ಕೋಮುಲ್‌ಗೆ ಸಹಕಾರ ನೀಡಿದಂತೆ ಡಿಸಿಸಿ ಬ್ಯಾಂಕ್‌ಗೆ ಸಹಕಾರ ನೀಡಬೇಕೆಂದು ಕೋಲಾರ ಘಟಬಂಧನ್ ಶಾಸಕರು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಬಳಿ ಮನವಿ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಕೋಮುಲ್ ಅಧ್ಯಕ್ಷರ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಘಟಬಂಧನ್ ಭಾನುವಾರ ಘಟಬಂಧನ್ ಶಾಸಕರು ಹಾಗೂ ಕೋಮುಲ್ ಅಧ್ಯಕ್ಷ ನಂಜೇಗೌಡ ಮತ್ತು ನಿರ್ದೆಶಕರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಸಹಕಾರ ಸಚಿವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿ ಇದೇ ರೀತಿ ಮುಂದೆ ಬರಲಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಚುನಾವಣೆಗೆ ತಮ್ಮ ಸಹಕಾರ ನೀಡಬೇಕು ಎಂದು ಕೋರಿದರು ಎನ್ನಲಾಗಿದೆ.

ಕೋಮುಲ್ ಅಧ್ಯಕ್ಷರ ಚುನಾವಣೆಗೆ ಕಾಂಗ್ರೇಸ್ ಪಕ್ಷದ ಬೆಂಬಲದಿAದಲೇ ಆಯ್ಕೆ ಆಗಿರುವ ಬಂಗಾರಪೇಟೆ ಎಸ್.ಎನ್.ನಾರಾಯಣಸ್ವಾಮಿ ಮತ್ತು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಮಧ್ಯೆ ಪೈಪೋಟಿ ಇತ್ತು. ಆದರೆ ಆಯ್ಕೆ ಆಗಿದ್ದ ೯ ನಿರ್ದೇಶಕರಲ್ಲಿ ನಂಜೇಗೌಡರ ಪರ ನಾಮಕರಣ ಸದಸ್ಯ ಸೇರಿ ಸಂಖ್ಯೆ ೮ ಇದ್ದ ಕಾರಣ ನಂಜೇಗೌಡರು ಅಧ್ಯಕ್ಷರು ಹೈಕಮ್ಯಾಂಡ್ ಬೆಂಬಲ ಸೂಚಿಸಿದ ಕಾರಣ ನಂಜೇಗೌಡರು ಅವಿರೋಧ ಆಯ್ಕೆ ಆದರು.

ಭಾನುವಾರ ಕೋಮುಲ್ ಅಧ್ಯಕ್ಷ ನಂಜೇಗೌಡ, ಶಾಸಕ ಕೊತ್ತೂರು ಮಂಜುನಾಥ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಎಂ.ಎಲ್.ಸಿ.ಅನಿಲ್‌ಕುಮಾರ್ ಹಾಗೂ ಕೋಮುಲ್‌ನ ನಾಮಕರಣ ಸದಸ್ಯ ಸೇರಿ ೭ ಜನ ನಿರ್ದೇಶಕರು ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಬೈರತಿ ಸುರೇಶ್, ಸಹಕಾರ ಸಚಿವ ರಾಜಣ್ಣ ರವರನ್ನು ಭೇಟಿಯಾಗಿ ಕೃತಜ್ಞತೆಗಳನ್ನು ಸಲ್ಲಿಸಿ ಬಂದಿದ್ದಾರೆ.

ಸಹಕಾರ ಸಚಿವ ರಾಜಣ್ಣ ಹಾಸನದಲ್ಲಿದ್ದ ಕಾರಣ ಹಾಸನಕ್ಕೆ ತೆರಳಿದ ಘಟಬಂಧನ್ ಶಾಸಕರು ಮತ್ತು ಕೋಮುಲ್ ಅಧ್ಯ÷ಕ್ಷರು ಮತ್ತು ನಿರ್ದೇಶಕರು ಸಹಕಾರ ಸಚಿವರನ್ನು ಭೇಟಿಯಾಗಿ ಅಧ್ಯಕ್ಷರಾಗಲು ಸಹಕರಿಸಿದ್ದಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿ ಮುಂದೆ ನಡೆಯಲಿರುವ ಡಿಸಿಸಿ ಬ್ಯಾಂಕ್ ಚುನಾವಣೆಗೆ ಇದೇ ರೀತಿ ನಮಗೆ ಸಹಕಾರ ನೀಡಬೇಕು ಎಂದು ಕೋರಿದರು ಎನ್ನಲಾಗಿದೆ.

ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಇನ್ನು ೩ ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಬೇಕಾಗಿದ್ದು, ಕೋರ್ಟ್ ಮೆಟ್ಟಿಲೇರಿರುವ ಕಾರಣ ಜುಲೈ ೧೧ ರಂದು ೩ ಕ್ಷೇತ್ರಗಳ ಬಗ್ಗೆ ತೀರ್ಪು ಬರುವ ಸಾಧ್ಯತೆ ಇದ್ದು, ನಂತರ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆ ಚುರುಕುಗೊಳ್ಳಲಿದೆ.

ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ, ಹಾಗೂ ಮಂತ್ರಿಗಳನ್ನು ಭೇಟಿಯಾದ ನಿರ್ದೇಶಕರಾದ ಜಯಸಿಂಹ ಕೃಷ್ಣಪ್ಪ, ಎನ್.ಹನುಮೇಶ್, ಶ್ರೀನಿವಾಸ್, ಕೆ.ಕೆ.ಮಂಜುನಾಥ್, ಚಂಜಿಮಲೆ ರಮೇಶ್, ಕಾಂತಮ್ಮ ಹಾಗೂ ಮುಖಂಡರು ಉಪಸ್ಥಿತರಿದ್ದರು.

ಚಿತ್ರ ೦೬ ಕೆ.ಎಲ್.ಆರ್. ೦೬ : ಕೋಮುಲ್ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಕೆ.ವೈ.ನಂಜೇಗೌಡ ಮತ್ತು ನಿರ್ದೇಶಕರು ಹಾಗೂ ಘಟಬಂಧನ್ ಶಾಸಕರು ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಭೇಟಿಯಾಗಿ ಕೃತಜ್ಞತೆಯನ್ನು ಸಲ್ಲಿಸಿದರು.

ಚಿತ್ರ ೦೬ ಕೆ.ಎಲ್.ಆರ್. ೦೬ಎ : ಕೋಮುಲ್ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಕೆ.ವೈ.ನಂಜೇಗೌಡ ಮತ್ತು ನಿರ್ದೇಶಕರು ಹಾಗೂ ಘಟಬಂಧನ್ ಶಾಸಕರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರನ್ನು ಭೇಟಿಯಾಗಿ ಕೃತಜ್ಞತೆಯನ್ನು ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net