ಗುಣಮಟ್ಟದ ವರದಿ ಬಾರದೆ ಪೈಪ್ ಅಳವಡಿಕೆ

23kpp1 work
ಕೊಪ್ಪ ಸಮೀಪದ ಬಿಂತ್ರವಳ್ಳಿಯಲ್ಲಿ ಜೆಜೆಎಂ ಕೆಲಸದಲ್ಲಿ ಲೋಪವಾಗುತ್ತಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ದಿನೇಶ್ ಹೊಸೂರು ಆರೋಪಿಸಿ ಇಂಜಿನಿಯರ್ ಸುನೀಲ್ ನಾಯ್ಕ ಅವರನ್ನು ತರಾಟೆಗೆ ತೆಗೆದುಕೊಂಡರು.
Published on

ಕೊಪ್ಪ: ಕ್ಷೇತ್ರದ ಎಲ್ಲೆಡೆ ಜೆಜೆಎಂ ಕಾಮಗಾರಿಗೆ ಅಳವಡಿಸಲಾಗುತ್ತಿರುವ ಪೈಪ್‌ನ ಗುಣಮಟ್ಟದ ಪರೀಕ್ಷೆಯ ವರದಿ ಬರುವುದಕ್ಕೂ ಮುನ್ನ ಅಳವಡಿಕೆ ಮಾಡಲಾಗುತ್ತಿದೆ. ಇದು ಜೆಜೆಎಂ ಅನುದಾನದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಭ್ರಷ್ಟಾಚಾರಕ್ಕೆ ಕನ್ನಡಿಯಿದ್ದಂತೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ದಿನೇಶ್ ಹೊಸೂರು ಆರೋಪಿಸಿದರು.

ಬಿಂತ್ರವಳ್ಳಿಯಲ್ಲಿ ಜೆಜೆಎಂ ಕೆಲಸವಾಗುತ್ತಿದ್ದ ಸಂದರ್ಭ ಭೇಟಿ ನೀಡಿ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ಮನೆ ಮನೆಗೂ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ. ಅನುದಾನ ನೀಡಿದೆ. ಆದರೆ ಇಲ್ಲಿನ ಅಧಿಕಾರಿಗಳು ಗುತ್ತಿಗೆದಾರರ ಜತೆ ಸೇರಿ ಭ್ರಷ್ಟಾಚಾರ ಎಸಗುತ್ತಿದ್ದಾರೆ. ಕೇಂದ್ರ ಸರ್ಕಾರದ ಅನುದಾನ ದುರ್ಬಳಕೆಯಾಗುತ್ತಿದೆ ಎಂದು ದೂರಿದರು.

ಶಾಸಕರು ಹಾಗೂ ಜೆಜೆಎಂನ ಅಧಿಕಾರಿಗಳು ಸ್ಥಳೀಯರಿಗೆ ಗುತ್ತಿಗೆ ನೀಡದೆ, ಹೊರಭಾಗದವರಿಗೆ ಗುತ್ತಿಗೆ ನೀಡಿದ್ದಾರೆ. ಗುತ್ತಿಗೆ ಪಡೆದುಕೊಂಡವರು ಕಳಪೆ ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ ಲೋಕೋಪಯೋಗಿ ಇಲಾಖೆಯ ರಸ್ತೆಯ ಪಕ್ಕದಲ್ಲಿ ಪೈಪ್ ಅಳವಡಿಸುತ್ತಿದ್ದಾರೆ. ಮುಂದಿನ ದಿನದಲ್ಲಿ ರಸ್ತೆ ವಿಸ್ತರಣೆ ವೇಳೆ ಸಮಸ್ಯೆ ಆಗುತ್ತದೆ ಹಾಗೂ ಭೂಮಿ 3 ಅಡಿ ಒಳ ಭಾಗದಲ್ಲಿ ಪೈಪ್ ಅಳವಡಿಸಬೇಕು, ಕೆಲವೆಡೆ ಅರ್ಧ ಅಡಿ ಆಳ ಸಹ ತೋಡಿಲ್ಲ ಎಂದು ಆರೋಪಿಸಿದರು. ಕಾಮಗಾರಿ ಸಂಬಂದ ಇಂಜಿನಿಯರ್ ಸುನೀಲ್ ನಾಯ್ಕ ಅವರನ್ನು ತರಾಟೆಗೆ ತೆಗೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net