ಚಿಕ್ಕವಡ್ಡರಗುಡಿ ಸಹಕಾರ ಸಂಘಕ್ಕೆ 3.99 ಲಕ್ಷ ರೂ. ಲಾಭ

2
ಗಂಧನಹಳ್ಳಿ ಸಮೀಪದ ಚಿಕ್ಕವಡ್ಡರಗುಡಿ ಗ್ರಾಮದ ಸಂಘದ ಆಡಳಿತ ಕಚೇರಿ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ಅತಿಥಿಗಳು ಉದ್ಘಾಟಿಸಿದರು. ಜಿ.ಆರ್.ಕೃಷ್ಣೇಗೌಡ, ಮಹದೇವನಾಯಕ, ನಾಗಮ್ಮ, ಕಾಮಾಕ್ಷಮ್ಮ, ನಾರಾಯಣ್, ಕೆಂಪೇಗೌಡ, ಸಿ.ರಮೇಶ್‌ಬಾಬು, ವೀರಭದ್ರಸ್ವಾಮಿ, ರಂಗೇಗೌಡ, ಜಿ.ಜೆ.ಮಹದೇವ್, ನಿಂಗಾಜೋಗಿ, ಪದ್ಮಮ್ಮ, ಎಂ.ಸತೀಶ್, ಎಸ್.ಭಾಸ್ಕರ್, ಸಿಬ್ಬಂದಿ ಕೆ.ಎಂ.ಜಯರಾಮು, ಕೆ.ವಿ.ನಂದೀಶ್, ಈಶ್ವರಚಾರ್ ಇತರರು ಇದ್ದರು.
Published on

ಗಂಧನಹಳ್ಳಿ: ಚಿಕ್ಕವಡ್ಡರಗುಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2022-23ನೇ ಸಾಲಿನಲ್ಲಿ 3.99 ಲಕ್ಷ ರೂ. ನಿವ್ವಳ ಲಾಭಗಳಿಸಿದೆ ಎಂದು ಅಧ್ಯಕ್ಷ ಜಿ.ಆರ್.ಕೃಷ್ಣೇಗೌಡ ಹೇಳಿದರು.


ಕೆ.ಆರ್.ನಗರ ತಾಲೂಕು ಚಿಕ್ಕವಡ್ಡರಗುಡಿ ಗ್ರಾಮದ ಸಂಘದ ಆಡಳಿತ ಕಚೇರಿ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿ, ಕಳೆದ ಸಾಲಿನಲ್ಲಿ 8.39 ಕೋಟಿ ರೂ ಕೆಸಿಸಿ ಸಾಲ ವಿತರಿಸಿದ್ದು, ಈ ಬಾರಿ ಹೆಚ್ಚುವರಿಯಾಗಿ 56 ಲಕ್ಷ ರೂ. ಬೆಳೆ ಸಾಲವನ್ನು 87 ಹೊಸ ಸದಸ್ಯರಿಗೆ ನೀಡಲು ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.


ಗಂಧನಹಳ್ಳಿ ಗ್ರಾಮದಲ್ಲಿ ಸಂಘದ ಉಪ ಕಚೇರಿ ಆರಂಭಿಸಲು ಕಳೆದ ಬಾರಿಯ ವಾರ್ಷಿಕ ಸಭೆಯಲ್ಲಿ ತೀರ್ಮಾನಿಸಿ, ಅನುದಾನಕ್ಕಾಗಿ ಜಿಲ್ಲಾ ಬ್ಯಾಂಕ್‌ಗೆ ಮನವಿ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುತ್ತದೆ. ರೈತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಗೊಬ್ಬರ ಮಾರಾಟ ಮಾಡಲು ಕ್ರಮ ವಹಿಸಲಾಗಿದ್ದು ಮಾರ್ಚ್ ವೇಳೆಗೆ ಚಾಲನೆ ನೀಡಲಾಗುತ್ತದೆ ಎಂದರು.


ಸಂಘಕ್ಕೆ ಕಂಚಿನಕೆರೆ, ಬೊಮ್ಮೇನಹಳ್ಳಿ, ಗಂಧನಹಳ್ಳಿ, ಕಾಕನಹಳ್ಳಿ, ಚಿಕ್ಕವಡ್ಡರಗುಡಿ, ಗಂಧನಹಳ್ಳಿಕೊಪ್ಪಲು ಗ್ರಾಮಗಳು ಸೇರಿದ್ದು, 1666 ಷೇರುದಾರ ಸದಸ್ಯರಿದ್ದಾರೆ. ಒಟ್ಟು ಷೇರು ಬಂಡವಾಳ 111.85 ಲಕ್ಷ ರೂ.ಗಳಿದ್ದು, ರೈತರಿಗೆ ಅನುಕೂಲ ನೀಡಬೇಕೆಂಬ ಉದ್ದೇಶದಿಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷದ ವರೆಗೆ ಸಾಲ ನೀಡುವ ಯೋಜನೆ ಜಾರಿ ಮಾಡಿರುವುದರಿಂದ ಸಂಘಕ್ಕೆ ಹೆಚ್ಚು ರೈತರನ್ನು ಸದಸ್ಯರನ್ನಾಗಿ ಮಾಡಲು ಶ್ರಮಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.


ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಪುಷ್ಪಲತಾ ರಮೇಶ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೃಷ್ಣೇಗೌಡ, ಗಂಧನಹಳ್ಳಿ ಗ್ರಾ.ಪಂ. ಉಪಾಧ್ಯಕ್ಷ ಆನಂದ್, ಮುಖಂಡರಾದ ಬುಡಿಗೌಡ, ಜಿ.ಆರ್.ಮಹದೇವ್, ಬಸವರಾಜು, ಎಸ್.ರಾಮು, ಸತೀಶ್, ದೇವರಾಜು, ಜಿ.ಡಿ.ಕುಮಾರ್, ಸಾಹಿತಿ ನಾಗರಾಜು ಮಾತನಾಡಿದರು.


ಉಪಾಧ್ಯಕ್ಷ ಮಹದೇವನಾಯಕ, ನಿರ್ದೇಶಕರಾದ ನಾಗಮ್ಮ, ಕಾಮಾಕ್ಷಮ್ಮ, ನಾರಾಯಣ್, ಕೆಂಪೇಗೌಡ, ಸಿ.ರಮೇಶ್‌ಬಾಬು, ವೀರಭದ್ರಸ್ವಾಮಿ, ರಂಗೇಗೌಡ, ಜಿ.ಜೆ.ಮಹದೇವ್, ನಿಂಗಾಜೋಗಿ, ಪದ್ಮಮ್ಮ, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಎಂ.ಸತೀಶ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಭಾಸ್ಕರ್, ಸಿಬ್ಬಂದಿ ಕೆ.ಎಂ.ಜಯರಾಮು, ಕೆ.ವಿ.ನಂದೀಶ್, ಈಶ್ವರಚಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net