ಗುರುವಿನ ಅನುಗ್ರಹ ದೊಡ್ಡದು

22skp1 udagani
ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥರು ಉಡುಗಣಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಗರ್ಭಗುಡಿಯ ಹಿತ್ತಾಳೆ ಕವಚವನ್ನು ಲೋಕಾರ್ಪಣೆಗೊಳಿಸಿದರು. ಗುರುರಾಜ ಸೇವಾ ಸಮಿತಿಯ ಅಧ್ಯಕ್ಷ ರಾಜೀವ್ ಮಳೂರು ಇತರರಿದ್ದರು.
Published on

ಶಿಕಾರಿಪುರ: ಉಡುಗಣಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಗರ್ಭಗುಡಿಗೆ ಅಳವಡಿಸಿರುವ ಹಿತ್ತಾಳೆಯ ಕವಚವನ್ನು ಸೋದೆಮಠದ ಶ್ರೀ ವಿಶ್ವವಲ್ಲಭ ತೀರ್ಥರು ಲೋಕಾರ್ಪಣೆಗೊಳಿಸಿದರು.

ಪುರಪ್ರವೇಶ ಮಾಡಿದ ಶ್ರೀಗಳನ್ನು ವೇದಘೋಷಗಳು ಮಂಗಳವಾದ್ಯಗಳೊಂದಿಗೆ ಶ್ರೀ ಗುರುರಾಜ ಸೇವಾ ಸಮಿತಿಯಿಂದ ಸ್ವಾಗತಿಸಲಾಯಿತು. ನಂತರ ಹಿತ್ತಾಳೆ ಕವಚದ ಲೋಕಾರ್ಪಣೆ ನಂತರ ಭೂತರಾಜರ ಪೂಜೆ, ತೊಟ್ಟಿಲು ಸೇವೆ ನೆರವೇರಿತು. ನಂತರ ಮಹಾಮಂಗಳಾರತಿ ಜರುಗಿತು.

ಅನುಗ್ರಹ ಭಾಷಣ ಮಾಡಿದ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥರು, ಎಲ್ಲ ಅನುಗ್ರಹಕ್ಕಿಂತ ಗುರುವಿನ ಅನುಗ್ರಹ ದೊಡ್ಡದು. ಗುರು ಮನದ ಅಂಧಕಾರದಿಂದ ಮುಕ್ತಿಗೊಳಿಸಿ ಅರಿವಿನ ಜ್ಯೋತಿ ಬೆಳಗಿಸುತ್ತಾರೆ. ಗುರುಗಳ ದರ್ಶನದಿಂದ ಮಾತ್ರ ನಮ್ಮ ಜೀವನದ ಸಕಲದೋಷಗಳಿಂದ ಮುಕ್ತಿ ದೊರೆಯುತ್ತದೆ ಎಂದರು.

ಶ್ರೀ ಗುರುರಾಜ ಸೇವಾ ಸಮಿತಿಯ ಅಧ್ಯಕ್ಷ ರಾಜೀವ್ ಮಳೂರು ಮಾತನಾಡಿ, ಪೂಜ್ಯರಾದ ಸೋದೆಯ ಶ್ರೀಗುರುಗಳ ಆಗಮನದಿಂದ ನಾವು ಪಾವನರಾಗಿದ್ದೇವೆ. ಅವರ ಅಭಯಾನುಗ್ರಹ ನಮ್ಮೆಲ್ಲರ ಮೇಲಿರಲಿ ಎಂದರು. ಗುರುರಾಜ ಸೇವಾ ಸಮಿತಿಯ ಅಧ್ಯಕ್ಷ ರಾಜೀವ್ ಮಳೂರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net