ಕ್ರೀಡಾಕೂಟಗಳಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು ವೃದ್ಧಿ

25MDG1 sports
ಣಕಲ್ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಮಾಜಿ ಸಚಿವೆ ಮೋಟಮ್ಮ ಚಾಲನೆ ನೀಡಿದರು. ಜರಿನಾ ಬಾನು, ಆತಿಕಾ ಭಾನು, ಇರ್ಫಾನ್, ಬಿ.ಡಿ.ವಿಜಯೇಂದ್ರ, ಬಿ.ಎ .ಉಮರ್, ಕೆ.ಮಂಜುಳಾ, ಸತೀಶ್, ಪೂರ್ಣೇಶ್ ಇತರರಿದ್ದರು.
Published on

ಬಣಕಲ್: ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಶಿಸ್ತಿನ ಜೀವನ ರೂಪಿಸಿಕೊಳ್ಳಬೇಕು ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು.

ಬಣಕಲ್ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ನಡೆದ ಮೂಡಿಗೆರೆ ಮತ್ತು ಕಳಸ ತಾಲೂಕಿನ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ಅಂಕಕ್ಕೆ ಸೀಮಿತವಾಗದೆ ಪ್ರತಿಭೆ ಮೂಲಕ ಬದುಕು ರೂಪಿಸಿಕೊಳ್ಳಬೇಕು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ದೊಡ್ಡ ಸಾಧನೆ ಮಾಡಿದರೂ ಒಲಿಂಪಿಕ್‌ನಲ್ಲಿ ಕಡಿಮೆ ಸಾಧನೆ ಮಾಡುತ್ತಿರುವುದು ಕ್ರೀಡಾ ಕ್ಷೇತ್ರವನ್ನು ಯುವ ಜನಾಂಗ ಕಡೆಗಣಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.

ಶಾಲಾ ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳು ಉತ್ತಮ ಕ್ರೀಡಾಪಟುಗಳಾಗಬೇಕು. ಕ್ರೀಡಾಕೂಟದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಆರೋಗ್ಯ ಕಾಪಾಡಿಕೊಳ್ಳುವ ಜತೆಗೆ ದೇಶಕ್ಕೆ ಗೌರವ ತಂದುಕೊಡಲು ಸಾಧ್ಯವಿದೆ ಎಂದು ತಿಳಿಸಿದರು.

ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಕೆ.ಬಿ.ಶ್ರೀನಿವಾಸ್ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಜೀವನದಲ್ಲಿ ಹೆಚ್ಚು ಕ್ರಿಯಾಶೀಲರಾಗುತ್ತಾರೆ ಎಂದ ಅವರು, ಆಧುನಿಕ ಕಾಲದಲ್ಲಿ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಗ್ರಾಪಂ ಅಧ್ಯಕ್ಷೆ ಜರೀನಾ ಬಾನು, ಸದಸ್ಯರಾದ ಇರ್ಫಾನ್, ಆತಿಕಾ ಬಾನು, ಬಿ.ಡಿ.ವಿಜಯೇಂದ್ರ, ತಾಪಂ ಮಾಜಿ ಉಪಾಧ್ಯಕ್ಷ ಶಿವರಾಂ ಶೆಟ್ಟಿ, ತಾಪಂ ಮಾಜಿ ಸದಸ್ಯ ದೇವರಾಜ್ ಸಬ್ಲಿ, ಪಿಯು ಶಿಕ್ಷಣ ಇಲಾಖೆ ಉಪನಿರ್ದೇಶಕಿ ಕೆ.ಮಂಜುಳಾ, ಪ್ರಾಚಾರ್ಯ ಸತೀಶ್, ಪೂರ್ಣೇಶ್, ಬಿ.ಕೆ.ಪೃಥ್ವಿ, ಗೋಪಾಲಾಚಾರ್, ಬಿ.ಎ.ಉಮ್ಮರ್, ವಿವೇಕ್, ಚಂದ್ರಯ್ಯ, ಶಾರದಮ್ಮ, ಪ್ರಾಧ್ಯಾಪಕರಾದ ಸುಶ್ಮಿತಾ, ಮಲ್ಲಿಕಾರ್ಜುನ, ಸುರೇಶ್, ರವೀಂದ್ರ, ಪ್ರಿಯದರ್ಶಿನಿ, ಅಕ್ಷತಾ, ಸುಕನ್ಯಾ, ಪ್ರೇಮಾ, ಪೂಜಾ, ನವ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net