ವಿಜಯವಾಣಿ ಸುದ್ದಿಜಾಲ ಕೋಲಾರ
ಅಲ್ಪಸಂಖ್ಯಾತರ ವಿಶೇಷ ಅನುದಾನದಲ್ಲಿ ನಗರಕ್ಕೆ ೧೦ ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಿದ್ದು, ೫ ಕೋಟಿ ರೂ.ಗಳ ಕಾಮಗಾರಿ ಈಗಾಲೇ ಮುಗಿದಿದ್ದು, ಈಗ ೫ ಕೋಟಿ ರೂ.ಗಳ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.
ನಗರಸಭೆ ವ್ಯಾಪ್ತಿಯ ವಾರ್ಡ್ ನಂ ೧೬ರಲ್ಲಿ ೧.೪೬ ಕೋಟಿ ವೆಚ್ಚದ ರಸ್ತೆಯ ಅಭಿವೃದ್ಧಿ ಕಾಮಗಾರಿಗಳಿಗೆ ಗುರುವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಈ ರಸ್ತೆಗೆ ಈ ಹಿಂದೆ ೩-೪ ಬಾರಿ ಗುದ್ದಲಿಪೂಜೆ ಮಾಡಿದ್ದು, ಕಾಮಗಾರಿ ಪ್ರಾರಂಭಿಸಿರಲಿಲ್ಲ. ೧೦ ದಿನಗಳೊಳಗಾಗಿ ಕಾಮಗಾರಿ ಪ್ರಾರಂಭಿಸುವAತೆ ಗುತ್ತಿಗೆದಾರನಿಗೆ ಶಾಸಕರು ಸೂಚನೆ ನೀಡಿದರು.
ಕೋಲಾರ ನಗರಸಭೆ ವ್ಯಾಪ್ತಿಯ ಅಭಿವೃದ್ಧಿಗೆ ೩೦ ಕೋಟಿ ರೂಪಾಯಿಗಳ ಮುಖ್ಯಮಂತ್ರಿ ವಿಶೇಷ ಅನುದಾನವು ಬಿಡುಗಡೆಯಾಗಿದೆ. ನಗರಸಭೆ ವ್ಯಾಪ್ತಿಯ ಅಭಿವೃದ್ಧಿಯ ದೃಷ್ಟಿಯಿಂದ ಕಾಮಗಾರಿಗಳು ಕುರಿತಂತೆ ರೂಪುರೇಷೆಗಳನ್ನು ರಚಿಸಲು ಖಾಸಗಿ ಸಂಸ್ಥೆಗೆ ಜವಾಬ್ದಾರಿ ನೀಡಲಾಗಿದ್ದು, ಆದಷ್ಟು ಬೇಗ ಕಾಮಗಾರಿ ಪ್ರಾರಂಭಿಸಲಾಗುತ್ತದೆ. ಯುಜಿಡಿ ಇಲ್ಲದ ಕಡೆಯೂ ಯುಜಿಡಿ ಮಾಡಿಸಲು ಕ್ರಮ ವಹಿಸಿ, ಕೋಲಾರ ನಗರವನ್ನು ಸುಂದರ ನಗರ ನಿರ್ಮಾಣಕ್ಕೆ ಅಧ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು
ಇದೇ ಸಂದರ್ಭದಲ್ಲಿ ಸಾರ್ವಜನಿಕರು ಶಾಸಕರಿಗೆ ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದರು. ಎಂ.ಎಲ್.ಸಿ.ಅನಿಲ್ ಕುಮಾರ್, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಕುರಿಗಳ ರಮೇಶ್, ಉಪಾಧ್ಯಕ್ಷೆ ಸಂಗೀತಾ, ವಾರ್ಡ್ ನಂ.೧೬ರ ಸದಸ್ಯ ಫೈರೋಜ್ ಖಾನ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೈ ಶಿವಕುಮಾರ್, ನಗರಸಭೆ ಸದಸ್ಯರಾದ ಎನ್.ಅಂಬರೀಷ್, ಅಫ್ಸರ್, ಏಜಾಜ್ ಪಾಷ, ಸುರೇಶ್ ಬಾಬು, ಷಾಮೀರ್ ಪಾಷ, ಸೈಯದ್ ಸಮೀ, ಹಿದಾಯತ್, ಷಫಿ, ಏಜಾಜ್ ಪಾಷ, ರಫೀಕ್, ಸಾಧೀಕ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ರಮೇಶ್, ಗ್ರಾಪಂ ಮಾಜಿ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಮುಖಂಡರಾದ ಟ್ರಾಕ್ಟರ್ ಮುಸ್ತಫಾ, ನಜೀರ್, ಗೌಸ್ ಪೀರ್, ನಜೀರ್, ಆರೀಫ್, ಅಯೂಬ್, ಅಸ್ಲಂ, ಸೀಪೂರ್ ಅಕ್ರಂ, ಅರ್ಬಾಜ್ ಮುಂತಾದವರು ಉಪಸ್ಥಿತರಿದ್ದರು.
ಚಿತ್ರ ೨೧ ಕೆ.ಎಲ್.ಆರ್. ೦೨ : ವಾರ್ಡ್ ನಂ.೧೬ರಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಕೊತ್ತೂರು ಮಂಜುನಾಥ್, ಎಂ.ಎಲ್.ಸಿ. ಅನಿಲ್ ಕುಮಾರ್, ನಗರಸಭೆ ಅಧ್ಯಕ್ಷೆ ಲಕ್ಷಿö್ಮÃದೇವಮ್ಮ, ಕುರಿಗಳ ರಮೇಶ್ ಮುಂತಾದವರು ಉಪಸ್ಥಿತರಿದ್ದರು.