್ದ ಹಲವು ಯೋಜನೆಗಳನ್ನು ಸ್ಥಗಿತಗೊಳಿಸಿರುವ ಸಿದ್ದರಾಮಯ್ಯ ಸರ್ಕಾರ ದಿವಾಳಿ ಆಗಿದೆ. ಇದು ರೈತ ವಿರೋಧಿ ಸರ್ಕಾರವೆಂದು ಜರಿದ ಅವರು,ಇಲ್ಲಿಹಣ,ಹೆಂಡ,ತೋಳ್ಬಲ ನಡೆಯಲ್ಲವೆಂದು ಕಾಂಗ್ರೆಸ್ಸಿಗರ ನ್ನು ಎಚ್ಚರಿಸಿದರು. ಭವಿಷ್ಯದಲ್ಲೂ ಮುಂದುವರಿಯಲಿರುವ ಜೆಡಿಎಸ್-ಬಿಜೆಪಿ ಮೈತ್ರಿ ಶಕ್ತಿ ತಡೆಯಲು ಯಾರಿಂದಲೂ ಸಾಧ್ಯವಾಗದು. ಮೋದಿ ಅಲೆ ಜೋರಾಗಿದೆ,ಕಾರಜೋಳ ಅವರು 2 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದರು.
ಮಾಜಿ ಸಚಿವ ಮುರುಗೇಶ್‌ನಿರಾಣಿ ಅವರು ಮಾತನಾಡಿ,ಕಾರಜೋಳ ಅವರು ಪುಸ್ತಕ ನೋಡದೆ ಸರ್ವಜ್ಞರ ಹಾಗೂ ಬಸವಣ್ಣವರ ಒಂದು ಸಾ ವಿರಕ್ಕೂ ಅಧಿಕ ವಚನಗಳನ್ನು ಹೇಳುತ್ತಾರೆ. ಮುಧೋಳ-ಬಾಗಲಕೋಟೆಯನ್ನು ಸಿಂಗಾಪುರ ಮಾದರಿ ಅಭಿವೃದ್ಧಿ ಪಡಿಸಿದ್ದಾರೆ ಎಂದರು. ಕ್ಷೇತ್ರ ದ ಚುನಾವಣೆ ಉಸ್ತುವಾರಿ ಎಸ್.ಲಿಂಗಮೂರ್ತಿ ಮಾತನಾಡಿ,ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕಿದೆ ಎಂದರು. ಅಭ್ಯರ್ಥಿ ಗೋವಿಂದ ಎಂ.ಕಾರಜೋಳ,ಎಂಎಲ್‌ಸಿಗಳಾದ ಕೆ.ಎಸ್.ನವೀನ್,ಎನ್.ರವಿಕುಮಾರ್ ಇತರರು ಮಾತ ನಾಡಿದರು. ಸುರೇಶ್‌ಸಿದ್ದಾಪುರ ನಿರೂಪಿಸಿದರು.
ಮಾಜಿ ಶಾಸಕರಾದ ಎಸ್.ಕೆ.ಬಸವರಾಜನ್,ನೇರ‌್ಲ ಗುಂಟೆ ತಿಪ್ಪೇಸ್ವಾಮಿ, ಎಂಎಲ್‌ಸಿಗಳಾದ ಎನ್.ರವಿಕುಮಾರ್,ಕೆ.ಎಸ್.ನವೀನ್ ಹಾಗೂ ಎಸ್.ಲಿಂಗಮೂರ್ತಿ,ಕೆ.ಟಿ.ಕುಮಾರಸ್ವಾಮಿ, ಗನ್ನನಾಯಕಹಳ್ಳಿಮಹೇಶ್, ರೇಣುಕಾಪ್ರಸಾದ್,ಗುರುಸ್ವಾಮಿ,ಎ.ಮುರುಳಿ, ಸುರೇಶ್‌ಸಿದ್ದಾಪುರ, ಮಲ್ಲಿಕಾರ್ಜುನ್,ಸೌಭಾಗ್ಯಬಸವರಾಜನ್,ಮಂಜುನಾಥ್ ಮತ್ತಿತರರು ಇದ್ದರು.