ಕ್ರೀಡೆಯಿಂದ ದೈಹಿಕ ಸದೃಢತೆ

6sri-1 sports
ಶೃಂಗೇರಿಯಲ್ಲಿ ಕುವೆಂಪು ವಿಶ್ವವಿದ್ಯಾಲಯ ಅಂತರ್‌ಮಟ್ಟದ ಕಬಡ್ಡಿ ಪಂದ್ಯಾವಳಿಯ ಸಮಾರೋಪದಲ್ಲಿ ಪ್ರಥಮ ಸ್ಥಾನ ಗಳಿಸಿದ ಶಂಕರಘಟ್ಟದ ಜ್ಞಾನ ಸಹ್ಯಾದ್ರಿ ಕಬಡ್ಡಿ ತಂಡದವರಿಗೆ ಬಹುಮಾನ ವಿತರಿಸಲಾಯಿತು. ಡಾ. ಎಂ.ಸ್ವಾಮಿ, ಪ್ರಶಾಂತ್, ಸಂತೋಷ್ ಇದ್ದರು.
Published on

ಶೃಂಗೇರಿ: ಗ್ರಾಮೀಣ ಕ್ರೀಡೆ ಕಬಡ್ಡಿಯಿಂದ ದೈಹಿಕ ಸದೃಢತೆ ಹೆಚ್ಚುತ್ತದೆ ಎಂದು ಜೆಸಿಬಿಎಂ ಕಾಲೇಜಿನ ಪ್ರಾಚಾರ್ಯ ಡಾ. ಎಂ.ಸ್ವಾಮಿ ತಿಳಿಸಿದರು.

ಜೆಸಿಬಿಎಂ ಕಾಲೇಜಿನಿಂದ ಗುರುವಾರ ಆಯೋಜಿಸಿದ್ದ ಕುವೆಂಪು ವಿಶ್ವವಿದ್ಯಾಲಯ ಅಂತರ್‌ಮಟ್ಟದ ಕಬಡ್ಡಿ ಪಂದ್ಯಾವಳಿಯ ಸಮಾರೋಪದಲ್ಲಿ ಮಾತನಾಡಿದರು. ಕಬಡ್ಡಿ ಅತ್ಯಂತ ಗಮನ ಸೆಳೆಯುವ ಕ್ರೀಡೆಯಾಗಿದೆ. ದೈಹಿಕ ಶಕ್ತಿ, ಚುರುಕುತನ ಬೆಳೆಸುತ್ತದೆ. ಮಕ್ಕಳು ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಸದೃಢತೆ ಹೆಚ್ಚುತ್ತದೆ. ಕ್ರೀಡಾ ಮನೋಭಾವ ಬೆಳೆಯುವುದರಿಂದ ಬದುಕಿನ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸುವ ಸಾಮರ್ಥ್ಯ ಕಲಿಸುತ್ತದೆ. ಪ್ರಸ್ತುತ ಈ ಆಟವು ಜಾಗತಿಕಮಟ್ಟದಲ್ಲಿ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ಎರಡು ದಿನಗಳ ಕಾಲ ನಡೆದ ರೋಚಕ ಕುವೆಂಪು ವಿ.ವಿ.ಅಂತರ್ ಕಾಲೇಜು ಕಬಡ್ಡಿ ಪಂದ್ಯಾವಳಿಯಲ್ಲಿ ಶಂಕರಘಟ್ಟದ ಜ್ಞಾನಸಹ್ಯಾದ್ರಿ ಕಬಡ್ಡಿ ತಂಡ ಪ್ರಥಮ, ಜೆಸಿಬಿಎಂ ಕಾಲೇಜು-ದ್ವಿತೀಯ, ಚಿಕ್ಕಮಗಳೂರು ಐಡಿಎಸ್‌ಜಿ ತಂಡ ತೃತೀಯ ಸ್ಥಾನ ಗಳಿಸಿತು.

ವಿಶ್ವಸ್ಥ ಮಂಡಳಿ ಸದಸ್ಯ ಎಚ್.ಎಲ್.ತ್ಯಾಗರಾಜ್, ಪಿಯುಸಿ ವಿಭಾಗದ ಉಪಪ್ರಾಚಾರ್ಯ ಪ್ರಶಾಂತ್, ದೈಹಿಕ ಶಿಕ್ಷಣ ನಿರ್ದೇಶಕ ರವಿಕಿರಣ್, ಪ್ರಾಧ್ಯಾಪಕರಾದ ಲಕ್ಷ್ಮೀನಾರಾಯಣ್, ಸಂತೋಷ್ ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net