ಕೋಲಾರದಲ್ಲಿ ಡಾ.ರಾಜ್‌ಕುಮಾರ್ ಜನ್ಮದಿನಾಚರಣೆ ಕಾರ್ಯಕ್ರಮ / ಡಾ. ರಾಜ್ ಒಂದು ಶಕ್ತಿ / ಆದಿಶಕ್ತಿಯಾಗಿಯೇ ಉಳಿಯಲಿ / ಬಿವಿ ಗೋಪಿನಾಥ್

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಡಾ. ರಾಜಕುಮಾರ್ ರವರು ಒಂದು ಶಕ್ತಿ. ಅದು ಆದಿಶಕ್ತಿಯಾಗಿಯೇ ಉಳಿಯಲಿ. ಇಂದಿಗೂ ಇಡೀ ರಾಜ್ಯ ರಾಜಕುಮಾರ ಅವರ ಜನ್ಮದಿನವನ್ನು ಆಚರಿಸುತ್ತಿರುವುದು ಇದಕ್ಕೆ ಸಾಕ್ಷಿ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಿವಿ ಗೋಪಿನಾಥ್ ಅವರು ತಿಳಿಸಿದರು.

ನಗರದ ಎಂಜಿ ರಸ್ತೆಯಲ್ಲಿರುವ ಗಾಂಧಿ ಚೌಕದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಪಕ್ಷ ಕೋಲಾರ ಜಿಲ್ಲಾ ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಸಹಯೋಗದಲ್ಲಿ ಗುರುವಾರ ಕನ್ನಡ ಸೇನಾನಿ ಮ. ರಾಮಮೂರ್ತಿ ಹಾಗೂ ಕನ್ನಡ ಕಣ್ಮಣಿ ಡಾ. ರಾಜಕುಮಾರ್ ಅವರ ೯೭ನೇ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಕನ್ನಡ ಸೇನಾನಿ ಮ. ರಾಮಮೂರ್ತಿ ಕನ್ನಡಕ್ಕಾಗಿ ಹಾಗೂ ಕರ್ನಾಟಕಕ್ಕಾಗಿ ಅನೇಕ ಹೋರಾಟಗಳು ಮಾಡಿದ್ದಾರೆ. ಕರ್ನಾಟಕಕ್ಕೆ ಅವರ ಕೊಡುಗೆ ಅಪಾರ. ಡಾ. ರಾಜಕುಮಾರ್ ಅವರಿಗೂ ಹಾಗೂ ಕೋಲಾರಕ್ಕೂ ಅವಿನಾಭಾವ ಸಂಬAಧವಿದೆ. ಅದಕ್ಕೆ ಕಾರಣ ಗೋಕಾಕ್ ಚಳುವಳಿ ನಡೆಯುವಾಗ ಕೋಲಾರ ಜಿಲ್ಲೆಯ ಕೆ ಜಿ ಎಫ್ ತಾಲ್ಲೂಕನ್ನು ಕರ್ನಾಟಕಕ್ಕೆ ಸೇರಿಸಲು ಹೋರಾಟದಲ್ಲಿ ಭಾಗಿಯಾಗಿದ್ದರು.

ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆ ಒಂದೇ ಆಗಿದ್ದಾಗ ಸುಮಾರು ೮೫ ವರ್ಷಗಳ ಹಿಂದೆಯೇ ಭೀಕರ ಬರಗಾಲ ಸಂಭವಿಸಿದ್ದರಿAದ ಗುಡಿಬಂಡೆ, ಬಾಗೇಪಲ್ಲಿ ಮುಂತಾದವುಗಳ ಕಡೆ ಜಾನುವಾರುಗಳಿಗೆ ಮೇವು ಹಾಗೂ ಜನರಿಗೆ ತಿನ್ನಲು ಊಟವಿಲ್ಲದ ಸಮಯದಲ್ಲಿ ಗಂಜಿ ಕೇಂದ್ರಗಳನ್ನು ತೆರೆಯುವ ಮೂಲಕ ಒಂದು ಕಾರ್ಯಕ್ರಮ ಮಾಡಿ, ವೇದಿಕೆ ಮೇಲೆ ೫ ಲಕ್ಷ ನಗದು ಹಣ ಘೋಷಣೆ ಮಾಡಿದ್ದರು. ಇಂತಹ ಅನೇಕ ಹೋರಾಟಗಳು ಹಾಗೂ ಇವರ ಸೇವೆ ಕನ್ನಡಕ್ಕಾಗಿ ಕರ್ನಾಟಕಕ್ಕಾಗಿ ಅನೇಕ ಸೇವೆಯನ್ನು ನೀಡಿದ್ದಾರೆ. ಸೂರ್ಯ-ಚಂದ್ರ ಇರುವವರೆಗೂ ಡಾ. ರಾಜಕುಮಾರ್ ಅವರ ಹೆಸರು ಅಜರಾಮರವಾಗಿ ಉಳಿದಿದೆ ಎಂದು ಹೇಳಿದರು.

ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘ ಅಧ್ಯಕ್ಷರಾದ ಕೆ.ಎಸ್ ಗಣೇಶ್ ಮಾತನಾಡಿ, ಡಾ.ರಾಜಕುಮಾರ ಅವರಿಗೆ ಯಾವುದೇ ಜಾತಿ ಇಲ್ಲ. ಅವರಿಗೆ ಜಾತಿ ಎಂದರೆ ಕನ್ನಡ, ಅವರ ಧರ್ಮವೆಂದರೆ ಕರ್ನಾಟಕ. ಕೋಲಾರಕ್ಕೆ ಡಾ. ರಾಜಕುಮಾರ್ ಅವರ ಪರಿಚಯ ಚಲನಚಿತ್ರಕ್ಕೆ ಬರುವುದರ ಮೊದಲೇ ಅವರಿಗೂ ಕೋಲಾರಕ್ಕೂ ಅವಿನಾಬಾವ ಸಂಬAಧವಿದೆ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು. ಟಿ. ಚನ್ನಯ್ಯ ರಂಗಮAದಿರ, ಜಿಲ್ಲಾ ಒಳಾಂಗಣ ಕ್ರೀಡಾಂಗಣಕ್ಕೆ ರಾಜಕುಮಾರ ರವರು ಕೋಲಾರ ಜಿಲ್ಲೆಯಲ್ಲಿ ರಸಮಂಜರಿ ಕಾರ್ಯಕ್ರಮ ಮಾಡುವ ಮೂಲಕ ಕಟ್ಟಡಗಳನ್ನು ನಿರ್ಮಾಣ ಮಾಡುವುದಕ್ಕೆ ಧನಸಹಾಯ ಮಾಡಿದರೆಂದು ಹೇಳಿದರು. ಒಳಾಂಗಣ ಕ್ರೀಡಾಂಗಣಕ್ಕೆ ಡಾ. ರಾಜಕುಮಾರ್ ಅವರ ಹೆಸರು ಇಡಬೇಕು ಹಾಗೂ ಒಂದು ಸ್ಮಾರಕವನ್ನು ನಿರ್ಮಿಸಬೇಕು ಎಂದು ಜಿಲ್ಲಾಡಳಿತಕ್ಕೆ ಒತ್ತಾಯ ಮಾಡಿದರು.

ಕಾರ್ಯಕ್ರಮಕ್ಕೂ ಮುನ್ನ ಮಂಗಳವಾರ ಕಾಶ್ಮೀರದಲ್ಲಿ ಮೃತಪಟ್ಟವರಿಗೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮೌನಾಚರಣೆ ಮಾಡಲಾಯಿತು.

ಡಾ.ರಾಜ್ ನೆನಪಿಸುವ ಸುಮಧುರ ಗೀತೆಗಳ ಗಾಯನ ಕಾರ್ಯಕ್ರಮವಾದ ಚಂದನ ವಾಹಿನಿಯ ಗಾನ ಚಂದನ ಖ್ಯಾತಿಯ ಹರ್ಷಿತ್ ವೈ. ಮತ್ತು ತಂಡದಿAದ ಡಾ.ರಾಜಕುಮಾರ್ ಗಾನ ಸುಧೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಕನ್ನಡ ಸೇನಾನಿ ಮ. ರಾಮಮೂರ್ತಿ ನೆನಪಿನಲ್ಲಿ ನೀಡುವ ಪ್ರಶಸ್ತಿ ಕನ್ನಡ ಕಟ್ಟಾಳು ೨೦೨೫ ಹಾಗೂ ವರನಟ ಡಾ. ರಾಜಕುಮಾರ್ ಅವರ ನೆನಪಿನಲ್ಲಿ ನೀಡುವ ಪ್ರಶಸ್ತಿ ಅಭಿಮಾನಿ ಕನ್ನಡಿಗ ೨೦೨೫ ಪ್ರಶಸ್ತಿ ವಿಜೇತದ ಕೋಲಾರದ ಹಿರಿಯ ಕನ್ನಡ ಹೋರಾಟಗಾರರು ಅಂಚೆ ಅಶ್ವತ್, ಕನ್ನಡ ಹೋರಾಟಗಾರರು ಡಿಎಸ್ ಪಂಡರಿನಾಥ್, ಡಾ. ರಾಜ್ ಕಟ್ಟ ಅಭಿಮಾನಿ ಕೆ. ಗೋಪಿನಾಥ್, ಬೆಂಗಳೂರು ಹಿರಿಯ ಕನ್ನಡ ಹೋರಾಟಗಾರರು ಕಿ. ರಾಮಚಂದ್ರ, ಹೊಸಕೋಟೆ ಡಾ. ರಾಜ್ ಕಟ್ಟ ಅಭಿಮಾನಿ ಎನ್. ವೆಂಕಟೇಶ್, ಬಂಗಾರಪೇಟೆ ಡಾ. ರಾಜ್ ಕಟ್ಟ ಅಭಿಮಾನಿ ಬೇಕರಿ ಶ್ರೀನಿವಾಸ್, ಇವರಿಗೆ ಸನ್ಮಾನ ಮಾಡಿ ಪ್ರಶಸ್ತಿ ಪತ್ರ ನೀಡಲಾಯಿತು.

ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ವಾರ್ತಾಧಿಕಾರಿ ಜಿ. ಮಂಜೇಶ್, ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷರಾದ ಹಾಗೂ ಕನ್ನಡ ಮಿತ್ರ ಪತ್ರಿಕೆ ಸಂಪಾದಕರಾದ ಕೋ.ನ ಪ್ರಭಾಕರ್, ಕನ್ನಡ ಸೇನಾ ರಾಜ್ಯ ಉಪಾಧ್ಯಕ್ಷರಾದ ಕಲಾವಿದ ವಿಷ್ಣು, ಕನ್ನಡಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಆ ಕೃ ಸೋಮಶೇಖರ್, ಬಿ ಆರ್ ಎಂ ಮೆಡಿಕಲ್ ಏಜೆನ್ಸಿಯ ಬಿ ಜಗದೀಶ್. ಕನ್ನಡಪರ ಸಂಘಟನೆಗಳ ಹಿರಿಯ ಹೋರಾಟಗಾರರಾದ ರಂಗ ರಾಮಯ್ಯ, ಡಾ. ರಾಜಕುಮಾರ್ ಅಭಿಮಾನಿಗಳ ಕುಟುಂಬ ಕೆ. ಪಿ ಶ್ರೀಕಾಂತ್ ಅವರು ಸೇರಿದಂತೆ ಡಾ.ರಾಜ್ ಅಭಿಮಾನಿಗಳು ಉಪಸ್ಥಿತರಿದ್ದರು.

ಚಿತ್ರ ೨೪ ಕೆ.ಎಲ್.ಆರ್. ೦೭ : ನಗರದ ಎಂಜಿ ರಸ್ತೆಯಲ್ಲಿರುವ ಗಾಂಧಿ ಚೌಕದಲ್ಲಿ ವರನಟ ಡಾ.ರಾಜ್‌ಕುಮಾರ್ ರವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಜೆ.ಮಂಜೇಶ್, ಕೋ.ನ.ಪ್ರಭಾಕರ್ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net