ವಿಜಯವಾಣಿ ಸುದ್ದಿಜಾಲ ಕೋಲಾರ
ನಗರದ ಎ.ಪಿ.ಎಂ.ಸಿ ಮಾರುಕಟ್ಟೆ ಜಾಗದ ಸಮಸ್ಯೆಯನ್ನು ಕೈಗಾರಿಕೆ ಎಂದು ಪರಿಗಣಿಸಿ ೧೦೦ ಎಕರೆ ಭೂ ಸ್ವಾಧಿನ ಮಾಡಿಕೊಂಡು ಅಭಿವೃದ್ದಿಪಡಿಸಿ, ಇಲ್ಲವೇ ಜಿಲ್ಲೆಯ ರೈತರನ್ನು ಪಕ್ಕದ ಆಂದ್ರಕ್ಕೆ ಸೇರಿಸಿ ಎಂದು ಕಂದಾಯ ಮಂತ್ರಿಗಳು ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿ ನ.೨೪ ರ ಶುಕ್ರವಾರ ಜಾನುವಾರುಗಳ ಸಮೇತ ಕೊಂಡರಾಜನಹಳ್ಳಿ ಬಳಿ ರಾಷ್ಟಿçÃಯ ಹೆದ್ದಾರಿ ಬಂದ್ ಮಾಡಲು ರೈತ ಸಂಘ ತೀರ್ಮಾನಿಸಿತು.
ಕೋಲಾರ ಎ.ಪಿ.ಎಂ,ಸಿ ಮಾರುಕಟ್ಟೆಯಲ್ಲಿ ಭಾನುವಾರ ಕರೆದಿದ್ದ ರೈತ ಸಂಘದ ಸಭೆಯಲ್ಲಿ ರೈತ ಸಂಘ ಮಹಿಳಾ ಜಿಲ್ಲಾಧ್ಯಕ್ಷೆ ನಳಿನಿಗೌಡ ಮಾತನಾಡಿ, ಮಡಿವಾಳ ಗ್ರಾಮದ ಸರ್ವೇ ನಂ.೪೧ ರಲ್ಲಿ ೮೪ ಎಕರೆ ಸರ್ಕಾರಿ ಗೋಮಾಳ ಜಮೀನಿದ್ದು ಮಾನ್ಯ ಜಿಲ್ಲಾಧಿಕಾರಿಗಳು ಸ್ಥಳ ಪರೀಶೀಲನೆ ಮಾಡಿ ಮಾರುಕಟ್ಟೆಗೆ ಮಂಜೂರು ಮಾಡಲು ಕಂದಾಯ ಮಂತ್ರಿಗಳಿಗೆ ವರದಿ ಸಲ್ಲಿಸಬೇಕೆಂದು ಒತ್ತಾಯ ಮಾಡಿದರು.
೯೦ ದಿನ ರೈತ ಬೆವರು ಸುರಿಸಿ ಬೆಳೆದಂತಹ ಬೆಳೆ ಮಾರುಕಟ್ಟೆಗೆ ಬಂದರೆ ಸಮರ್ಪಕವಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ದಲ್ಲಾಳಿಗಳು ಹರಾಜು ಹಾಕಿದ ಬೆಲೆಗೆ ರೈತ ಮಾಲನ್ನು ನೀಡಬೇಕಾದೆ. ಇಂತಹ ಪರಿಸ್ಥಿತಿ ಇದ್ದರೂ ಮಾರುಕಟ್ಟೆಯ ಜಾಗದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ವಿಪಲವಾಗಿದೆ ಎಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಅಸಮಾದಾನ ವ್ಯಕ್ತಪಡಿಸಿದರು.
ಸರ್ಕಾರಗಳು ಉಸ್ತುವಾರಿ ಸಚಿವರು ಸಂಸದರು ಶಾಸಕರು ಎ.ಪಿ.ಎಂ.ಸಿ ಆಡಳಿತ ಮಂಡಳಿ ಬದಲಾವಣೆ ಆಗುತ್ತಿದೆ ಹೊರತು ಮಾರುಕಟ್ಟೆಯ ಜಾಗದ ಸಮಸ್ಯೆ ಮಾತ್ರ ಪರಿಹಾರ ಸಿಗದೆ ಜೀವಂತವಾಗಿದೆ. ಒಂದು ಕಡೆ ರೈತರ ಹೋರಾಟಗಾರರ ದಿಕ್ಕುತಪ್ಪಿಸಲು ೨೦ ವರ್ಷಗಳಿಂದ ಜನಪ್ರತಿನಿದಿಗಳು ಎ.ಪಿ,ಎಂ.ಸಿ ಆಡಳಿತ ಮಂಡಳಿ ರಾತ್ರಿ ವೇಳೆಯ ನಕ್ಷತ್ರಗಳನ್ನು ಹಗಲು ವೇಳೆ ತೋರಿಸಿ, ದಿಕ್ಕುತಪ್ಪಿಸುತ್ತಿರುವ ಅವ್ಯವಸ್ಥೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಕಾರ್ಯದ್ಯಕ್ಷ ವಕ್ಕಲೆರಿ ಹನುಮಯ್ಯ ಮಾತನಾಡಿ, ಜಿಲ್ಲಾದ್ಯಂದ ಸಾವಿರಾರು ಎಕರೆ ಗೋಮಾಳ ಅರಣ್ಯ ಭೂಮಿಗೆ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ ಭೂಗಳ್ಳರಿಗೆ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಮಂಜೂರು ಮಾಡಲು ಕಂದಾಯ ಸರ್ವೇ ಅಧಿಕಾರಿಗಳಿಗೆ ಸರ್ಕಾರಿ ಭೂಮಿ ಸಿಗುತ್ತದೆ ಆದರೆ ಲಕ್ಷಾಂತರ ರೈತ ಕುಟುಂಬಗಳ ಜೀವನಾಡಿ ನೂರಾರು ಕೋಟಿ ವ್ಯವಹಾರ ವಹಿವಾಟು ನಡೆಯುವ ಮಾರುಕಟ್ಟೆ ಅಭಿವೃದ್ದಿಗೆ ಮಾತ್ರ ಭೂಮಿ ಸಿಗುತ್ತಿಲ್ಲವೇ ಎಂದು ಪ್ರಶ್ನೆ ಮಾಡಿದರು.
ಸಭೆಯಲ್ಲಿ ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ತರ‍್ನಹಳ್ಳಿ ಆಂಜಿನಪ್ಪ, ಪೆಮ್ಮದೊಡ್ಡಿ ಯಲ್ಲಪ್ಪ, ಹರೀಶ್, ಮುನಿಕೃಷ್ಣ, ಮಂಗಸAದ್ರ ತಿಮ್ಮಣ್ಣ, ನರಸಿಂಹಣ್ಣ, ಯಾರಂಘಟ್ಟ ಗೀರೀಶ್, ಶಿವಾರೆಡ್ಡಿ ಮುಂತಾದವರಿದ್ದರು.
ಚಿತ್ರ ೧೦ ಕೆ.ಎಲ್.ಆರ್. ೦೪ : ಎ.ಪಿ.ಎಂ.ಸಿ. ಮಾರುಕಟ್ಟೆ ಜಾಗ ನೀಡುವಂತೆ ಕಂದಾಯ ಮಂತ್ರಿಗಳಿಗೆ ರಾಷ್ಟಿçÃಯ ಹೆದ್ದಾರಿಯ ರಸ್ತೆ ತಡೆ ನಡೆಸಿ ಶಿಫಾರಸ್ಸು ಮಾಡಬೇಕೆಂದು ರೈತ ಸಂಘದ ಸಭೆಯಲ್ಲಿ ಒತ್ತಾಯ ಪಡಿಸುವ ಸಭೆ