ಕ್ಷುದ್ರ ಶಕ್ತಿ ಎದುರಿಸುವ ಶಕ್ತಿ ಹೆಣ್ಣಿಗಿರಲಿ

01bhr 1 inner
ಬಾಳೆಹೊನ್ನೂರಿನಲ್ಲಿ ಇನ್ನರ್‌ವ್ಹೀಲ್ ಕ್ಲಬ್ ಜಿಲ್ಲೆ 318ರ ವತಿಯಿಂದ ಆಯೋಜಿಸಿದ್ದ ಇನ್ನರ್‌ವ್ಹೀಲ್ ಜಿಲ್ಲಾ ಸಮ್ಮೇಳನ ಹೃದಯ ವೈಶಾಲ್ಯ ಕಾರ್ಯಕ್ರಮವನ್ನು ಜಿಲ್ಲಾ ಛೇರ್ಮನ್ ವೈಶಾಲಿ ವಿ.ಕುಡ್ವ ಉದ್ಘಾಟಿಸಿದರು. ಡಾ. ಟಿ.ಸಿ.ಪೂರ್ಣಿಮಾ, ಸುಮಾ, ಶಬರಿ ಕಡಿದಾಳ್, ಜಾಹ್ನವಿ, ವಿದ್ಯಾ ಎ.ಶೆಟ್ಟಿ ಇದ್ದರು.
Published on

ಬಾಳೆಹೊನ್ನೂರು: ಹೆಣ್ಣು ಮಕ್ಕಳ ಮೇಲೆ ಇಂದು ಕೌಟುಂಬಿಕ, ಸಾಮಾಜಿಕವಾಗಿ ಹಲವು ದೌರ್ಜನ್ಯಗಳು ನಡೆಯುತ್ತಿದ್ದು ಸಮಾಜದ ಕ್ಷುದ್ರ ಶಕ್ತಿಗಳನ್ನು ಎದುರಿಸುವ ಶಕ್ತಿ ಹೆಣ್ಣಿಗೆ ಬರಬೇಕು ಎಂದು ಭಾರತೀಯ ಸಮಾಚಾರ ಸೇವೆಯ ಹಿರಿಯ ಅಧಿಕಾರಿ ಡಾ. ಟಿ.ಸಿ.ಪೂರ್ಣಿಮಾ ಹೇಳಿದರು.

ಇನ್ನರ್‌ವ್ಹೀಲ್ ಕ್ಲಬ್ ಜಿಲ್ಲೆ 318ರ ವತಿಯಿಂದ ಪಟ್ಟಣದ ನಾರಾಯಣಗುರು ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಇನ್ನರ್‌ವ್ಹೀಲ್ ಕ್ಲಬ್‌ನ 55ನೇ ಜಿಲ್ಲಾ ಸಮ್ಮೇಳನ ಹೃದಯ ವೈಶಾಲ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಹಲವು ದೌರ್ಜನ್ಯಗಳನ್ನು ನಾವು ಇಂದು ಮಾಧ್ಯಮಗಳ ಮೂಲಕ ಕಾಣಬಹುದಾಗಿದ್ದು ದೌರ್ಜನ್ಯಗಳು ನಡೆದಿರುವ ಬಗ್ಗೆ ಹಲವು ಜ್ವಲಂತ ಉದಾಹರಣೆಗಳಿವೆ. ಇವುಗಳನ್ನು ನಿಯಂತ್ರಿಸಲು ಪ್ರಬಲವಾಗಿ ಹೆಣ್ಣಿಗೆ ಕಾನೂನಿನ ಅಸ ಬೇಕಿದೆ ಎಂದರು.

ಕ್ರೀಡೆ, ಸಿನಿಮಾ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೆಣ್ಣು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾಳೆ. ಹೆಣ್ಣು ಮಕ್ಕಳಿಗೆ ಅವರಲ್ಲಿರುವ ಜ್ಞಾನವನ್ನು ಬಳಸಿಕೊಳ್ಳಲು ಬರುತ್ತಿಲ್ಲ. ಇದರಿಂದಾಗಿ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಮಹಿಳೆಯರು ಸಮಾನತೆಯ ಬಗ್ಗೆ ಹೆಚ್ಚು ಗಮನಹರಿಸಬೇಕಿದೆ. ಸಮಾನತೆ ಎಂದರೆ ಕೇವಲ ಸ್ವೇಚ್ಛಾಚಾರವಲ್ಲ ಎಂದರು.

ಹೆಣ್ಣು ಮಕ್ಕಳು ಸಂಘಟನೆಯ ಒಳಗೆ ಬಂದರೆ ಮಾತ್ರ ಸಶಕ್ತರಾದಂತೆ. ಸಂಘಟನೆಗಳ ಮೂಲಕ ಜ್ಞಾನ ಲಭಿಸಿ ಸಬಲೀಕರಣದ ಹಾದಿಯಲ್ಲಿ ತೆರಳಲು ಸಾಧ್ಯ ಎಂದು ಹೇಳಿದರು.

ಇನ್ನರ್‌ವ್ಹೀಲ್ ಕ್ಲಬ್‌ನ ಜಿಲ್ಲಾ ಪದಾಧಿಕಾರಿಗಳಾದ ಸುಮಾ ಕೃಷ್ಣ, ಶಬರಿ ಕಡಿದಾಳ್, ಪೂರ್ಣಿಮಾ ರವಿ, ರಜನಿ ಭಟ್, ಉಮಾ, ಚಿತ್ರಾ ರಾವ್, ದೀಪಾ ಭಂಡಾರಿ, ಅನಿತಾ, ವಿದ್ಯಾ ಎ.ಶೆಟ್ಟಿ, ಕವಿತಾ ಕೇಶವ್, ಜೊಹರಾ, ಜಾಹ್ನವಿ ಜಯರಾಮ್, ಶಾಲಿನಿ ನಾಯಕ್, ಬಿ.ಸಿ.ಗೀತಾ, ಪುಷ್ಪಾ, ಮಾಲಿನಿ ಹೆಬ್ಬಾರ್, ಮಿತ್ರಾ ಪ್ರಭು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net