ಕೋಲಾರ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರ ಬದಲಾವಣೆಗೆ ಮುಂದಾದ ಹೈಕಮ್ಯಾಂಡ್ / ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಲಾಭಿ / ಮ್ಯಾಕಲ ನಾರಾಯಣಸ್ವಾಮಿ, ಗೋಪಾಲಗೌಡ ಹೆಸರುಗಳು ಚಾಲ್ತಿಯಲ್ಲಿ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಜಿಲ್ಲಾ ಕಾಂಗ್ರೇಸ್ ಜಿಲ್ಲಾಧ್ಯಕ್ಷರ ಬದಲಾವಣೆಗೆ ಹೈಕಮ್ಯಾಂಡ್ ಮುಂದಾಗಿದ್ದು, ಶ್ರೀನಿವಾಸಪುರ ಕ್ಷೇತ್ರದ ಮಾಜಿ ತಾಲ್ಲೂಕು ಪಂಚಾಯ್ತಿ ಸದಸ್ಯ ಮಾಕಲ ನಾರಾಯಣಸ್ವಾಮಿ ಮತ್ತು ಬಂಗಾರಪೇಟೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ ಹೆಸರುಗಳು ಅಧ್ಯಕ್ಷರ ಸ್ಥಾನಕ್ಕೆ ಮುಂಚೂಣಿಯಲ್ಲಿದೆ.

ರಾಜ್ಯಾದ್ಯಂತ ಜಿಲ್ಲಾಧ್ಯಕ್ಷರುಗಳ ಬದಲಾವಣೆಗೆ ಹೈಕಮ್ಯಾಂಡ್ ಮುಂದಾಗಿದ್ದು, ಕೋಲಾರ ಜಿಲ್ಲೆಯ ಹಾಲಿ ಜಿಲ್ಲಾಧ್ಯಕ್ಷ ಮಾಲೂರಿನ ಲಕ್ಷಿö್ಮÃನಾರಾಯಣ ರವರನ್ನು ಬದಲಾವನೆ ಮಾಡಲು ಹೈಕಮ್ಯಾಂಡ್ ಮುಂದಾಗಿದೆ. ಕಳೆದ ೩ ವರ್ಷಗಳ ಹಿಂದೆ ಲಕ್ಷಿö್ಮÃನಾರಾಯಣ ಕೋಲಾರ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರನ್ನಾಗಿ ಹೈಕಮ್ಯಾಂಡ್ ಆಯ್ಕೆ ಮಾಡಲಾಗಿತ್ತು.

ಜಿಲ್ಲೆಯ ಕಾಂಗ್ರೇಸ್‌ನಲ್ಲಿ ಬಣರಾಜಕಾರಣ ಮುಂದುವರೆದಿದೆ. ಕಾಂಗ್ರೇಸ್‌ನ ಗುಂಪುಗಾರಿಕೆಯನ್ನು ಶಮನಗೊಳಿಸಲು ಹಾಲಿ ಅಧ್ಯಕ್ಷ ಲಕ್ಷಿö್ಮÃನಾರಾಯಣ ರವರಿಂದ ಸಾಧ್ಯವಾಗಲಿಲ್ಲ. ರಾಜ್ಯ ಹೈಕಮ್ಯಾಂಡ್ ನಿಂದಲೂ ಸಾಧ್ಯವಾಗದಷ್ಟು ಪರಿಸ್ಥಿತಿ ಜಿಲ್ಲಾ ಕಾಂಗ್ರೇಸ್‌ನಲ್ಲಿ ಬೆಳೆದುನಿಂತಿದೆ. ಹಾಲಿ ಅಧ್ಯಕ್ಷ ಲಕ್ಷಿö್ಮÃನಾರಾಯಣ ಅನೇಕ ಬಾರಿ ವೇದಿಕೆಗಳಲ್ಲಿ ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿರುವ ಉದಾಹರಣೆಗಳು ಇವೆ.

ಜಿಲ್ಲಾ ಕಾಂಗ್ರೇಸ್ ಕಛೇರಿಯಲ್ಲಿಯೇ ೨ ಬಣಗಳ ಬಡಿದಾಟ ಮತ್ತು ನಂದಿನಿ ಪ್ಯಾಲೆಸ್‌ನಲ್ಲಿ ನಡೆದ ಕಾಂಗ್ರೇಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ ನಡೆಯುವಂತಹ ಮಟ್ಟಕ್ಕೆ ನಡೆದು ಪೋಲಿಸ್ ಠಾಣೆಯ ಮೆಟ್ಟುಲು ಸಹ ಏರಿತ್ತು.

ಕೋಲಾರ ಜಿಲ್ಲೆಯಲ್ಲಿ ಈಗಲೂ ಕೆ.ಹೆಚ್.ಮುನಿಯಪ್ಪ ಬಣ ಹಾಗೂ ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಬಣ ಎಂದು ಕಾಂಗ್ರೇಸ್‌ನಲ್ಲಿಯೇ ೨ ಗುಂಪುಗಳಾಗಿ ವಿಂಗಣೆಗೊAಡು ಸಭೆ ಸಮಾರಂಭಗಳ ವೇದಿಕೆಗಳಲ್ಲಿಯೇ ಕಿತ್ತಾಡುವ ಮಟ್ಟಕ್ಕೆ ತಲುಪಿದೆ. ಆದರೆ ಈಗಿನ ಸದ್ಯದ ಪರಿಸ್ಥಿತಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ಕಾಂಗ್ರೇಸ್‌ನಲ್ಲಿ ೫ ಜನ ಶಾಸಕರು, ಇಬ್ಬರು ಎಂ.ಎಲ್.ಸಿ.ಗಳು ಇದ್ದು, ಕೆ.ಹೆಚ್.ಮುನಿಯಪ್ಪ ಬಣದಲ್ಲಿ ಇಬ್ಬರು ಶಾಸಕರು ಹಾಗೂ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರು ಗುರ್ತಿಸಿಕೊಂಡಿದ್ದಾರೆ.

ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಈ ಹಿಂದೆ ಮಾಜಿ ಸ್ಪೀಕರ್ ರಮೇಶ್‌ಕುಮಾರ್ ರವರ ಬಣದಲ್ಲಿ ಗುರ್ತಿಸಿಕೊಂಡಿದ್ದರಾದರೂ ಕಳೆದ ಒಂದು ವರ್ಷದಿಂದ ಕೆ.ಹೆಚ್.ಮುನಿಯಪ್ಪ ಬಣದ ಜೊತೆಗೆ ಗುರ್ತಿಸಿಕೊಂಡಿದ್ದಾರೆ. ಕೋಲಾರ ಶಾಸಕ ಕೊತ್ತುರು ಮಂಜುನಾಥ್, ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಮತ್ತು ಎಂ.ಎಲ್.ಸಿ. ಅನಿಲ್‌ಕುಮಾರ್ ಇವರುಗಳು ಪ್ರತ್ಯೇಕ ಗುಂಪಿನಲ್ಲಿ ಗುರ್ತಿಸಿಕೊಂಡಿದ್ದಾರೆ. ಕೆ.ಜಿ.ಎಫ್. ಶಾಸಕಿ ರೂಪಕಲಾ ಇತ್ತೀಚೆಗೆ ಎಸ್.ಎನ್.ನಾರಾಯಣಸ್ವಾಮಿ ಜೊತೆಗೆ ಗುರ್ತಿಸಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಕಾಂಗ್ರೇಸ್‌ನಲ್ಲಿ ಗುಂಪುಗಾರಿಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಧ್ಯಕ್ಷರ ಬದಲಾವಣೆಗೆ ಮುಂದಾಗಿರುವ ಹೈಕಮ್ಯಾಂಡ್ ಕೋಲಾರ ಜಿಲ್ಲಾ ಕಾಂಗ್ರೇಸ್‌ನಲ್ಲಿ ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವಂತಹರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಅಧ್ಯಕ್ಷರ ಸ್ಥಾನಕ್ಕೆ ಚಾಲ್ತಿಯಲ್ಲಿರುವ ಮ್ಯಾಕಲ ನಾರಾಯಣಸ್ವಾಮಿ ಮತ್ತು ಸೀಸಂದ್ರ ಗೋಪಾಲಗೌಡ ಈ ಇಬ್ಬರು ಕೆ.ವೈ.ನಂಜೇಗೌಡ, ಅನಿಲ್‌ಕುಮಾರ್, ಕೊತ್ತೂರು ಮಂಜುನಾಥ್ ಗುಂಪಿನಲ್ಲಿ ಗುರ್ತಿಸಿಕೊಂಡಿದ್ದಾರೆ.

ಇದುವರೆವಿಗೂ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರನ್ನಾಗಿ ಆಯ್ಕೆ ಆಗಿರುವವರು ಕೆ.ಹೆಚ್.ಮುನಿಯಪ್ಪನವರ ಬೆಂಬಲಿಗರೇ ಅಗಿದ್ದಾರೆ. ಹಾಲಿ ಅಧ್ಯಕ್ಷ ಲಕ್ಷಿö್ಮÃನಾರಾಯಣ ಅಧ್ಯಕ್ಷರಾಗುವ ಮೊದಲು ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಜಿಲ್ಲೆಯ ಕಾಂಗ್ರೇಸ್‌ನ ಗುಂಪುಗಾರಿಕೆಯನ್ನು ನಿಭಾಯಿಸಲು ಸಾಧ್ಯವಾಗದ ಕಾರಣ ಅವರು ಒಂದೂವರೆ ವರ್ಷಕ್ಕೆಲ್ಲಾ ರಾಜೀನಾಮೆ ಕೊಟ್ಟ ಕಾರಣ ಲಕ್ಷಿö್ಮÃನಾರಾಯಣರವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು.

ನೂತನವಾಗಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರ ಆಯ್ಕೆಗೆ ಕೆ.ಹೆಚ್.ಮುನಿಯಪ್ಪ ಬೆಂಬಲಿಗರು ತೆರೆಮರೆಯಲ್ಲಿ ಲಾಭಿ ನಡೆಸುತ್ತಿದ್ದಾರಾದರೂ ಯಾರ ಹೆಸರೂ ಚಾಲ್ತಿಗೆ ಬಂದಿಲ್ಲ. ರಮೇಶ್‌ಕುಮಾರ್ ರವರ ಕಟ್ಟಾ ಬೆಂಬಲಿಗರಾದ ಮ್ಯಾಕಲ ನಾರಾಯಣಸ್ವಾಮಿ ಈಗಾಗಲೇ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ ಮತ್ತು ರೂಪಕಲಾ ರವರನ್ನು ಭೇಟಿ ಮಾಡಿ ಬೆಂಬಲ ಕೋರಿದ್ದಾರೆ ಎನ್ನಲಾಗಿದೆ.

ಸೀಸಂದ್ರ ಗೋಪಾಲಗೌಡ, ಶಾಸಕರಾದ ಕೊತ್ತೂರು ಮಂಜುನಾಥ್ ಮತ್ತು ಎಂ.ಎಲ್.ಸಿ.ಅನಿಲ್‌ಕುಮಾರ್ ರವರ ಬೆಂಬಲಿಗರಾಗಿದ್ದು, ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷರಾಗಿ ರಾಜ್ಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಅನುಭವದ ಆಧಾರದ ಮೇಲೆ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರ ಸ್ಥಾನ ನೀಡಬೇಕೆಂದು ಒತ್ತಾಯಪಡಿಸಿದ್ದಾರೆ ಎನ್ನಲಾಗಿದೆ.

ಶ್ರೀನಿವಾಸಪುರ ಕ್ಷೇತ್ರದಲ್ಲಿ ಕಾಂಗ್ರೇಸ್ ಶಾಸಕರು ಇಲ್ಲದೇ ಇರುವುದರಿಂದ ಜಿಲ್ಲಾಧ್ಯಕ್ಷರ ಸ್ಥಾನ ಶ್ರೀನಿವಾಸಪುರ ಕ್ಷೇತ್ರಕ್ಕೆ ನೀಡುತ್ತಾರೆ ಎಂಬ ಆಶಾಭಾವನೆಯನ್ನು ಹೊಂದಿರುವ ಮ್ಯಾಕಲ ನಾರಾಯಣಸ್ವಾಮಿ ಕಾಂಗ್ರೇಸ್‌ನ ೨ ಗುಂಪುಗಳ ಮುಖಂಡರಲ್ಲಿ ಮತ್ತು ಶಾಸಕರಲ್ಲಿ ಸಂಪರ್ಕದಲ್ಲಿದ್ದಾರೆ. ಮಾಜಿ ಸ್ಪೀಕರ್ ರಮೇಶ್‌ಕುಮಾರ್ ರವರ ಬೆಂಬಲಿಗರಾಗಿರುವ ಕಾರಣ ಹೈಕಮ್ಯಾಂಡ್ ಬಳಿ ರಮೇಶ್‌ಕುಮಾರ್ ರವರ ಮಾತು ನಡೆಯುತ್ತದೆ. ಅಧ್ಯಕ್ಷರ ಸ್ಥಾನ ಸಿಗುತ್ತದೆಂಬ ನಿರೀಕ್ಷೆಯಲ್ಲಿ ಮ್ಯಾಕಲ ನಾರಾಯಣಸ್ವಾಮಿ ಇದ್ದಾರೆ.

ಚಿತ್ರ ೧೨ ಕೆ.ಎಲ್.ಆರ್. ೦೨ : ಮ್ಯಾಕಲ ನಾರಾಯಣಸ್ವಾಮಿ ರವರ ಭಾವಚಿತ್ರ

ಚಿತ್ರ ೧೨ ಕೆ.ಎಲ್.ಆರ್. ೦೨ಎ : ಸೀಸಂದ್ರಗೋಪಾಲಗೌಡ ರವರ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net