ಕೋಲಾರ ಜಿಲ್ಲೆಯ ರೈತರಿಗೆ ಕೆರೆ ಕಟ್ಟೆಗಳು ಜೀವನಾಡಿಯಾಗಿವೆ / ಅವನ್ನು ಉಳಿಸುವ ಕಾರ್ಯಭಾರ ನಮ್ಮೆಲ್ಲರ ಮೇಲಿದೆ / ಜಿಲ್ಲಾಧಿಕಾರಿ ಎಂ.ಆರ್.ರವಿ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಕೋಲಾರ ಜಿಲ್ಲೆಯ ರೈತರಿಗೆ ವ್ಯವಸಾಯ ಮಾಡಲು ಯಾವುದೇ ರೀತಿಯ ಶಾಶ್ವತವಾದ ನೀರಾವರಿ ವ್ಯವಸ್ಥೆ ಇಲ್ಲ. ಹಾಗೂ ನಿರಂತರವಾಗಿ ಹರಿಯುವಂತಹ ನದಿಗಳು ಇಲ್ಲದೆ ಇದ್ದರು ಜಿಲ್ಲೆಯ ರೈತರು ಯಾವುದಕ್ಕೂ ಅಂಜದೇ ಹೈನುಗಾರಿಕೆ, ರೇಷ್ಮೆ, ಕೃಷಿ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಕೊಂಡು ವಿದೇಶಗಳಿಗೆ ತರಕಾರಿಗಳನ್ನು ರಫ್ತು ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ತಿಳಿಸಿದರು.

ನಗರದ ಸುವರ್ಣ ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕೃಷಿ ಇಲಾಖೆ, ಕೃಷಿ ಸಾಂಸ್ಕೃತಿಕ ಕೇಂದ್ರ ಕೋಲಾರ ಇವರ ಸಹಯೋಗದಲ್ಲಿ ಸೋಮವಾರ ೪೬ ನೇ ರೈತ ಹುತಾತ್ಮರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು.

ರೈತರು ನೆಮ್ಮದಿಯಾಗಿದ್ದರೆ ರಾಜಕೀಯ ಆರ್ಥಿಕ ಸಾಮಾಜಿಕ ಸುಗಮವಾಗಿ ನಡೆಯುತ್ತದೆ. ರೈತರಿಗೆ ಕೃಷಿ ಮಾಡಲು ಬೇಕಾದಂತಹ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಋತುಮಾನಕ್ಕೆ ತಕ್ಕಂತೆ ಬೆಲೆ ಮತ್ತು ಬೆಳೆ ಇದ್ದರೆ ಎಲ್ಲವೂ ಸರಾಗವಾಗಿ ನಡೆಯುತ್ತದೆ. ಇಲ್ಲದೆ ಹೋದರೆ ರೈತರು ಸರ್ಕಾರವನ್ನು ಅಲುಗಾಡಿಸುವ ಕೆಲಸವನ್ನು ಮಾಡುತ್ತಾರೆ ಎಂದರು.

ಜಿಲ್ಲೆಯಲ್ಲಿ ಶಾಶ್ವತ ನೀರಾವರಿ, ಬರಗಾಲ ಸೇರಿದಂತೆ ಅನೇಕ ಸಮಸ್ಯೆಗಳು ಬಂದರೂ ಯಾವುದನ್ನು ಲೆಕ್ಕಿಸದೆ ವ್ಯವಸಾಯ ಮಾಡಿ. ನನ್ನ ದೇಶದ ಜನರಿಗೆ ಆಹಾರವನ್ನು ನೀಡುವುದು ನನ್ನ ಕರ್ತವ್ಯ ಎಂಬುದನ್ನು ಪಾಲನೆ ಮಾಡುತ್ತಿದ್ದಾರೆ. ರಾಜ್ಯದ ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡರು. ನಮ್ಮ ಕೋಲಾರ ಜಿಲ್ಲೆಯ ರೈತರು ದೃಢ ಸಂಕಲ್ಪ ಮಾಡಿ, ಇಂದಿಗೂ ತಮ್ಮ ಕೃಷಿ ಚಟುವಟಿಕೆಗಳನ್ನು ನಂಬಿಕೊAಡು ಮುಂದುವರಿಸಿಕೊAಡು ಬರುತ್ತಿದ್ದಾರೆ ಎಂದರು.

ರೈತ ಮತ್ತು ಭೂಮಿ ನಡುವಿನ ಸಂಬAಧ ತಾಯಿ ಮಕ್ಕಳ ಸಂಬAದ ಇದ್ದಂತೆ. ತಾಯಿ ತನ್ನ ಮಕ್ಕಳನ್ನು ಯಾವ ರೀತಿ ಬಿಟ್ಟುಕೊಡುವುದ್ದಿಲ್ಲವೋ ಅದೇ ರೀತಿ ಭೂಮಿಯು ಸಹ ತನ್ನನ್ನು ನಂಬಿಕೊAಡಿರುವ ರೈತನನ್ನು ಯಾವತ್ತಿಗೂ ಬಿಟ್ಟುಕೊಡುವುದಿಲ್ಲ ಎಂದು ತಿಳಿಸಿದರು.

ಜಿಲ್ಲೆಯ ರೈತರ ಹೋರಾಟದ ಫಲವಾಗಿ ಇಂದು ನಮ್ಮದೇ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಮತ್ತು ರಾಜ್ಯದ ಮಾವು ಬೆಳೆಗಾರರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ಬೆಂಬಲ ಬೆಲೆ ಘೋಷಣೆ ಮಾಡಿದ್ದಾರೆ. ಅದರಲ್ಲಿ ೧೩೮೬೯ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಬಿಲ್ ಸಲ್ಲಿಸಿರುವವರಿಗೆ ನೇರವಾಗಿ ಡಿಬಿಟಿ ಮೂಲಕ ಹಣವನ್ನು ಪಾವತಿಸಲಾಗಿದೆ. ಇದೆ ತಿಂಗಳು ೨೪ ಕೊನೆ ದಿನಾಂಕ ಆಗಿರುವುದರಿಂದ ಉಳಿದ ಮಾವು ಬೆಳೆಗಾರರು ನೋಂದಣಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಕೋಲಾರ ಜಿಲ್ಲೆಯ ರೈತರಿಗೆ ೩೨೧೨ ಕೆರೆ ಕಟ್ಟೆಗಳು ಜೀವನಾಡಿಯಾಗಿವೆ. ಕೆರೆಗಳನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು, ಅದನ್ನು ಏ ಐ ತಂತ್ರಜ್ಞಾನ ಬಳಕೆ ಮಾಡಿಕೊಂಡು ಒತ್ತುವರಿ ತೆರವು ಮಾಡಿ ಉಳಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಈ ಕಾರ್ಯ ಶೇಕಡಾ ೮೦ ರಷ್ಟು ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಒತ್ತುವರಿ ತೆರವು ಪೂರ್ಣಗೊಳಿಸಲಿದ್ದೇವೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ನಿಖಿಲ್ ಮಾತನಾಡಿ, ರೈತನು ತನ್ನ ಹೆಗಲ ಮೇಲೆ ಕೇವಲ ನೇಗಿಲು ಮಾತ್ರ ಹೊತ್ತಿಕೊಂಡಿಲ್ಲ. ಅದರೊಂದಿಗೆ ದೇಶದ ಆರ್ಥಿಕ ಶಕ್ತಿಯನ್ನು ಸಹ ಹೊತ್ತುಕೊಂಡಿದ್ದಾರೆ. ರೈತರ ಸಂರಕ್ಷಣೆ ಮಾಡುವುದನ್ನು ನಾವು ಪೊಲೀಸ್ ಇಲಾಖೆಗೆ ಸೇರುವ ಮುನ್ನವೇ ತರಬೇತಿಯ ಅವಧಿಯಲ್ಲಿ ವಿಶೇಷವಾಗಿ ತಿಳಿಸಿರುತ್ತಾರೆ. ಅದಕ್ಕೆ ಮುಖ್ಯ ಕಾರಣ ೧೯೮೦ ರಲ್ಲಿ ನಡೆದಂತಹ ನರಗುಂದ ಮತ್ತು ನವಲಗುಂದ ಘಟನೆ ಎಂದು ತಿಳಿಸಿದರು.

ರೈತರ ಹೆಗಲ ಮೇಲಿರುವ ಹಸಿರು ಬಣ್ಣದ ಟವಲ್ ಅಲ್ಲ. ಅದು ಅವರ ಶಕ್ತಿ ಆಗಿರುತ್ತದೆ. ಅವರು ಯಾವುದೇ ರೀತಿಯ ಹೋರಾಟಗಳನ್ನು ಮಾಡಿ, ಬೇಕಾದ ಸೌಲಭ್ಯಗಳನ್ನು ಪಡೆಯುವ ಶಕ್ತಿ ರೈತರಿಗೆ ಇದೆ ಎಂದರು.

ರೈತರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಬಾಗಿಲು ಎಂದಿಗೂ ತೆರೆದಿಡಲಾಗಿರುತ್ತದೆ. ಮುಕ್ತವಾಗಿ ಬಂದು ತಾವು ದೂರುಗಳನ್ನು ಮತ್ತು ತಮ್ಮ ಸಮಸ್ಯೆಗಳನ್ನು ತಿಳಿಸಬಹುದು ಎಂದರು.

ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ರೈತರು ಇಂದು ಹೊನ್ನನ್ನು ಬಿತ್ತುತ್ತಿಲ್ಲ. ತಮ್ಮ ಕಣ್ಣೀರು ರಕ್ತವನ್ನು ಭೂಮಿಯಲ್ಲಿ ಬಿತ್ತನೆ ಮಾಡುತ್ತಿದ್ದಾರೆ. ಅಂತಹ ಪರಿಸ್ಥಿತಿ ನಾವು ಕಾಣಬಹುದಾಗಿದೆ. ನಮ್ಮ ಹೊಲಗಳಲ್ಲಿ ನಾವು ಹೊನ್ನು ಬಿತ್ತಲು ಸಾದ್ಯವಿಲ್ಲ. ಯಾಕೆಂದರೆ ಮುಂದಿನ ದಿನಗಳಲ್ಲಿ ನಮಗೆ ಕೆರೆ ಮತ್ತು ಹೊಳೆಗಳು ಇರುವುದಿಲ್ಲ. ಸರ್ಕಾರದ ಕಾಯ್ದೆಗಳಿಂದ ನಾವು ಭೂಮಿಯನ್ನು ಕಳೆದುಕೊಳ್ಳಲಿದ್ದೇವೆ ಎಂದು ಹೆಚ್ಚರಿಸಿದರು.

ಮುಂದಿನ ದಿನಗಳಲ್ಲಿ ನಮ್ಮ ಜಮೀನುಗಳಲ್ಲಿ ಮದ್ದು ಗುಂಡುಗಳನ್ನು ಬೆಳೆಯಬೇಕಾಗುತ್ತದೆ. ಒಬ್ಬ ರೈತ ೯೯ ರಷ್ಟು ಜನರಿಗೆ ಆಹಾರ ಬೆಳೆಯುವ ಕಾಲ ಬರುತ್ತದೆ ಎಂಬುದನ್ನು ಕಾಣಬೇಕಾಗುತ್ತದೆ. ಆದ್ದರಿಂದ ನಮ್ಮ ಭೂಮಿಯನ್ನು ನಾವು ರಕ್ಷಿಸಿಕೊಳ್ಳದೆ ಇದ್ದರೆ ನಮಗೆ ತಿನ್ನಲು ಆಹಾರವು ಸರಿಯಾಗಿ ಸಿಗುವುದಿಲ್ಲ ಎಂದು ತಿಳಿಸಿದರು.

ನಮ್ಮ ನೆಲದಲ್ಲಿ ನಾವು ಯಾಕೆ ಡ್ರ‍್ಯಾಗನ್ ಪ್ರುಟ್ ಬೆಳೆಯಬೇಕು. ನಮ್ಮದೇ ದೇಶದ ಹಣ್ಣುಗಳನ್ನು ನಾವು ಯಾಕೆ ಬೆಳೆಯಬಾರದು ಎಂದು ನಮ್ಮನ್ನು ನಾವು ಪ್ರೇಶ್ನಿಸಿಕೊಳ್ಳಬೇಕು ಎಂದು ತಿಳಿಸಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಸುಮ, ರಾಜ್ಯ ಕಾರ್ಯಧ್ಯಕ್ಷರಾದ ಚಲ್ಲಘಟ್ಟದ ಸಿದ್ಧವೀರಪ್ಪ, ರಾಜ್ಯ ಕಾರ್ಯಧ್ಯಕ್ಷರಾದ ಅಬ್ಬಣಿ ಶಿವಪ್ಪ, ರಾಜ್ಯ ಉಪಾಧ್ಯಕ್ಷರಾದ ಬಸನಹಳ್ಳಿ ಬೈಚೇಗೌಡ, ಬಯಲು ಸೀಮೆ ಕಾರ್ಯದರ್ಶಿ ಪ್ರಭಾಕರ್ ಗೌಡ, ರಾಜ್ಯ ಮಹಿಳಾ ಸಂಚಾಲಕರಾದ ರಾಧಮ್ಮ, ಜಿಲ್ಲಾಧ್ಯಕ್ಷರಾದ ಬೇಡ ಶೆಟ್ಟಿಹಳ್ಳಿ ರಮೇಶ್, ಹಸಿರು ಸೇನೆ ಸಂಚಾಲಕರಾದ ಆನಂದ್ ಕುಮಾರ್, ಹರೀಶ್, ನರಸಿಂಹಪ್ಪ, ಶಂಕರ್, ಮುನಿವೆಂಕಟಪ್ಪ, ಸುರೇಶ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಚಿತ್ರ ೨೧ ಕೆ.ಎಲ್.ಆರ್. ೦೪ : ನಗರದ ಸುವರ್ಣ ಕನ್ನಡ ಭವನದಲ್ಲಿ ೪೬ ನೇ ರೈತ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ.ಆರ್.ರವಿ ಮಾತನಾಡಿದರು.

ಚಿತ್ರ ೨೧ ಕೆ.ಎಲ್.ಆರ್. ೦೪ : ನಗರದ ಸುವರ್ಣ ಕನ್ನಡ ಭವನದಲ್ಲಿ ೪೬ ನೇ ರೈತ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ.ಆರ್.ರವಿ, ಎಸ್.ಪಿ.ಬಿ.ನಿಖಿಲ್, ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net