

ಹೆಬ್ರಿ: ಮುದ್ರಾಡಿ ನಾಟ್ಕದೂರು ಅಭಯಹಸ್ತೆ ಆದಿಶಕ್ತಿ ಶ್ರೀಕ್ಷೇತ್ರ ಮುದ್ರಾಡಿಯಲ್ಲಿ 50 ವರ್ಷಗಳ ಹಿಂದೆ ಸ್ಥಾಪಿಸಿರುವ ಕೊರಗಜ್ಜನ ದೈವಸ್ಥಾನದ ಜೀರ್ಣೋದ್ಧಾರ ನಡೆಸಲಾಗಿದ್ದು, ಮಂಗಳವಾರ ಜೀರ್ಣೋದ್ಧಾರ ಕಾರ್ಯದ ಧಾರ್ಮಿಕ ಕಾರ್ಯಕ್ರಮ ಹಾಗೂ ಮೂರ್ತಿ ಪ್ರತಿಷ್ಠಾಪನೆ ನಡೆಯಿತು.
5 ಅಡಿಯ ಬಾವಿ ತೋಡಿ ಅದರ ಮೇಲೆ ಪೀಠ ಇರಿಸಿ ಕೊರಗಜ್ಜನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ವಿಶೇಷವಾಗಿ ಕೊರಗಜ್ಜ ದೈವಸ್ಥಾನ ಜೀರ್ಣೋದ್ಧಾರ ಮಾಡಲಾಗಿದೆ ಎಂದು ಶ್ರೀಕ್ಷೇತ್ರದ ಧರ್ಮಾಧಿಕಾರಿ ವಿಜಯಕೀರ್ತಿ ಸುಕುಮಾರ್ ಮೋಹನ್ ತಿಳಿಸಿದರು.
ಕೊರಗಜ್ಜನ ಮೂರ್ತಿ ಪ್ರತಿಷ್ಠಾಪನೆ, ಮಧ್ಯಾಹ್ನ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ಹಾಗೂ ವ್ಯಾಘ್ರಚಾಮುಂಡಿ, ಬಂಟ, ಜಾಲ ಬೈಕಡ್ತಿ, ಬೊಬ್ಬರ್ಯ, ಮಲೆಸಾವಿರ ಮತ್ತು ಕೊರಗಜ್ಜನ ಕೋಲ ನಡೆಯಿತು. ಮುದ್ರಾಡಿ ಶ್ರೀಕ್ಷೇತ್ರದ ಧರ್ಮಾಧಿಕಾರಿ ವಿಜಯಕೀರ್ತಿ ಸುಕುಮಾರ್ ಮೋಹನ್, ಬಜಗೋಳಿ ಸದಾಶಿವ ಪೂಜಾರಿ, ಧರ್ಮದರ್ಶಿಗಳಾದ ಸುಧೀಂದ್ರ ಮೋಹನ್, ಸುರೇಂದ್ರ ಮೋಹನ್, ಉಮೇಶ್ ಕಲ್ಮಾಡಿ ಉಪಸ್ಥಿತರಿದ್ದರು.