ಗೃಹಲಕ್ಷ್ಮೀ ಯೋಜನೆಗೆ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ

rpt lakshmi
ರಿಪ್ಪನ್‌ಪೇಟೆ ಗ್ರಾಪಂ ಸಭಾಂಗಣದಲ್ಲಿ ಸರ್ಕಾರದ ಗೃಹಲಕ್ಷ್ಮೀ ಯೋಜನೆಯ ಕಾರ್ಯಕ್ರಮ ವೀಕ್ಷಣೆಗೆ ತಾಪಂ ಇಒ ನರೇಂದ್ರಕುಮಾರ್ ಚಾಲನೆ ನೀಡಿದರು.
Published on

ರಿಪ್ಪನ್‌ಪೇಟೆ: ಗೃಹಲಕ್ಷ್ಮೀ ಯೋಜನೆ ಚಾಲನಾ ಕಾರ್ಯಕ್ರಮಕ್ಕೆ ಬುಧವಾರ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪ್ರತಿ ಗ್ರಾಪಂ ಕೇಂದ್ರ ಸ್ಥಾನದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಸರ್ಕಾರದ ಆದೇಶದಂತೆ ಮಹಿಳೆಯರು ಬೆಳಗ್ಗೆಯಿಂದಲೇ ರಿಪ್ಪನ್‌ಪೇಟೆ, ಹೆದ್ದಾರಿಪುರ, ಚಿಕ್ಕಜೇನಿ, ಬಾಳೂರು, ಕೋಡೂರು, ಹುಂಚ, ಅಮೃತ, ಹೆದ್ದಾರಿಪುರ, ಕೆಂಚನಾಲ, ಹರತಾಳು, ಅರಸಾಳು, ಬೆಳ್ಳೂರು ಗ್ರಾಪಂಗಳ ಕಡೆಗೆ ಸಂಭ್ರಮದಿಂದ ಬಂದರು.
ಗ್ರಾಪಂ ಸಭಾಂಗಣಗಳು ಮಹಿಳೆಯರಿಂದ ಕಿಕ್ಕಿರಿದು ತುಂಬಿದ್ದವು. ಎಲ್ಲಾ ಗ್ರಾಪಂಗಳಲ್ಲೂ ತಳಿರುತೋರಣಗಳಿಂದ ಶೃಂಗರಿಸಲಾಗಿತ್ತು. ಮೈಸೂರಿನಲ್ಲಿ ಆಯೋಜಿಸಲಾಗಿದ್ದ ಚಾಲನಾ ಕಾರ್ಯಕ್ರಮವನ್ನು ದೊಡ್ಡಪರದೆಯ ಮೇಲೆ ನೇರ ಪ್ರಸಾರ ವೀಕ್ಷಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಎಲ್ಲಾ ಜನನಾಯಕರ ಯೋಜನೆಯ ಆಶಯ ನುಡಿಯನ್ನು ಕೇಳಿ ಸಂಭ್ರಮಪಟ್ಟರು.
ತಾಪಂ ಇಒ ನರೇಂದ್ರಕುಮಾರ್, ಪಿಡಿಒ ಮಧುಸೂದನ, ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮೀ, ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net