ಗದಗನಲ್ಲಿ ರೌಡಿ ಶೀಟರ್ ಬೆನ್ನತ್ತಿದ ಪೊಲೀಸರು

Published on

ಗದಗ: ನಗರದಲ್ಲಿ ಚಾಕು ಇರಿತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಶುಕ್ರವಾರ (ಡಿ.9) ರಂದು ಬೆಳ್ಳಂಬೆಳಗ್ಗೆ ಪೊಲೀಸರು ರೌಡಿ ಶೀಟರ್, ಸಹಚರರು, ಅಪರಾಧ ಪ್ರಕರಣಗಳಲ್ಲಿ ಭಾಗವಹಿಸಿದವರು ಮತ್ತು ಶಂಕೆ ಇರುವ ವ್ಯಕ್ತಿಗಳ ಮನೆ ಮೇಲೆ ದಾಳಿ ಮಾಡಿ ವಶಕ್ಕೆ ತೆಗೆದುಕೊಂಡಿದ್ದಾರೆ. ಚಾಕು, ಚೂರಿ, ಸೈಕಲ್ ಚೈನ್ ಇತರೆ ಆಯುಧಗಳನ್ನು ಸಹ ವಶಕ್ಕೆ ಪಡೆದಿದ್ದಾರೆ. ನಗರದ ಕಮ್ಮಾರ ಸಾಲ್, ಕಿಲ್ಲಾ ಓಣಿ, ರಂಗನವಾಡಿ, ಖಾನತೋಟ ಏರಿಯಾದಲ್ಲಿ ಶೋಧ ಕಾರ್ಯ ನಡೆಸಿ 25 ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಡಿವೈಎಸ್ ಪಿ ಶಿವಾನಂದ ಪವಾಡಶೆಟ್ಟಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ

..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net