

ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯ ಕುರಿತು ದಸರಾ ವಸ್ತುಪ್ರರ್ದಶನದಲ್ಲಿ ಗ್ಯಾರಂಟಿ ಬದುಕು ಶೀರ್ಷಿಕೆಯಡಿ ತೆರೆದಿರುವ ಮಳಿಗೆ ಪ್ರಮುಖ ಆಕರ್ಷಣೆಯಾಗಿದೆ. ಮಳಿಗೆಯಲ್ಲಿ ಇಲಾಖೆಯ ಯೋಜನೆ, ಅನ್ನಭಾಗ್ಯದ ಮಹತ್ವ ಮತ್ತು ಹಳ್ಳಿಯ ಜೀವನಶೈಲಿಯ ಕುರಿತ ಮಾಹಿತಿಯನ್ನು ಪ್ರದರ್ಶನ ಮಾಡಲಾಗಿದೆ.
ಅನ್ನಭಾಗ್ಯ ಯೋಜನೆ ಜಾರಿ ಕಾರ್ಯಕ್ರಮದ ಅಪರೂಪದ ಚಿತ್ರಗಳು ನೋಡುಗರ ಗಮನ ಸೆಳೆಯುತ್ತಿವೆ. ಜತೆಗೆ ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ, ಜೋಳ, ರಾಗಿಯ ಮಾಹಿತಿ, ಕಾನೂನು ಮಾಪನ ಶಾಸ್ತ್ರದ ಇಲಾಖೆಯ ತೂಕದ ಸಾಮಗ್ರಿಗಳನ್ನೊಳಗೊಂಡ ಮಾಹಿತಿಯನ್ನು ಅನಾವರಣ ಮಾಡಲಾಗಿದೆ. ವಿಶೇಷ ಎಂದರೆ, ಹಸಿವು ಮುಕ್ತ ಕರ್ನಾಟಕ ಸಂಕಲ್ಪದೊಂದಿಗೆ ಸಮೃದ್ಧ ಹಳ್ಳಿಯ ಚಿತ್ರಣವನ್ನು ಮಳಿಗೆಯಲ್ಲಿ ವಿಶೇಷವಾಗಿ ಕಟ್ಟಿಕೊಡಲಾಗಿತ್ತು.