ಚನ್ನಪಟ್ಟಣ ನಗರಸಭೆಗೆ ಅನುಪಮ ಆಯುಕ್ತೆ

Published on


ಚನ್ನಪಟ್ಟಣ :ನಗರಸಭೆ ಪೌರಾಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪುಟ್ಟಸ್ವಾಮಿ ಅವರನ್ನು ವರ್ಗಾವಣೆ ಮಾಡಿದ್ದು, ಇವರ ಸ್ಥಾನಕ್ಕೆ ಅನುಪಮ ಕೆ. ಅವರನ್ನು ಪೌರಾಯುಕ್ತರಾಗಿ ನಿಯೋಜನೆ ಮಾಡಲಾಗಿದೆ.
ನಗರಸಭೆಗಳಿಗೆ ಪೌರಾಯುಕ್ತರಾಗಿ ಕಂದಾಯಾಧಿಕಾರಿಗಳು, ಸಮುದಾಯ ಸಂಘಟಕರು, ಮುಖ್ಯಾಧಿಕಾರಿಗಳನ್ನು ನಿಯೋಜನೆ ಮಾಡಲಾಗಿತ್ತು. ಅರ್ಹರನ್ನು ಈ ಹುದ್ದೆಗೆ ನಿಯೋಜನೆ ಮಾಡುವಂತೆ ಹೈಕೋರ್ಟ್ ನಿರ್ದೇಶನ ನೀಡಿದ ಹಿನ್ನಲೆಯಲ್ಲಿ ಪೌರಾಡಳಿತ ಇಲಾಖೆ ಪೌರಾಯುಕ್ತ ಹುದ್ದೆಯ ಅಧಿಕಾರಿಗಳನ್ನು ನಿಯೋಜನೆ ಮಾಡಿದೆ. ಕೆಲ‌ತಿಂಗಳ‌ಹಿಂದಷ್ಟೇ ಪುಟ್ಟಸ್ವಾಮಿ ಅವರನ್ನು ಪೌರಾಯುಕ್ತರಾಗಿ ನಿಯೋಜನೆ ಮಾಡಲಾಗಿತ್ತು. ನೆರೆ ನಿರ್ವಹಣೆ ಕಾರ್ಯದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದ ಪೌರಯುಕ್ತರು ವರ್ಗಾವಣೆಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net