ಗಾಂಜಾ ಸಂಗ್ರಹಿಸಿದ್ದವನ ಬಂಧನ

25 HANUR 2
Published on

ಚಾಮರಾಜನಗರ : ಹನೂರು ತಾಲೂಕಿನ ಸೂಳೆಕೋಬೆ ಗ್ರಾಮದ ಅಂಗಡಿ ಮನೆಯೊಂದರಲ್ಲಿ ಮಾರಾಟ ಮಾಡುವ ಸಲುವಾಗಿ ಸಂಗ್ರಹಿಸಿಟ್ಟಿದ್ದ ಗಾಂಜಾ ಆರೋಪಿಯನ್ನು ಶನಿವಾರ ಸಂಜೆ ಅಬಕಾರಿ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.


ಗ್ರಾಮದ ಸಿದ್ದಮರಿ (57) ಬಂಧಿತ. ಈತ ಅಂಗಡಿ ಮನೆಯಲ್ಲಿ ಒಣ ಗಾಂಜಾವನ್ನು ಸಂಗ್ರಹಿಸಿಟ್ಟಿದ್ದ ಎನ್ನಲಾಗಿದೆ. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಅಬಕಾರಿ ಉಪ ಆಯುಕ್ತ ಹಾಗೂ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ಕೊಳ್ಳೇಗಾಲ ಅಬಕಾರಿ ನಿರೀಕ್ಷಕ ಡಿ.ಸುನೀಲ್, ಉಪ ನಿರೀಕ್ಷಕ ಸಿದ್ದಯ್ಯ ಹಾಗೂ ಸಿಬ್ಬಂದಿ ಮನೆಯ ಮೇಲೆ ದಾಳಿ ನಡೆಸಿದರು. ಈ ವೇಳೆ 400 ಗ್ರಾಂ ಒಣ ಗಾಂಜಾ ವಶಪಡಿಸಿಕೊಂಡ ಅಬಕಾರಿ ಪೊಲೀಸರು ಆತನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.


ದಾಳಿಯಲ್ಲಿ ಅಬಕಾರಿ ಸಿಬ್ಬಂದಿ ಎಂ.ಎನ್ ಸುಂದ್ರಪ್ಪ, ಎನ್.ಸುಜನ್‌ರಾಜ್, ಸಿ.ಮಂಜುಪ್ರಸಾದ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net