ಕೋಲಾರ ಜಿಲ್ಲೆಗೆ ರಾಜ್ಯ ಮಟ್ಟದ ೬ ರಾಜ್ಯೋತ್ಸವ ಪ್ರಶಸ್ತಿಗಳು / ಜಿಲ್ಲಾ ಮಟ್ಟದ ೧೬ ಪ್ರಶಸ್ತಿಗಳು / ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರು

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ರಾಜ್ಯ ಸರ್ಕಾರ ೬೯ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಗಣ್ಯರಿಗೆ ಕೊಡ ಮಾಡಿರುವ ೨೦೨೪ ಮತ್ತು ೨೫ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಕೋಲಾರ ಜಿಲ್ಲೆಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ನಾಲ್ವರಿಗೆ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಇಬ್ಬರಿಗೆ ಸುವರ್ಣ ಮಹೋತ್ಸವ ಪ್ರಶಸ್ತಿ ಮತ್ತು ಜಿಲ್ಲಾ ಮಟ್ಟದಲ್ಲಿ ಕೊಡ ಮಾಡಿರುವ ೧೬ ಸಾಧಕರಿಗೆ ಪ್ರಶಸ್ತಿಗಳು ಲಭಿಸಿವೆ.

ರಾಜ್ಯ ಮಟ್ಟದಲ್ಲಿ ಜಾನಪದ ಕ್ಷೇತ್ರದಿಂದ ಪಿಚ್ಚಹಳ್ಳಿ ಶ್ರೀನಿವಾಸ್, ಸಂಕೀರ್ಣ ಕ್ಷೇತ್ರದಿಂದ ಅ.ನಾ.ಪ್ರಹ್ಲಾದ್‌ರಾವ್, ರಂಗಭೂಮಿಯಿAದ ಭಾಗ್ಯಶ್ರೀ ರವಿ, ನ್ಯಾಯಾಂಗ ಇಲಾಖೆಯಿಂದ ಎನ್.ಬಾಲನ್ ಹಾಗೂ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಂಕೀರ್ಣ ಕ್ಷೇತ್ರದಿಂದ ಆರ್. ವೆಂಕಟರವಣಪ್ಪ, ಸಮಾಜಸೇವೆಯಿಂದ ಪದ್ಮರವರಿಗೆ ಪ್ರಶಸ್ತಿಗಳು ಲಭಿಸಿವೆ. ಇದರ ಜೊತೆಗೆ ಕೋಲಾರ ಜಿಲ್ಲಾ ಮಟ್ಟದಲ್ಲಿ ೧೬ ಸಾಧಕರನ್ನು ಗುರ್ತಿಸಿ ಅವರನ್ನು ಸನ್ಮಾನಕ್ಕೆ ಆಯ್ಕೆ ಮಾಡಿದ್ದಾರೆ.

ಎನ್.ಬಾಲನ್

ಕನ್ನಡ ನಾಡು ನುಡಿಗೆ ನೀಡಿದ ಅನನ್ಯ ಸೇವೆಯನ್ನು ಗುರ್ತಿಸುವತ್ತ ಕರ್ನಾಟಕದ ಹಿರಿಯ ವಕೀಲ ಎನ್.ಬಾಲನ್ ರವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಕಾನೂನು ಕ್ಷೇತ್ರದಲ್ಲಿ ಅವರ ದೀರ್ಘಕಾಲದ ಅನುಭವ ಮತ್ತು ಜನಪರ ನೈತಿಕತೆಗೆ ಕೊಡುಗೆ ನೀಡಿರುವ ಎನ್.ಬಾಲನ್ ರವರು ಕರ್ನಾಟಕ ಕಾನೂನು ವೃತ್ತಿ ಜೀವನದಲ್ಲಿ ಪ್ರಭಾವಶಾಲಿ ವ್ಯಕ್ತಿತ್ವವನ್ನು ಮಾರ್ಗದರ್ಶಕ ಸ್ಥಾನವನ್ನು ಹೊಂದಿದ್ದಾರೆ.

ಬಾಲನ್ ರವರು ಕಾನೂನು ಕ್ಷೇತ್ರದಲ್ಲಿ ಹಲವು ಪ್ರತಿಷ್ಠಿತ ಮತ್ತು ಸಂಕೀರ್ಣ ಪ್ರಕರಣಗಳನ್ನು ಹತೋಟಿಯಲ್ಲಿಟ್ಟಿದ್ದಾರೆ. ಗೌರಿ ಲಂಕೇಶ್ ಪ್ರಕರಣ, ಕಲ್ಲಡಕ ಪ್ರಭಾಕರ್ ಪ್ರಕರಣ, ಬಿ.ಎಸ್.ವೈ.ಫೋಸ್ಕೋ ಪ್ರಕರಣದಲ್ಲಿ ಸಂತ್ರಸ್ಥರ ಪರ ಉಚಿತ ವಕೀಲಿಕೆ ನಡೆಸುತ್ತಿದ್ದಾರೆ.

ಬಾಲನ್ ರವರು ಈ ಪ್ರಶಸ್ತಿಗೆ ಆಯ್ಕೆ ಆಗಿರುವುದು ಕಾನೂನು ಕ್ಷೇತ್ರಕ್ಕೆ ಹಾಗೂ ಸಮಾಜದ ಮೇಲೆ ಅವರ ಧೀರ್ಘಕಾಲದ ಶ್ರದ್ಧೆಯ ಮಾದರಿಯಾಗಿದೆ. ಇವರು ಕೋಲಾರ ಜಿಲ್ಲೆಯ ಕೆ.ಜಿ.ಎಫ್. ಮೂಲದವರಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ನೆಲಸಿದ್ದಾರೆ.

******************************************************************************************

ಪಿಚ್ಚಹಳ್ಳಿ ಶ್ರೀನಿವಾಸ್

ಪಿಚ್ಚಹಳ್ಳಿ ಶ್ರೀನಿವಾಸ್ ರವರು ನಾಡಿನ ಪ್ರಮುಖ ಸಾಮಾಜಿಕ ಸಂಘಟನೆಯಾದ "ದಲಿತ ಸಂಘರ್ಷ ಸಮಿತಿ" ಯ"ದಲಿತ ಕಲಾ ಮಂಡಲಿ"ಮುಖಾAತರ ರಾಜ್ಯಾದ್ಯಂತ ತಳ ಸಮುದಾಯಗಳಲ್ಲಿ ಸಾವಿರಾರು ಅರಿವಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ೨೫ಕ್ಕೂ ಹೆಚ್ಚು ಸಾಕ್ಷö್ಯ ಚಿತ್ರಗಳಿಗೆ ಸಂಗೀತ ನಿರ್ದೇಶನ, ೧೫ ನಾಟಕಗಳಿಗೆ ನಿರ್ದೇಶನ, ೫ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮತ್ತು ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ, ೧೬ಕ್ಕೂ ಹೆಚ್ಚು ಚಲನಚಿತ್ರ ರಂಗದಲ್ಲಿ ನಿರ್ದೇಶನ, ಕರ್ನಾಟಕ ಅಕಾಡೆಮಿ ಅಂಬೇಡ್ಕರ್ ಪ್ರಶಸ್ತಿ, ಜಗಜೀವನರಾಂ ಪ್ರಶಸ್ತಿ, ನಾಡಚೇತನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಜಾನಪದ ಅಕಾಡೆಮಿ ಅಧ್ಯಕ್ಷರಾಗಿ ಸದ್ಯ ಕೋಲಾರ ಜಿಲ್ಲೆಯ ಸಾರಂಗರAಗ ಸಾಂಸ್ಕೃತಿಕ ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ಆಗಿದ್ದು, ಕೋಲಾರ ಜಿಲ್ಲೆಯ ಪಿಚ್ಚಹಳ್ಳಿ ಗ್ರಾಮದವರಾಗಿದ್ದು, ಇವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಜಿಲ್ಲೆಗೆ ಗೌರವ ತಂದAತಾಗಿದೆ.

******************************************************************************************

ಅ.ನಾ.ಪ್ರಹ್ಲಾದ್‌ರಾವ್

ಕೋಲಾರದ ಹೊನ್ನುಡಿ ಪತ್ರಿಕೆ ಮೂಲಕ ಪತ್ರಿಕೋದ್ಯಮವನ್ನು ಪ್ರಾರಂಭಿಸಿದ ಅ.ನಾ.ಪ್ರಹ್ಲಾದ್‌ರಾವ್ ನಂತರ ವಾರ್ತಾ ಇಲಾಖೆ ಅಧಿಕಾರಿಯಾಗಿ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ಈಗ ಪ್ರಸ್ತುತ ಸಚಿವ ಪ್ರಿಯಾಂಕ ಖರ್ಗೆಯ ಬಳಿ ಮಾಧ್ಯಮ ಸಲಹೆಗಾರರಾಗಿದ್ದಾರೆ.

ಕನ್ನಡದಲ್ಲಿ ೪೫ ಸಾವಿರ ಪದಬಂಧಗಳನ್ನು ರಚಿಸುವ ಮೂಲಕ ಭಾರತದಲ್ಲಿಯೇ ಅತ್ಯಂತ ಹೆಚ್ಚು ಪದಬಂಧ ರಚಿಸಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ೪೦ ವರ್ಷಗಳಿಂದ ಕನ್ನಡ ಪತ್ರಿಕೆಗಳಿಗೆ ನಿರಂತರವಾಗಿ ಪದಬಂಧಗಳನ್ನು ಬರೆದುಕೊಡುತ್ತಿದ್ದಾರೆ. ಇವರು ರಚಿಸಿದ ಪದಬಂಧಗಳಿಗಾಗಿ ಸುಮಾರು ೧೫ ಲಕ್ಷ ಸುಳಿವುಗಳನ್ನು ಬರೆದಿದ್ದಾರೆ. ೨೦ ಪದಬಂಧ ಪುಸ್ತಕಗಳನ್ನು ಹೊರತಂದಿದ್ದಾರೆ.

ಡಾ.ರಾಜ್‌ಕುಮಾರ್ ರವರ ಜೀವನ ಸಾಧನೆ ಕುರಿತು ಬಂಗಾರ ಮನುಷ್ಯ ಕೃತಿ ಸೇರಿದಂತೆ ಅನೇಕ ಕೃತಿಗಳನ್ನು ಬರೆದಿದ್ದಾರೆ. ರಾಜ್‌ಕುಮಾರ್ ರವರ ಕುಟುಂಬಕ್ಕೆ ಹತ್ತಿರದ ವ್ಯಕ್ತಿಯೂ ಇವರಾಗಿದ್ದು, ಮೂಲತಃ ಕೋಲಾರದವರೇ ಅಗಿದ್ದು, ಈಗ ಪ್ರಸ್ತುತ ಬೆಂಗಳೂರಿನಲ್ಲಿದ್ದು, ಅವರ ಸಂಬAಧಿಕರು ಕೋಲಾರದಲ್ಲಿಯೇ ಇದ್ದಾರೆ.

*******************************************************************************************

ಆರ್.ವೆಂಕಟರವಣಪ್ಪ

ಬೇತಮಂಗಲ ಹೋಬಳಿ ಅಂಕತಟ್ಟಿಹಳ್ಳಿ ಗ್ರಾಮದವರಾದ್ದು, ಮೂಲತಃ ದೈಹಿಕ ಶಿಕ್ಷಕರಾಗಿದ್ದು, ಅಪಾರವಾದ ಇಂಗ್ಲೀಷ್ ಮತ್ತು ಕನ್ನಡ ಸಾಹಿತ್ಯ ಜ್ಞಾನವನ್ನು ಹೊಂದಿದ್ದಾರೆ. ಇವರ ಜನಪದ ಸಂಪತ್ತನ್ನು ಗಮನಿಸಿ ೨೦೨೩ ಮತ್ತು ೨೦೨೪ನೇ ಸಾಲಿನ ಕೆ.ಜಿ.ಎಫ್. ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡಲಾಗಿತ್ತು. ಜೊತೆಗೆ ಸಾಹಿತ್ಯದ ಕೃಷಿ ಜೊತೆಗೆ ನಿಜವಾದ ಕೃಷಿಕರು, ಜೊತೆಗೆ ಸಮಾಜಮುಖಿ ಕೆಲಸಗಳಲ್ಲಿ ಭಾಗವಹಿಸುತ್ತಿದ್ದರು.

ಜಿಲ್ಲಾ ಪ್ರಶಸ್ತಿಗೆ ಆಯ್ಕೆ ಆದವರ ಪಟ್ಟಿ :

ಜಾನಪದ ಕ್ಷೇತ್ರ : ವಿ.ಬಸವರಾಜ್, ಶ್ರೀನಿವಾಸಪುರ ತಾಲ್ಲೂಕು

ಸಮಾಜಸೇವೆ : ಕೆ.ಎನ್.ರವೀಂದ್ರನಾಥ್, ಗೌರಿಪೇಟೆ, ಕೋಲಾರ.

ಸಾಹಿತ್ಯ ಕ್ಷೇತ್ರ : ಜಯಮಂಗಲ ಚಂದ್ರಶೇಖರ್, ಮಾಲೂರು ತಾಲ್ಲೂಕು.

ಕನ್ನಡ ಸೇವೆ : ಬೆಂಜಮಿನ್ ಜೋಸೆಫ್ ಗೋಣಿ, ಕೆ.ಜಿ.ಎಫ್. ಬೆಮೆಲ್

ನಗರ.

ದೃಶ್ಯ ಪತ್ರಿಕೋದ್ಯಮ : ಬಿ.ಎಲ್.ರಾಜೇಂದ್ರ ಸಿಂಹ, ಕೋಲಾರ.

ಕ್ರೀಡಾ ಕ್ಷೇತ್ರ : ಎನ್.ನಾಗೇಶ್, ಕೆ.ಜಿ.ಎಫ್.

ಕಲಾಕ್ಷೇತ್ರ ಡೋಲು : ಡಾ. ವೈ.ಪಿ.ನಾಗರಾಜ್, ಮಾಲೂರು ತಾಲ್ಲೂಕು.

ಸಮಾಜಸೇವೆ : ವಿ.ನಾರಾಯಣಪ್ಪ, ಜನ್ನಘಟ್ಟ, ಕೋಲಾರ ತಾಲ್ಲೂಕು.

ಶಿಕ್ಷಣ ಕ್ಷೇತ್ರ : ಎಸ್.ಎನ್.ಕೋದಂಡರಾಮಯ್ಯ, ಪಿ.ಚನ್ನಯ್ಯಗಾರಿಪಲ್ಲಿ,

ಶ್ರೀನಿವಾಸಪುರ ತಾಲ್ಲೂಕು.

ಪತ್ರಿಕೋದ್ಯಮ : ಕೆ.ಬಿ.ಜಗದೀಶ್, ಸಂಜೆವಾಣಿ ಜಿಲ್ಲಾ ವರದಿಗಾರ, ಕೋಲಾರ.

ಸಮಾಜ ಸೇವೆ : ಸ್ನೇಕ್ ನಾಗರಾಜ್, ಕೋಲಾರ.

ಸಾಹಿತ್ಯ ಕ್ಷೇತ್ರ : ಡಾ.ಆರ್. ಶಂಕರಪ್ಪ, ಮುಳಬಾಗಿಲು ತಾಲ್ಲೂಕು.

ಸಂಗೀತ ಕ್ಷೇತ್ರ : ವಿಶ್ವನಾಥ, ಸುಣ್ಣಕಲ್ಲು, ಶ್ರೀನಿವಾಸಪುರ ತಾಲ್ಲೂಕು.

ನಾಣ್ಯ ಸಂಗ್ರಹಣೆ : ಹೆಚ್.ಕೆ.ಸತೀಶ್, ಮುಳಬಾಗಿಲು ತಾಲ್ಲೂಕು.

ಕೃಷಿ ಕ್ಷೇತ್ರ : ಕಾಂತಮ್ಮ, ಗಂಗಾಪುರ, ಕೋಲಾರ ತಾಲ್ಲೂಕು.

ತೋಟಗಾರಿಕೆ : ಪಿ.ಗೌತಮಿ, ಯಡಹಳ್ಳಿ ಗ್ರಾಮ, ಕೋಲಾರ ತಾಲ್ಲೂಕು.

ಚಿತ್ರ ೩೦ ಕೆ.ಎಲ್.ಆರ್. ೦೭ : ಪಿಚ್ಚಹಳ್ಳಿ ಶ್ರೀನಿವಾಸ್, ಎನ್. ಬಾಲನ್, ಆರ್.ವೆಂಕಟರವಣಪ್ಪ, ಅ.ನಾ.ಪ್ರಹ್ಲಾದ್‌ರಾವ್ ಮತ್ತು ಕೆ.ಭಾಗ್ಯಲಕ್ಷಿö್ಮ ರವರುಗಳ ಭಾವಚಿತ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net