ಕೋಲಿ ಸಮಾಜದ ಹೋರಾಟಕ್ಕೆ ಸ್ಪಂದಿಸದ ಜಿಲ್ಲಾಡಳಿತ

avvanna myakheri
Published on

ಕಲಬುರಗಿ: ಚಿತ್ತಾಪುರ ವಿಧಾನಸಭೆ ಕ್ಷೇತ್ರದ ಕಲಗುರ್ತಿ ಗ್ರಾಮದ ದೇವಾನಂದ ಕೋರಬಾ ಸಾವಿನ ಪ್ರಕರಣದ ತನಿಖೆ ಮಾಡಬೇಕು, ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಕೋಲಿ, ಕಬ್ಬಲಿಗ ಸಮಾಜದ ಸಮನ್ವಯ ಸಮಿತಿಯಿಂದ ಕಳೆದ ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಜಿಲ್ಲಾ ಸಚಿವರು, ಜಿಲ್ಲಾಡಳಿತ ಕನಿಷ್ಠ ಸ್ಪಂದನೆಯನ್ನು ತೋರುತ್ತಿಲ್ಲ ಎಂದು ಸಮಿತಿ ಮುಖಂಡ ಅವ್ವಣ್ಣ ಮ್ಯಾಕೇರಿ ಆರೋಪಿಸಿದರು.

ಬೇಡಿಕೆ ಈಡೇರಿಸಲು ಆಗ್ರಹಿಸಿ ನಿರಂತರವಾಗಿ ಧರಣಿ ನಡೆಸುತ್ತಿದ್ದೇವೆ. ನಮ್ಮ ಎದುರಿನಿಂದಲೇ ಹೋಗುವ ಸಚಿವ ಪ್ರಿಯಾಂಕ್ ಖರ್ಗೆ, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಸೇರಿ ಯಾರೊಬ್ಬರೂ ಮನವಿಯನ್ನು ಕೇಳದೆ ಧರ್ಪ ಮೆರೆಯುತ್ತಿದ್ದಾರೆ. ಎರಡು ತಿಂಗಳಿಂದ ನಡೆಯುತ್ತಿರುವ ಹೋರಾಟಕ್ಕೆ ಸ್ಪಂದಿಸದಿರುವುದು ಆಡಳಿತ ವ್ಯವಸ್ಥೆಯ ವೈಫಲ್ಯವನ್ನು ತಿಳಿಸುತ್ತದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರಾಗಿ ತಮ್ಮದೇ ಸ್ವಕ್ಷೇತ್ರದಲ್ಲಿ ಹುಡುಗಿಯ ಅಪಹರಣವಾಗಿ ೮೧ ದಿನದ ನಂತರ ಹೋರಾಟ ಮಾಡಿದಾಗ ಕ್ರಮ ಕೈಗೊಳ್ಳಲಾಯಿತು. ಇನ್ನೊಂದು ಪ್ರಕರಣದಲ್ಲಿ ಆತ್ಮಹತ್ಯೆಗೆ ಕಾರಣರಾದ ಆರೋಪಿಗಳನ್ನು ಬಂಧಿಸದಿರುವುದು ದುರಂತ. ಇವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಮುಂದುವರಿಯುವ ನೈತಿಕತೆ ಹೊಂದಿಲ್ಲ. ಕೂಡಲೇ ಸಚಿವ ಪ್ರಿಯಾಂಖ್ ಖರ್ಗೆ ರಾಜೀನಾಮೆ ಕೊಡಬೇಕು. ಇಲ್ಲವೇ ಸಿಎಂ ಇವರನ್ನು ಮಂತ್ರಿ ಸ್ಥಾನದಿಂದ ಕೈ ಬಿಡಬೇಕು ಎಂದು ಮುಖಂಡ ಶರಣಪ್ಪ ತಳವಾರ ಆಗ್ರಹಿಸಿದರು.

ಕೂಡಲೇ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು. ಈ ನಿಟ್ಟಿನಲ್ಲಿ ಕಾನೂನು ಹೋರಾಟವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಪ್ರಮುಖರಾದ ಬಸವರಾಜ ಬೂದಿಹಾಳ, ಮೋಹನ್ ಪಾಟೀಲ್, ರವಿ ಡೊಂಗರಗಾAವ್, ಚಂದ್ರಕಾAತ ಕಿರಸಾವಳಗಿ, ಸಂತೋಷ ತಳವಾರ, ಬಸವರಾಜ ಗುಂಡಲಗೇರಿ, ಗುರುನಾಥ ಹಾವನೂರ, ಗುಂಡು ಮಾಪೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net