ಗ್ರಾಮೀಣ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಿ

19hos1p kride
ನಗರ ವಲಯ ಮಟ್ಟದ ಕ್ರೀಡಾಕೂಟವನ್ನು ಗ್ರಾಪಂ ಅಧ್ಯಕ್ಷೆ ಸಂಗೀತಾ ಉದ್ಘಾಟಿಸಿದರು. ಹಾಲಗದ್ದೆ ಉಮೇಶ್, ರಾಮಚಂದ್ರಪ್ಪ, ವಿನಯ ಹೆಗಡೆ ಕರ್ಕಿ, ಗೀತಾ ಬಾಲಚಂದ್ರರಾವ್, ರಾಜುಶೆಟ್ಟಿ ಇತರರಿದ್ದರು.
Published on

ಹೊಸನಗರ: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕ್ರೀಡೆಗೆ ವಿಶೇಷ ಒತ್ತು ನೀಡಬೇಕು ಎಂದು ಮೂಡುಗೊಪ್ಪ ಗ್ರಾಪಂ ಅಧ್ಯಕ್ಷೆ ಸಂಗೀತಾ ಹೇಳಿದರು.

ತಾಲೂಕಿನ ನಗರ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಶ್ರೀ ಅಮೃತ ವಿದ್ಯಾಲಯ, ಶಿಕ್ಷಣ ಇಲಾಖೆ ಆಯೋಜಿಸಿದ್ದ 14 ವಷರ್ದೊಳಗಿನ ನಗರ ವಲಯ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಕ್ರೀಡೆಯ ಬಗ್ಗೆ ಹಿಂಜರಿಕೆ ಬೇಡ. ಪಠ್ಯದ ಜತೆ ಕ್ರೀಡಾ ಕಲಿಕೆಯು ಮಹತ್ವದ್ದಾಗಿದೆ ಎಂದರು.

ಕ್ರೀಡಾ ಜ್ಯೋತಿಯನ್ನು ಪಪಂ ಮಾಜಿ ಅಧ್ಯಕ್ಷ ಹಾಲಗದ್ದೆ ಉಮೇಶ್ ಸ್ವೀಕರಿಸಿದರು. ಗ್ರಾಪಂ ಸದಸ್ಯ ಕರುಣಾಕರ ಶೆಟ್ಟಿ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು.

ಅಮೃತ ವಿದ್ಯಾಲಯದ ಮುಖ್ಯ ಶಿಕ್ಷಕ ಮಂಜುನಾಥ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಚಂದ್ರಪ್ಪ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ವಿನಯ ಹೆಗಡೆ ಕರ್ಕಿ, ಪ್ರಾಚಾರ್ಯೆ ಗೀತಾ ಬಾಲಚಂದ್ರರಾವ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ರಾಜುಶೆಟ್ಟಿ, ಶಿಕ್ಷಕರ ಸಂಘದ ಕಾರ್ಯದರ್ಶಿ ಅರವಿಂದ, ಸಿಆರ್‌ಪಿ ವಿ.ಡಿ.ನಾಗರಾಜ, ರೇಖಾ, ಸಂಪನ್ಮೂಲ ವ್ಯಕ್ತಿ ಮಹೇಶ , ಪ್ರಮುಖರಾದ ವೈ.ಕೃಷ್ಣಮೂರ್ತಿ, ನಾಗಭೂಷಣ , ಮಹಾಬಲಗಿರಿ ಭಟ್, ರಾಜೇಶ ಹಿರಿಮನೆ, ಶಿಕ್ಷಣ ಇಲಾಖೆಯ ವಿವಿಧ ಪ್ರತಿನಿಧಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net