ಕೋಲಾರ-ಚಿಕ್ಕಬಳ್ಳಾಪುರ ಕಾಂಗ್ರೆಸ್​ನಲ್ಲಿ ಬಿಕ್ಕಟ್ಟು: ಕೆಪಿಸಿಸಿ ಕಚೇರಿಯಲ್ಲಿ ಡಿಕೆಶಿ ಸಭೆ

IMG-20220705-WA0008
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದಕೆಪಿಸಿಸಿ ಸದಸ್ಯ ವಿನಯ್​ ಶ್ಯಾಮ್​ರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಘೋಷಿಸಬೇಕು ಎಂದು ಕಾಂಗ್ರೆಸ್​ ನಿಯೋಗದಲ್ಲಿ ಮಾಜಿ ಶಾಸಕ ಅನಸೂಯಮ್ಮ ನಟರಾಜನ್​, ಮುಖಂಡರಾದ ಸತೀಶ್​, ಕಿಸಾನ್​ ಕೃಷ್ಣಪ್ಪ, ಶೇಖ್​ ಮುಬಾರಕ್​ ಮತ್ತಿತರರು ಇದ್ದರು.
Published on

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಸಕಲ ರೀತಿಯಲ್ಲಿ ಸನ್ನದ್ಧವಾಗುತ್ತಿರುವ ಕಾಂಗ್ರೆಸ್​ಗೆ ಒಂದೊಂದೇ ಸವಾಲು ಎದುರಾಗುತ್ತಿದೆ. ಕೋಲಾರ ಹಾಗೂ ಚಿಕ್ಕಬಳ್ಳಾಪುರ ವಿಚಾರಕ್ಕೆ ಸಂಬಂಧಿಸಿದಂತೆ ಸಮಸ್ಯೆ ಉಲ್ಬಣಿಸುತ್ತಿದ್ದು, ಮಂಗಳವಾರ ಪದ ಮುಖಂಡರು, ಕಾರ್ಯಕರ್ತರು ಬೆಂಗಳೂರಿಗೆ ಆಗಮಿಸಿ ಪ್ರತ್ಯೇಕ ಸಭೆಗಳಲ್ಲಿ ಪಾಲ್ಗೊಂಡರು.


ಹಿರಿಯ ನಾಯಕ ಎಂ.ಆರ್​.ಸೀತಾರಾಂ ಪರವಾಗಿ ಸೋಮವಾರ ಒಂದು ತಂಡ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಪದಲ್ಲೇ ಉಳಿಸಿಕೊಳ್ಳಬೇಕೆಂದು ಆಗ್ರಹಿಸಿತ್ತು. ಮೂರು ಜಿಲ್ಲೆಗಳಲ್ಲಿ ಪ್ರಬಲವಾಗಿರುವ ಬಲಿಜ ಸಮುದಾಯದ ನಾಯಕರನ್ನು ಕಡೆಗಣಿಸಬೇಡಿ ಎಂದು ಒತ್ತಾಯಿಸಿತ್ತು. ಇದೇ ವೇಳೆ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಎಂ.ಆರ್​.ಸೀತಾರಾಂ ಹಾಗೂ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ರಕ್ಷಾ ರಾಮಯ್ಯಗೆ ಟಿಕೆಟ್​ ನೀಡುವುದಾಗಿ ಭರವಸೆ ನೀಡಿದ್ದರು.


ಈ ಭರವಸೆ ನೀಡುತ್ತಿದ್ದಂತೆ ಇನ್ನೊಂದು ತಂಡ ಅಸಮಾಧಾನಗೊಂಡಿದೆ. ಆರ್​.ಎಲ್​.ಜಾಲಪ್ಪ ಅವರ ಮೊಮ್ಮಗ ವಿನಯ್​ ಶ್ಯಾಮ್​ ಬೆಂಬಲಿಗರು ಮಂಗಳವಾರ ಕೆಪಿಸಿಸಿ ಕಚೇರಿಗೆ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿ, ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರಕ್ಕೆ ನವೀನ್​ಗೆ ಟಿಕೆಟ್​ ನೀಡಬೇಕೆಂದು ಒತ್ತಾಯಿಸಿದರು. ಕೊನೆಗೆ ಅವರನ್ನೆಲ್ಲ ಕರೆದು ಕೂರಿಸಿಕೊಂಡ ಡಿ.ಕೆ.ಶಿವಕುಮಾರ್​, ಈ ಬಗ್ಗೆ ಪರಿಶೀಲಿಸೋಣ ಎಂದು ಸಮಾಧಾನಪಡಿಸಿದರು.


ಇತ್ತ ಸಿದ್ದರಾಮಯ್ಯ ಮನೆಯಲ್ಲಿ ಪದ ಕೋಲಾರ ಟಕಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯಿತು. ಅಸಮಾಧಾನಗೊಂಡಿರುವ ಹಿರಿಯ ನಾಯಕ ಕೆ.ಎಚ್​. ಮುನಿಯಪ್ಪ ಅವರು ಮುಂದಿನ ನಡೆ ಬಗ್ಗೆ ಅಲ್ಲಿ ಚರ್ಚೆ ನಡೆದಿತ್ತು. ತಮ್ಮ ಗಮನಕ್ಕೆ ಬಾರದೇ ಸಿದ್ದರಾಮಯ್ಯ- ರಮೇಶ್​ ಕುಮಾರ್​ ಜೋಡಿ ದೆಹಲಿಯಲ್ಲಿ ರಾಹುಲ್​ ಗಾಂಧಿ ಸಮ್ಮುಖದಲ್ಲಿ ಜೆಡಿಎಸ್​ನ ನಾಯಕರನ್ನು ಪಕ್ಕೇ ಸೇರಿಸಿಕೊಂಡಿದ್ದರು. ಇದು ಮುನಿಯಪ್ಪ ಅವರನ್ನು ಕೆರಳಿಸಿತ್ತು.
ಮಾಜಿ ಸಭಾಧ್ಯ ರಮೇಶ್​ ಕುಮಾರ್​, ಸೇರಿ 20ಕ್ಕೂ ಹೆಚ್ಚು ನಾಯಕರು ಭಾಗಿಯಾಗಿದ್ದರು. ಮುನಿಯಪ್ಪ ಮಾಡಬಹುದಾದ ಹಾನಿಯ ಬಗ್ಗೆ ಹಾಗೂ ಒಗ್ಗಟ್ಟಿನಿಂದ ಇರುವ ಬಗ್ಗೆ ಆ ಸಭೆಯಲ್ಲಿ ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net