ಕೋಲಾರ ನಗರದಲ್ಲಿ ಜೂ.೩೦ ರಿಂದ ಸಾರ್ವಜನಿಕರ ಅನುಕೂಲಕ್ಕಾಗಿ ನಗರದಲ್ಲಿ ಸಾರಿಗೆ ಸೇವೆ ಪ್ರಾರಂಭ / ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಕೋಲಾರ ನಗರದಲ್ಲಿ ಜೂ.೩೦ ರಿಂದ ಸಾರ್ವಜನಿಕರ ಅನುಕೂಲಕ್ಕಾಗಿ ನಗರದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೋಲಾರ ವಿಭಾಗದಿಂದ ನಾಲ್ಕು ಬಸ್‌ಗಳಿಂದ ಎರಡು ರೂಟ್‌ಗಳನ್ನು ಒಳಗೊಂಡAತೆ ನಗರ ಸಾರಿಗೆಯನ್ನು ಆರಂಭಿಸಲಾಗುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾದ ಬೈರತಿ ಸುರೇಶ್ ರವರು ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್ ರವಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಶುಕ್ರವಾರ ನಗರದಲ್ಲಿ ಸಾರಿಗೆ ಸೇವೆ ಪ್ರಾರಂಭ ಕುರಿತು ನಡೆಸಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕೋಲಾರ ನಗರವು ದಿನೇ ದಿನೇ ಬೆಳೆಯುತ್ತಿದ್ದು, ನಗರದಲ್ಲಿ ಸಂಚರಿಸಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಾರಿಗೆ ಸೇವೆಯನ್ನು ಪ್ರಾರಂಭಿಸಲಾಗುವುದು. ಪ್ರತಿದಿನ ನಾಲ್ಕು ಬಸ್‌ಗಳು, ೨ ರೂಟ್‌ಗಳ ಮೂಲಕ ಸಂಚಾರ ಪ್ರಾರಂಭ ಮಾಡಲಿದೆ ಎಂದರು.

ಕೋಲಾರ ನಗರದಲ್ಲಿ ನಗರಸಾರಿಗೆ ಪ್ರಾರಂಭ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ನಗರವು ಇನ್ನಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲಿದೆ. ಆದ್ದರಿಂದ ನಗರಸಾರಿಗೆ ವಿಭಾಗವನ್ನು ಪ್ರತ್ಯೇಕಿಸಿ ನಗರಸಾರಿಗೆಗೆ ಪ್ರತ್ಯೇಕ ಡಿಪೋ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಸ್ಥಳವನ್ನು ಗುರ್ತಿಸಲಾಗುವುದು ಎಂದರು.

ಬಸ್‌ಮಾರ್ಗ :

ಸಂಗೊAಡಹಳ್ಳಿಯಿAದ ಹಸಾಳ ಮತ್ತು ವಡಗೂರಿನಿಂದ ಅಮ್ಮೆರಹಳ್ಳಿ ಮಾರ್ಗಗಳಲ್ಲಿ ಪ್ರತಿನಿತ್ಯ ಬೆಳಿಗ್ಗೆ ಏಳು ಗಂಟೆಯಿAದ ರಾತ್ರಿ ಏಳು ಗಂಟೆ ವರೆಗೆ ಒಟ್ಟು ನಾಲ್ಕು ಬಸ್ಸುಗಳು ಸಂಚರಿಸಲಿವೆ. ಈ ಮಾರ್ಗದಲ್ಲಿ ೨೦ ಸ್ಥಳಗಳಲ್ಲಿ ಬಸ್ ನಿಲುಗಡೆ ಮಾಡಲಿವೆ ಎಂದರು.

ನೂತನವಾಗಿ ನಗರ ಸಾರಿಗೆಯನ್ನು ಪ್ರಾರಂಭ ಮಾಡಲಾಗುತ್ತಿರುವುದರಿಂದ ಈ ಮಾರ್ಗದಲ್ಲಿ ಬಸ್ ನಿಲ್ದಾಣಗಳು ಅವಶ್ಯಕತೆ ಇದ್ದು, ಸಂಘ ಸಂಸ್ಥೆ, ರೋಟರಿ ಕ್ಲಬ್‌ಗಳ ಸಹಕಾರದಿಂದ ಬಸ್ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಿ ನಾಮಫಲಕಗಳನ್ನು ಅಳವಡಿಸುವಂತೆ ನಗರಸಭೆ ಅಧಿಕಾರಿಗಳಿಗೆ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಮಂಗಳ, ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣ ಅಧಿಕಾರಿ ಶ್ರೀನಾಥ್, ನಗರಸಭೆ ಆಯುಕ್ತರು ನವೀನ್ ಚಂದ್ರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಅಂಬಿಕಾ, ಎಇಇ ಶ್ರೀನಿವಾಸ್, ಪ್ರಾದೇಶಿಕ ಸಾರಿಗೆ ಅಧಿಕಾರಿ ವೇಣುಗೋಪಾಲ್ ರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಬಾಕ್ಸ್

ಕೋಡಿಕಣ್ಣೂರು ಮತ್ತು ಸಿ.ಬಿ.ಐ.ಟಿ.ಕಾಲೆಜು ಕೈಬಿಟ್ಟ ಸಾರಿಗೆ :

ಕೋಲಾರದಿಂದ ಕೋಡಿಕಣ್ಣೂರು ಮಾರ್ಗವಾಗಿ ಶ್ರೀನಿವಾಸಪುರ ರಸ್ತೆಯ ಸಿ.ಬಿ.ಐ.ಟಿ.ಕಾಲೇಜು ತನಕ ಸಾರಿಗೆ ಸೇವೆ ಮುಂದುವರೆಸಿದ್ದರೆ ಆ ಭಾಗದಲ್ಲಿ ಜನಸಂದಣಿ ಹೆಚ್ಚಾಗಿತ್ತು. ಇದನ್ನು ಸದ್ಯಕ್ಕೆ ಕೈಬಿಟ್ಟಿರುವುದರಿಂದ ಈ ಭಾಗದ ಮೂಲಕವೂ ನಗರಸಾರಿಗೆ ಪ್ರಾರಂಭ ಮಾಡಿದರೆ ಸಿ.ಬಿ.ಐ.ಟಿ.ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಮತ್ತು ಕೋಡಿಕಣ್ಣೂರಿನ ಸಾರ್ವಜನಿಕರಿಗೂ ಅನುಕೂಲವಾಗುತ್ತಿತ್ತು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಬೆಂಗಳೂರು ರಸ್ತೆಯ ಬೆತ್ತನಿ ಬಳಿ ಗಾರ್ಮೆಟ್ಸ್ ಕಾರ್ಖಾನೆ ಇರುವುದರಿಂದ ನಗರದಿಂದ ಪ್ರತಿದಿನ ಸಾವಿರಾರು ಮಹಿಳೆಯರು ಆಟೋಗಳ ಮೂಲಕ ಪ್ರಯಾಣಿಸುತ್ತಿದ್ದಾರೆ. ಬೆಂಗಳೂರು ರಸ್ತೆಯಲ್ಲಿ ಎಕ್ಸ್ಪ್ರೆಸ್ ಬಸ್ಸುಗಳೇ ಹೆಚ್ಚಾಗಿರುವ ಕಾರಣ ಈ ಭಾಗದಲ್ಲಿ ಅರಾಭಿಕೊತ್ತನೂರು ತನಕ ಸಂಚರಿಸುವ ಸಾರ್ವಜನಿಕರಿಗೆ ಬಸ್ ಅನುಕೂಲವಿಲ್ಲದೆ ಪರದಾಡುತ್ತಿದ್ದಾರೆ. ಈ ರಸ್ತೆಗೂ ನಗರಸಾರಿಗೆ ಸಂಚಾರ ವಿಸ್ತರಿಸಬೇಕೆಂಬುದು ಸಾರ್ವಜನಿಕರು ಒತ್ತಾಯಪಡಿಸುತ್ತಿದ್ದಾರೆ.

ಚಿತ್ರ ೨೭ ಕೆ.ಎಲ್.ಆರ್. ೦೫ : ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಗರ ಸಾರಿಗೆ ಪ್ರಾರಂಭ ಕುರಿತು ಪೂರ್ವಭಾವಿ ಸಭೆಯನ್ನು ನಡೆಸಿದ ಜಿಲ್ಲಾಧಿಕಾರಿ ಎಂ.ಆರ್.ರವಿ, ಅಪರ ಜಿಲ್ಲಾಧಿಕಾರಿ ಮಂಗಳ, ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಾಥ್ ಮತ್ತಿತ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net