ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರ ಲೋಕಸಭಾ ಮೀಸಲು ಕ್ಷೇತ್ರದಿಂದ ಕಾಂಗ್ರೇಸ್ ಮತ್ತು ಜೆಡಿಎಸ್, ಬಿಜೆಪಿ ಮೈತ್ರಿ ಪಕ್ಷದಿಂದ ಅಧಿಕೃತ ಅಭ್ಯರ್ಥಿಗಳು ಘೋಷಣೆಯಾದ ನಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ಕಾವು ರಂಗೇರಿದ್ದು, ಮೈತ್ರಿ ಮತ್ತು ಕಾಂಗ್ರೇಸ್ ಪಕ್ಷದಿಂದ ಮುಖಂಡರ ವಾಕ್ ಸಮರಗಳು ಮುಂದುವರೆದಿವೆ.
ಮೈತ್ರಿ ಪಕ್ಷದ ಅಭ್ಯರ್ಥಿ ಎಂ.ಮಲ್ಲೇಶ್ ಬಾಬು ಸ್ಥಳೀಯ ಅಭ್ಯರ್ಥಿಯಾಗಿದ್ದು, ೨ ಬಾರಿ ಬಂಗಾರಪೇಟೆ ಕ್ಷೇತ್ರದಿಂದ ಕೆಲವೇ ಮತಗಳ ಅಂತರದಿAದ ಪರಾಭವಗೊಂಡಿದ್ದಾರೆ. ಅನುಕಂಪದ ಅಲೆ ಅವರ ಮೇಲೆ ಇದೆ. ಕಾಂಗ್ರೇಸ್ ಅಭ್ಯರ್ಥಿ ಹೊರಗಿನವರಾಗಿದ್ದಾರೆ. ಕಾಂಗ್ರೇಸ್ ಪಕ್ಷದಲ್ಲಿ ಒಡೆದ ಮನೆಯಾಗಿದೆ ಎಂದು ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಎನ್.ಡಿ.ಎ. ಅಭ್ಯರ್ಥಿ ಪರವಾಗಿ ಮತಯಾಚನೆ ನಡೆಸಿ, ಸಭೆ ಸಮಾರಂಭಗಳಲ್ಲಿ ಕಾಂಗ್ರೇಸ್ ಪಕ್ಷದ ವಿರುದ್ಧ ವಾಕ್ ಸಮರವನ್ನು ನಡೆಸುತ್ತಿದ್ದಾರೆ.
ಕಾಂಗ್ರೇಸ್ ಮುಖಂಡರೂ ಸಹ ಅಭ್ಯರ್ಥಿ ಗೌತಮ್ ಪರವಾಗಿ ಮತಯಾಚನೆ ನಡೆಸುತ್ತಾ ಹೊರಗಿನವರು ಎಂಬ ಅಪ ಪ್ರಚಾರವನ್ನು ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಮಾಡುತ್ತಿದ್ದಾರೆ. ಹೊರಗಿನವರನ್ನು ತಂದಿದ್ದು ಜೆಡಿಎಸ್ ನವರು ಮಾಲೂರಿನಲ್ಲಿ ಮಂಜುನಾಥಗೌಡ, ಚಿಂತಾಮಣಿಯಲ್ಲಿ ಜೆ.ಕೆ.ಕೃಷ್ಣಾರೆಡ್ಡಿ, ಕೋಲಾರದ ವರ್ತೂರು ಪ್ರಕಾಶ್ ಇವರೆಲ್ಲಾ ಹೊರಗಿನವರಲ್ಲವೇ ಹಣದ ಆಸೆಗಾಗಿ ಜೆಡಿಎಸ್ ಬಿಜೆಪಿ ಹೊಂದಾಣಿಕೆ ರಾಜಕಾರಣವನ್ನು ಮುಂದುವರೆಸಿದ್ದಾರೆ ಎಂದು ವಾಕ್ ಸಮರಗಳ ಮೂಲಕ ಸಭೆ ಸಮಾರಂಭಗಳಲ್ಲಿ ಮಾತನಾಡುತ್ತಿದ್ದಾರೆ.
ಎನ್.ಡಿ.ಎ ಮತ್ತು ಕಾಂಗ್ರೇಸ್ನಿAದ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಗಳನ್ನು ನಡೆಸುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಎಲ್ಲಾ ತಾಲ್ಲೂಕುಗಳಲ್ಲಿ ಸಮನ್ವಯ ಸಭೆಗಳನ್ನು ನಡೆಸುವ ಮೂಲಕ ಕಾರ್ಯಕರ್ತರಲ್ಲಿ ಹೊಂದಾಣಿಕೆ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ಕಾಂಗ್ರೇಸ್ನಲ್ಲಿ ಅಭ್ಯರ್ಥಿ ಸಮ್ಮುಖದಲ್ಲಿ ಕಾರ್ಯಕರ್ತ ಸಭೆಗಳನ್ನು ನಡೆಸುತ್ತಿದ್ದಾರೆ. ಕಾಂಗ್ರೇಸ್ ಕೆ.ಹೆಚ್.ಮುನಿಯಪ್ಪ ಮತ್ತು ಪುತ್ರಿ ಶಾಸಕಿ ರೂಪಕಲಾ ಮಾತ್ರ ಸಭೆ ಸಮಾರಂಭಗಳಿAದ ದೂರ ಉಳಿದಿದ್ದಾರೆ. ಮುನಿಯಪ್ಪನವರ ಗುಂಪಿನ ಕಾಂಗ್ರೇಸ್ ಪದಾಧಿಕಾರಿಗಳು ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಸದ್ಯಕ್ಕೆ ಎಲ್ಲರೂ ಒಟ್ಟಾಗಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ.
ಸಂಘ ಸಂಸ್ಥೆಗಳ ಮುಖಂಡರುಗಳು ಎಡಗೈ ಬಲಗೈ ಎಂಬ ಭೇದಬಾವಗಳನ್ನು ತಂದು ಸಮುದಾಯಗಳನ್ನು ಒಡೆಯುವ ಕೆಲಸ ಕಾಂಗ್ರೇಸ್ ಶಾಸಕರು ಮತ್ತು ಮುಖಂಡರು ಮಾಡುತ್ತಿದ್ದಾರೆ. ಇದರಿಂದ ಕಾಂಗ್ರೇಸ್ ಪಕ್ಷಕ್ಕೆ ಹೊಡೆತ ಬೀಳುವುದು ಗ್ಯಾರಂಟಿ ಎಂದು ಪತ್ರಿಕಾಗೋಷ್ಠಿಗಳ ಮೂಲಕ ಹೆಚ್ಚರಿಕೆಗಳನ್ನು ನೀಡುತ್ತಿದ್ದಾರೆ.
ಈ ಮಧ್ಯೆ ಪಕ್ಷೇತರ ಅಭ್ಯರ್ಥಿಯಾಗಿಯೂ ಕೆಲವರು ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಇವರು ವಾಪಸ್ಸು ಪಡೆಯುತ್ತಾರೆಯೋ ಅಥವಾ ಚುನಾವಣಾ ಕಣಗಳಲ್ಲಿ ಮುಂದುವರೆಯುತ್ತಾರೆಯೋ ಕಾದು ನೋಡಬೇಕಾಗಿದೆ.
ನಾಮಪತ್ರ ಸಲ್ಲಿಕೆಗೆ ಏ.೪ ಕಡೇ ದಿನವಾಗಿರುವ ಕಾರಣ ಗುರುವಾರ ಅಧಿಕೃತವಾಗಿ ಎನ್.ಡಿ.ಎ. ಅಭ್ಯರ್ಥಿ ಎಂ.ಮಲ್ಲೇಶ್ ಬಾಬು ಮತ್ತು ಕಾಂಗ್ರೇಸ್ ಅಭ್ಯರ್ಥಿ ಗೌತಮ್ ನಾಮಪತ್ರಗಳನ್ನು ತಮ್ಮ ಅಪಾರ ಬೆಂಬಲಗಳೊAದಿಗೆ ಆಗಮಿಸಿ ಸಲ್ಲಿಸಲಿದ್ದಾರೆ. ನಂತರ ಕೋಲಾರ ನಗರದಲ್ಲಿ ಎರಡು ಕಡೆಯ ಪಕ್ಷಗಳಿಂದ ರೋಡ್ಶೋಗಳನ್ನು ನಡೆಸಿ, ಪ್ರಚಾರಗಳನ್ನು ನಡೆಸಲಿದ್ದಾರೆ.
ಚಿತ್ರ ೦೩ ಕೆ.ಎಲ್.ಆರ್. ೦೧ : ಅಭ್ಯರ್ಥಿಗಳ ಭಾವಚಿತ್ರಗಳು