ಗಣಿತ ವಿಷಯಕ್ಕೆ ೩೫೫ ಮಂದಿ ವಿದ್ಯಾರ್ಥಿಗಳು ಗೈರು / ೧೬೮೬೪ ಹಾಜರಿ, ಸುಗಮ ಪರೀಕ್ಷೆ / ಡಿಡಿಪಿಐ ಕೃಷ್ಣಮೂರ್ತಿ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಜಿಲ್ಲೆಯ ೬೫ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಗಣಿತ ವಿಷಯದ ಪರೀಕ್ಷೆ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಅತ್ಯಂತ ಯಶಸ್ವಿಯಾಗಿ ನಡೆದಿದ್ದು ೩೫೫ ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದರು.

ಪರೀಕ್ಷೆ ಮುಗಿದ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಗಣಿತ ಪರೀಕ್ಷೆಗೆ ಹೆಸರು ನೊಂದಾಯಿಸಿದ್ದ ೧೭೨೧೯ ಹೊಸ ವಿದ್ಯಾರ್ಥಿಗಳ ಪೈಕಿ ೧೬೮೬೪ ಮಂದಿ ಹಾಜರಾಗಿದ್ದು, ೩೫೫ ಮಂದಿ ಗೈರಾಗಿದ್ದರು. ಪರೀಕ್ಷೆ ಯಾವುದೇ ಗೊಂದಲಗಳಿಲ್ಲದೇ ಸುಗಮವಾಗಿ ನಡೆದಿದೆ ಎಂದು ತಿಳಿಸಿದರು.

ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ನಡೆಯುತ್ತಿರುವ ೨ನೇ ವರ್ಷದ ಪರೀಕ್ಷೆ ಇದಾಗಿದ್ದು, ಜಿಲ್ಲೆಯ ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಸಿಸಿ ಕ್ಯಾಮಾರ ಸುಸ್ಥಿತಿಯಲ್ಲಿಡಲಾಗಿದ್ದು, ಪರೀಕ್ಷಾ ಅವಧಿಯಲ್ಲಿ ವೆಬ್ ಕಾಸ್ಟಿಂಗ್ ಮೂಲಕ ಅಧಿಕಾರಿಗಳು ವೀಕ್ಷಿಸುತ್ತಿದ್ದು, ಯಾವುದೇ ಲೋಪ ಕಂಡು ಬರಲಿಲ್ಲ ಎಂದರು.

ತಾಲ್ಲೂಕುವಾರು ಹಾಜರಿ ವಿವರ :

ಬಂಗಾರಪೇಟೆ ತಾಲ್ಲೂಕಿನ ೮ ಕೇಂದ್ರಗಳಲ್ಲಿ ಗಣಿತ ವಿಷಯಕ್ಕೆ ೨೫೭೮ ಮಂದಿ ನೊಂದಾಯಿಸಿದ್ದು, ೨೫೧೭ ಮಂದಿ ಹಾಜರಾಗಿ ೬೧ಮಂದಿ ಗೈರಾಗಿದ್ದಾರೆ, ಕೆಜಿಎಫ್ ತಾಲ್ಲೂಕಿನ ೯ ಕೇಂದ್ರಗಳಲ್ಲಿ ೩೨೫೭ ಮಕ್ಕಳು ಹೆಸರು ನೊಂದಾಯಿಸಿದ್ದು, ೩೧೯೩ ಮಂದಿ ಹಾಜರಾಗಿ ೬೪ ಮಂದಿ ಗೈರಾಗಿದ್ದಾರೆ.

ಕೋಲಾರ ತಾಲ್ಲೂಕಿನ ೧೮ ಕೇಂದ್ರಗಳಲ್ಲಿ ೪೯೭೫ ಮಂದಿ ಹೆಸರು ನೊಂದಾಯಿಸಿದ್ದು, ೪೯೦೦ ಮಂದಿ ಹಾಜರಾಗಿ ೭೫ ಮಂದಿ ಗೈರಾಗಿದ್ದಾರೆ. ಮಾಲೂರು ತಾಲ್ಲೂಕಿನ ೮ ಕೇಂದ್ರಗಳಲ್ಲಿ ೩೧೫೯ ಮಂದಿ ಹೆಸರು ನೊಂದಾಯಿಸಿದ್ದು, ೩೦೮೧ ಮಂದಿ ಹಾಜರಾಗಿದ್ದು, ೭೮ ಮಂದಿ ಗೈರಾಗಿದ್ದಾರೆ.

ಮುಳಬಾಗಿಲು ತಾಲ್ಲೂಕಿನ ೧೨ ಕೇಂದ್ರಗಳಲ್ಲಿ ೩೨೬೭ ಮಂದಿ ನೊಂದಾಯಿಸಿದ್ದು, ೩೧೪೭ ಮಂದಿ ಹಾಜರಾಗಿದ್ದು, ೧೨೦ ಮಂದಿ ಗೈರಾಗಿದ್ದಾರೆ, ಶ್ರೀನಿವಾಸಪುರ ತಾಲ್ಲೂಕಿನ ೧೦ ಕೇಂದ್ರಗಳಲ್ಲಿ ೨೫೬೧ ಮಂದಿ ಹೆಸರು ನೊಂದಾಯಿಸಿದ್ದು, ೨೫೪೩ ಮಂದಿ ಹಾಜರಾಗಿದ್ದು, ೧೮ ಮಂದಿ ಗೈರಾಗಿದ್ದಾರೆ.

ಚಿತ್ರ ೨೪ ಕೆ.ಎಲ್.ಆರ್. ೦೨ : ಕೋಲಾರದ ಅಂಜುಮಾನ್ ಅಲಮಿನ್ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ ಪ್ರಶ್ನೆಪತ್ರಿಕೆ ವಿತರಣೆಗೂ ಮುನ್ನಾ ಗಣಿತ ಪರೀಕ್ಷೆ ಬರೆಯಲು ಸಿದ್ದರಾಗಿ ಕುಳಿತಿರುವ ವಿದ್ಯಾರ್ಥಿಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net