ವಿಜಯವಾಣಿ ಸುದ್ದಿಜಾಲ ಕೋಲಾರ
ನಗರದ ಎಸ್.ಎನ್.ಆರ್. ಆಸ್ಪತ್ರೆಯಲ್ಲಿ ಜು.೨೦ರ ಭಾನುವಾರ ಮುಂಜಾನೆ ಖಾಸಗಿ ಆಂಬುಲೆನ್ಸ್ ಮಹಿಳಾ ವೈದ್ಯ ಮತ್ತು ಸಿಬ್ಬಂದಿ ವಿರುದ್ಧ ಅಸಭ್ಯವಾಗಿ ವರ್ತಿಸಿರುವವರ ವಿರುದ್ಧ ಆಸ್ಪತ್ರೆಯ ಶಸ್ತç ಚಿಕಿತ್ಸಕ ಡಾ.ಜಗದೀಶ್ ನಗರ ಠಾಣೆಗೆ ದೂರು ನೀಡಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರಿದ್ದಾರೆ.
ಖಾಸಗಿ ಆಂಬುಲೆನ್ಸ್ ಚಾಲಕ ನಾಗರಾಜ್ ಎಂಬುವರ ವಿರದ್ಧ ದೂರು ನೀಡಿರುವ ಶಸ್ತç ಚಿಕಿತ್ಸಕರು ಚಾಲಕ ನಾಗರಾಜ್ ವರ್ತನೆಯಿಂದ ಆಸ್ಪತ್ರೆಯ ಸಿಬ್ಬಂದಿ ಮತ್ತು ವೈದ್ಯರು ಭಯಭೀತರಾಗಿರುತ್ತಾರೆ. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಂಗಳವಾರ ರಾತ್ರಿ ೭.೩೦ ರ ಸಂದರ್ಭದಲ್ಲಿ ಡಾ.ಜಗದೀಶ್ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.
ಅಂದು ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಕಮಲಾಕರನ್ ಎಂಬುವರು ಹೇಳಿದ ವರದಿ ಆಧರಿಸಿ ಡಾ.ಜಗದೀಶ್ ಜು.೨೦ ರ ಮುಂಜಾನೆ ೪ ಗಂಟೆಯ ಸಮಯದಲ್ಲಿ ಚಾಲಕ ನಾಗರಾಜ್ ಪಾನಮತ್ತನಾಗಿ ಮತ್ತು ಧೂಮಪಾನ ಮಾಡುತ್ತಾ ಬಂದು ಕರ್ತವ್ಯದಲ್ಲಿದ್ದ ವೈದ್ಯಾಧಿಕಾರಿಗಳನ್ನು ದಿಟ್ಟಿಸಿ ನೋಡುತ್ತಾ ಅಸಮಂಜಸ ರೀತಿಯಲ್ಲಿ ವರ್ತಿಸಿರುತ್ತಾನೆ. ಈ ಬಗ್ಗೆ ಪ್ರಶ್ನಿಸಿದಾಗ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಡಾ.ಜಗದೀಶ್ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.
ಭಾನುವಾರ ಮುಂಜಾನೆ ಘಟನೆ ನಡೆದಿದ್ದರೂ ಆಸ್ಪತ್ರೆಯ ಆಡಳಿತ ಮಂಡಳಿ ದೂರು ನೀಡಲು ಮೀನ ಮೇಷ ಎಣಿಸುತ್ತಿದ್ದು, ಖಾಸಗಿ ಆಂಬುಲೆನ್ಸ್ ನಾಗರಾಜ್ ಮಹಿಳಾ ವೈದ್ಯಾಧಿಕಾರಿಗಳಿಗೆ ತನ್ನ ಖಾಸಗಿ ಅಂಗಾAಗಗಳನ್ನು ಪ್ರದರ್ಶನ ಮಾಡಿದ್ದ ಎನ್ನಲಾಗಿದೆ. ಆದರೆ ಮಹಿಳಾ ಪಿ.ಜಿ.ವೈದ್ಯರು ಆಡಳಿತ ಮಂಡಳಿಗೆ ಆಗಲಿ ಪೋಲಿಸರಿಗೆ ದೂರು ನೀಡಲು ಹಿಂದೇಟು ಹಾಕಿದ್ದಾರೆ. ಕಾರಣ ಅವರು ವಿದ್ಯಾರ್ಥಿಗಳಾಗಿರುವ ಕಾರಣ ಅವರು ದೂರು ನೀಡುವಂತೆ ಆಸ್ಪತ್ರೆ ಆಡಳಿತ ಮಂಡಳಿ ಒತ್ತಾಯಪಡಿಸಿದ್ದಾದರೂ ನಾವು ಇನ್ನೂ ವಿದ್ಯಾರ್ಥಿಗಳು, ನಾವೇಕೆ ದೂರು ನೀಡಬೇಕು. ನಡೆದಿರುವ ಘಟನೆ ಬೇರೆ ವೈದ್ಯರೂ ನೋಡಿದ್ದಾರೆ. ಇಲ್ಲಿ ರಕ್ಷಣೆ ಇಲ್ಲ ಎಂದರೆ ದೂರು ನೀಡಿದರೆ ನಮಗೆ ರಕ್ಷಣೆ ಯಾರು ನೀಡುವರು ಎಂದು ಪಿ.ಜಿ.ವೈದ್ಯರು ತಮ್ಮ ನಿರಾಸಕ್ತಿಯನ್ನು ತೋಡಿಕೊಂಡಿದ್ದಾರೆ.
ಹಗ್ಗ ಜಗ್ಗಾಟ :
ಆಸ್ಪತ್ರೆಯ ಸಿ.ಎಂ.ಓ. ದೂರು ನೀಡಬೇಕೆಂದು ಶಸ್ತç ಚಿಕಿತ್ಸಕ ಡಾ.ಜಗದೀಶ್ ತಿಳಿಸಿದ್ದರಾದರೂ ನೋಡದೆ ಇರುವ ಘಟನೆ ಬಗ್ಗೆ ನಾನೇಕೆ ದೂರು ನೀಡಲಿ. ಆಸ್ಪತ್ರೆಯ ಉಸ್ತುವಾರಿ ವಹಿಸಿಕೊಂಡಿರುವ ಡಾ.ಜಗದೀಶ್ ರವರೇ ಮಹಿಳಾ ವೈದ್ಯಾಧಿಕಾರಿಯಿಂದ ವರದಿ ಆಧರಿಸಿ ದೂರು ನೀಡಲಿ ಎಂದು ಸೋಮವಾರ ಇಡೀ ದಿನ ಠಾಣೆಗೆ ದೂರು ನೀಡಿರಲಿಲ್ಲ. ಮಂಗಳವಾರ ಮಾಧ್ಯಮಗಳಿಗೆ ಮತ್ತು ಪೋಲಿಸರಿಗೆ ವರದಿ ಗೊತ್ತಾದ ನಂತರ ಡಾ.ಜಗದೀಶ್ ರವರನ್ನು ಪ್ರಶ್ನಿಸಿದಾಗ ಸಿ.ಎಂ.ಓ ರವರ ಬಗ್ಗೆ ಬೆರಳು ತೋರಿಸಿ ನುಣುಚಿಕೊಂಡರು. ವಿಜಯವಾಣಿ ಪತ್ರಿಕೆ ಎಂ.ಎಲ್.ಸಿ.ರವರನ್ನು ಸಂಪರ್ಕಿಸಿ ವಿಷಯ ತಿಳಿಸಿದ ನಂತರ ಮಂಗಳವಾರ ರಾತ್ರಿ ೭.೩೦ಕ್ಕೆ ಡಾ.ಜಗದೀಶ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಕೋಲಾರ ನಗರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಮಹಿಳಾ ಪಿ.ಜಿ.ವೈದ್ಯರು ತರಬೇತಿಗಾಗಿ ಎಸ್.ಎನ್.ಆರ್.ಆಸ್ಪತ್ರೆಗೆ ಬರುತ್ತಾರೆ. ಅಂತವರಿಗೆ ರಕ್ಷಣೆ ಇಲ್ಲ ಎಂದರೆ ಹೇಗೆ? ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿ ದೂರದ ಊರುಗಳಿಂದ ಪಿ.ಜಿ.ಮಾಡಲು ಜಾಲಪ್ಪ ಆಸ್ಪತ್ರೆಗೆ ಬರುತ್ತಾರೆ. ಅವರನ್ನು ತರಬೇತಿಗಾಗಿ ಎಸ್.ಎನ್.ಆರ್. ಆಸ್ಪತ್ರೆಗೆ ಕಳುಹಿಸಿಕೊಡುತ್ತಾರೆ. ತಮ್ಮ ತಂದೆ ತಾಯಿಗಳಿಗೆ ವಿಷಯ ಗೊತ್ತಾದರೆ ಅವರ ಪರಿಸ್ಥಿತಿ ಏನು? ಇದಲ್ಲದೆ ರೋಗಿಗಳ ಸಹಾಯಕರಾಗಿ ಇರುವ ಮಹಿಳೆಯರಿಗೂ ಇಂತವರಿAದ ಲೈಂಗಿಕ ಕಿರುಕುಳಗಳು ನಡೆಯುತ್ತಿರುತ್ತವೆ. ರಾತ್ರಿ ಪಾಳಯದಲ್ಲಿ ಸೆಕ್ಯೂರಿಟಿ ಗಾರ್ಡ್ಗಳನ್ನು ನೇಮಿಸಿಲ್ಲ. ಇರುವ ಒಂದಿಬ್ಬರು ಆಸ್ಪತ್ರೆಗೆ ಸಾಕಾಗುತ್ತಿಲ್ಲ. ಕುಡುಕರ ಕಾಟ ಅಂತೂ ಆಸ್ಪತ್ರೆಯಲ್ಲಿ ಹೆಚ್ಚಾಗಿದೆ. ಖಾಲಿ ಹಾಸಿಗೆಗಳ ಮೇಲೆ ಮಲಗಿ ಬೆಳ್ಳಿಗ್ಗೆ ಎದ್ದು ಹೋಗುತ್ತಿದ್ದಾರೆ. ಅಂತವರನ್ನು ತಡೆಯುತ್ತಿಲ್ಲ ಎಂದು ಸಾರ್ವಜನಿಕರು ಹಾಗೂ ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿಯವರ ಆರೋಪವಾಗಿದೆ.
ಪೋಲಿಸರು ಆರೋಪಿಯನ್ನು ಬಂಧಿಸಿ ಸೂಕ್ತ ಕ್ರಮ ಜರುಗಿಸಲಿ :
ಪೋಲಿಸರು ಯಾರ ಮುಲಾಜಿಗೂ ಒಳಗಾಗದೇ ಆರೋಪಿಯನ್ನು ಬಂಧಿಸಲಿ ಹಾಗೂ ಆಸ್ಪತ್ರೆಯಲ್ಲಿ ಇಂತವರಿಗೆ ಸಹಾಯ ಮಾಡುವ ಸಿಬ್ಬಂದಿ ವಿರುದ್ಧವೂ ಕ್ರಮ ಕೈಗೊಳ್ಳಲಿ. ರಾತ್ರಿ ವೇಳೆಯಲ್ಲಿ ಆಸ್ಪತ್ರೆಯ ಒಳಗೆ ಯಾರನ್ನೂ ಬಿಡದಂತೆ ಮುಂಭಾಗ ಬಾರಿಕೇಟ್ ಅಳವಡಿಸಿ ರೋಗಿಗಳನ್ನು ಮಾತ್ರ ಬಿಡುವಂತೆ ಆಗಬೇಕು. ಆರೋಪಿ ಎಷ್ಟೇ ಬಲಾಢ್ಯನಾದರೂ ಅವನನ್ನು ಬಂಧಿಸಬೇಕು. ಸೂಕ್ತ ಕ್ರಮ ಕೈಗೊಂಡರೆ ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸುವುದಿಲ್ಲ. ಈಗಾಗಲೇ ಎಸ್.ಎನ್.ಆರ್.ಆಸ್ಪತ್ರೆಗೆ ಸ್ವಚ್ಛತೆ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆ ಬಗ್ಗೆ ಸಾರ್ವಜನಿಕರಲ್ಲಿ ಕೆಟ್ಟ ಅಭಿಪ್ರಾಯ ಬರುವಂತೆ ಆಗಿದೆ. ಇನ್ನಾದರೂ ಕ್ರಮ ಕೈಗೊಳ್ಳಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಚಿತ್ರ ೨೩ ಕೆ.ಎಲ್.ಆರ್. ೦೩ : ಎಸ್.ಎನ್.ಆರ್.ಆಸ್ಪತ್ರೆ ಭಾವಚಿತ್ರ