ಗೋಳಿಯಂಗಡಿಯಲ್ಲಿ ಸಹಕಾರಿ ಮಿಲನ ತರಬೇತಿ ಹಾಗೂ ಸಂವಹನ ಕಾರ್ಯಕ್ರಮ

sahakari
ಸಹಕಾರಿ ಮಿಲನ ತರಬೇತಿ ಕಾರ್ಯಕ್ರಮದಲ್ಲಿ ರಾಜು ಪೂಜಾರಿ, ಸುದೇಶ್ ನಾಯಕ್, ಮಂಜುನಾಥ್ ಶೆಟ್ಟಿ, ಅಶೋಕ್ ಪ್ರಭು, ಗಿರೀಶ್ ಪೈ, ಕೃಷ್ಣ ನಾಯ್ಕ, ಅಂಪಾರು ಜಗನ್ನಾಥ ಶೆಟ್ಟಿ, ಬೋಳ ಸದಾಶಿವ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು
Published on

ವಿಜಯವಾಣಿ ಸುದ್ದಿಜಾಲ ಕೋಟ

ಕಾಮಧೇನು ವಿವಿಧೋದ್ದೇಶ ಸಹಕಾರಿ ಸಂಘ ಹಂದಟ್ಟು ಕೋಟ, ಶ್ರೀ ಮಲ್ಲಿಕಾರ್ಜುನ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಶಿರೂರು ಮೂರ್ಕೈ, ಶ್ರೀ ಕೃಷ್ಣ ಸೌಹಾರ್ದ ಸಹಕಾರಿ ಸಂಘ ಸಾಲಿಗ್ರಾಮ ಸಂಯುಕ್ತ ಆಶ್ರಯದಲ್ಲಿ ಸಹಕಾರಿ ಮಿಲನ ತರಬೇತಿ ಹಾಗೂ ಸಂವಹನ ಕಾರ್ಯಕ್ರಮ ಗೋಳಿಯಂಗಡಿಯಲ್ಲಿ ಜರುಗಿತು.

ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಮಂಜುನಾಥ್ ಎಸ್.ಕೆ. ಅಧ್ಯಕ್ಷತೆ ವಹಿಸಿದ್ದರು. ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜು ಪೂಜಾರಿ, ಟೀಚರ್ಸ್ ಕೋ ಆಪರೇಟಿವ್ ಪ್ರಧಾನ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ, ಮಹಾಲಕ್ಷ್ಮೀ ಕೋ-ಆಪ್ ಬ್ಯಾಂಕ್ ಆಡಳಿತ ನಿರ್ದೇಶಕರಾದ ಶರತ್ ಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾ ಸೌಹಾರ್ದ ಒಕ್ಕೂಟ ಅಧ್ಯಕ್ಷ ಅಂಪಾರು ಜಗನ್ನಾಥ ಶೆಟ್ಟಿ, ನಿರ್ದೇಶಕರಾದ ಸುದೇಶ್ ನಾಯಕ್, ವೆಂಕಟೇಶ್ವರ ಎಜೆನ್ಸಿ ಮಾರ್ಕೆಟಿಂಗ್ ಮುಖ್ಯಸ್ಥರಾದ ಗಣೇಶ್ ಉಪಸ್ಥಿತರಿದ್ದರು.

ಸಹಕಾರಿ ಸಂಸ್ಥೆ ಮೂಲಕ ಸಹಕಾರಿ ಕ್ಷೇತ್ರಕ್ಕೆ ಕೊಡುಗೆ ಪರಿಗಣಿಸಿ ರಾಜು ಪೂಜಾರಿ, ಸುದೇಶ್ ನಾಯಕ್, ಮಂಜುನಾಥ್ ಶೆಟ್ಟಿ, ಅಶೋಕ್ ಪ್ರಭು, ಗಿರೀಶ್ ಪೈ, ಕೃಷ್ಣ ನಾಯ್ಕ, ಅಂಪಾರು ಜಗನ್ನಾಥ ಶೆಟ್ಟಿ, ಬೋಳ ಸದಾಶಿವ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಶ್ರೀಶ ಕೆ.ಎಂ. ಮಂಗಳೂರು ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು ಅಭಿವೃದ್ಧಿ ಅಧಿಕಾರಿ ವಿಜಯ್ ಬಿ.ಎಸ್.ಸ್ವಾಗತಿಸಿ, ನರಸಿಂಹ ನಾಯಕ್ ವಂದಿಸಿ, ಸಂತೋಷ ಪಡುಕರೆ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net