ಗ್ರಾಪಂ ಅಧ್ಯಕ್ಷರಿಂದ ಹಾಸ್ಟೆಲ್ ಪರಿಶೀಲನೆ

16bhr 4 hostel
ಬಾಳೆಹೊನ್ನೂರಿನ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಕುರಿತು ಪರಿಶೀಲಿಸಿದರು. ರಂಜಿತಾ, ಅರುಣೇಶ್, ಇಬ್ರಾಹಿಂ ಶಾಫಿ, ಶಿವಪ್ಪ, ಹಿರಿಯಣ್ಣ, ಅಶ್ವಿನಿ ಇದ್ದರು.
Published on

ಬಾಳೆಹೊನ್ನೂರು: ಪಟ್ಟಣದ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿನಿಲಯದ ಊಟದ ಹಾಲ್‌ನಲ್ಲಿ ನೀರು ಸೋರಿಕೆಯಾಗುತ್ತಿದ್ದು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವ ಕುರಿತು ಗ್ರಾಪಂ ಅಧ್ಯಕ್ಷ ರವಿಚಂದ್ರ ಸೋಮವಾರ ಪರಿಶೀಲನೆ ನಡೆಸಿದರು.

ರವಿಚಂದ್ರ ಮಾತನಾಡಿ, ಹೆಂಚಿನ ಮೇಲ್ಛಾವಣಿಯ ನೀರು ಸಮರ್ಪಕವಾಗಿ ಹೊರಗೆ ಹೋಗುತ್ತಿಲ್ಲವಾದ್ದರಿಂದ ಹಾಸ್ಟೆಲ್ ಕಟ್ಟಡದ ಒಳಭಾಗಕ್ಕೆ ಬರುತ್ತಿದೆ. ಇದನ್ನು ಸರಿಪಡಿಸಿ ನೀರು ಒಳಭಾಗಕ್ಕೆ ಬರದಂತೆ ಕೂಡಲೆ ಕ್ರಮ ಕೈಗೊಳ್ಳಲಾಗುವುದು.

ಹಾಸ್ಟೆಲ್ ಕಟ್ಟಡದ ಪಕ್ಕದಲ್ಲಿ ಮರದ ಕೊಂಬೆಗಳು ಮೇಲ್ಛಾವಣಿಗೆ ತಾಗಿಕೊಂಡಿದ್ದು ಅವುಗಳನ್ನು ಕೂಡ ಕೂಡಲೆ ತೆರವುಗೊಳಿಸಲಾಗುವುದು. ಹಾಸ್ಟೆಲ್ ಮುಂಭಾಗದಲ್ಲಿ ಸಾರ್ವಜನಿಕರು ಕಸದ ರಾಶಿ ಹಾಕಿದ್ದು ವಿಲೇವಾರಿ ಮಾಡಲು ತಿಳಿಸಲಾಗುವುದು. ಹಾಸ್ಟೆಲ್ ಕಾಂಪೌಂಡ್ ಹಿಂಭಾಗದಲ್ಲಿ ವಾಹನಗಳು ಬರದಷ್ಟು ಕೆಸರು ಉಂಟಾಗಿದ್ದು ಆ ಜಾಗಕ್ಕೆ ಕಾಂಕ್ರಿಟ್ ಹಾಕಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಗ್ರಾಪಂ ಉಪಾಧ್ಯಕ್ಷೆ ರಂಜಿತಾ, ಸದಸ್ಯರಾದ ಎಂ.ಎಸ್.ಅರುಣೇಶ್, ಇಬ್ರಾಹಿಂ ಶಾಫಿ, ಶಿವಪ್ಪ, ಪಿಎಸಿಎಸ್ ಮಾಜಿ ನಿರ್ದೇಶಕ ಹಿರಿಯಣ್ಣ, ಹಾಸ್ಟೆಲ್ ಮೇಲ್ವಿಚಾರಕಿ ಅಶ್ವಿನಿ ಮತ್ತಿತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net