ಕೋಮುಲ್ ಆಡಳಿತ ಮಂಡಳಿ ಚುನಾವಣೆ ಜೂ.೧೩ ರಿಂದ ನಾಮಪತ್ರ ಸಲ್ಲಿಕೆ ಪ್ರಾರಂಭ / ಜೂ.೨೫ ರಂದು ಚುನಾವಣೆ / ಮತ ಎಣಿಕೆ ಸಂಜೆ ೪ ರಿಂದ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಕೋಮುಲ್ ಆಡಳಿತ ಮಂಡಳಿಗೆ ಜೂ.೨೫ ರಂದು ನಡೆಯಲಿರುವ ನಿರ್ದೇಶಕರ ೧೩ ಕ್ಷೇತ್ರಗಳ ಚುನಾವಣೆಗೆ ಅಧಿಕೃತ ವೇಳಾಪಟ್ಟಿಯ ಅಧಿಸೂಚನೆ ಜೂ.೯ ರ ಸಂಜೆ ಹೊರಬಿದ್ದಿದ್ದು, ಜೂ.೧೩ ರಿಂದ ನಾಮಪತ್ರಗಳ ಸಲ್ಲಿಕೆ ಪ್ರಾರಂಭಗೊಳ್ಳಲಿದೆ.

ನಾಮಪತ್ರ ಸಲ್ಲಿಸಲು ಕೊನೆ ದಿನ ಜೂ.೧೭ ಆಗಿದೆ. ನಾಮಪತ್ರಗಳ ಪರಿಶೀಲನೆ ಜೂ.೧೮ ಹಾಗೂ ನಾಮಪತ್ರಗಳನ್ನು ವಾಪಸ್ಸು ಪಡೆಯಲು ಜೂ.೨೦ ಆಗಿದೆ. ಜೂ.೨೦ ರಂದು ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ ಹಾಗೂ ಅಭ್ಯರ್ಥಿಗಳಿಗೆ ಚಿಹ್ನೆಗಳ ಹಂಚಿಕೆ ಆಗಲಿದೆ.

ಜೂ.೨೫ ರಂದು ನಗರದ ಬಾಲಕಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತದಾನ ನಡೆಯಲಿದ್ದು, ಅದೇ ದಿನ ಸಂಜೆ ಮತ ಎಣಿಕೆ ಕಾರ್ಯ ಮುಕ್ತಾಯಗೊಳ್ಳಲಿದೆ.

ಮತಕ್ಷೇತ್ರಗಳ ಹೆಸರು :

ಕೋಲಾರ ಈಶಾನ್ಯ-೧, ಕೋಲಾರ ನೈರುತ್ಯ-೧, ಕೋಲಾರ ವೇಮಗಲ್ ಕ್ಷೇತ್ರ-೧, ಮುಳಬಾಗಿಲು ಪೂರ್ವಕ್ಷೇತ್ರ-೧, ಮುಳಬಾಗಿಲು ಪಶ್ಚಿಮ ಕ್ಷೇತ್ರ-೧, ಮಾಲೂರು ಟೇಕಲ್ ಕ್ಷೇತ್ರ-೧, ಮಾಲೂರು ಕಸಬಾ ಕ್ಷೇತ್ರ-೧, ಶ್ರೀನಿವಾಸಪುರ ಅಡ್ಡಗಲ್ ಕ್ಷೇತ್ರ-೧, ಶ್ರೀನಿವಾಸಪುರ ಯಲ್ದೂರು ಕ್ಷೇತ್ರ-೧, ಬಂಗಾರಪೇಟೆ ಕ್ಷೇತ್ರ-೧, ಕೆ.ಜಿ.ಎಫ್.ಕ್ಷೇತ್ರ-೧, ಕೋಲಾರ ಜಿಲ್ಲಾ ಮಹಿಳಾ ಉತ್ತರ ಕ್ಷೇತ್ರ-೧, ಕೋಲಾರ ಜಿಲ್ಲಾ ಮಹಿಳಾ ದಕ್ಷಿಣ ಕ್ಷೇತ್ರ-೧

ರಂಗೇರಿದ ಚುನಾವಣೆ ಕಣ :

ಕೋಮುಲ್ ಚುನಾವಣೆಗೆ ಬಹುತೇಕ ಅಭ್ಯರ್ಥಿಗಳ ಆಯ್ಕೆ ಪೂರ್ಣಗೊಂಡಿದ್ದು, ಆಯಾ ಕ್ಷೇತ್ರಗಳಿಂದ ಘೋಷಣೆಯಾಗಿರುವ ಅಭ್ಯರ್ಥಿಗಳು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ಎರಡು ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ನಾಮಪತ್ರ ಸಲ್ಲಿಕೆ ವೇಳೆಗೆ ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿಗಳ ಆಯ್ಕೆ ಆಗಲಿದೆ.

ಕೋಲಾರದ ವೇಮಗಲ್ ಕ್ಷೇತ್ರದಲ್ಲಿ ಕಾಂಗ್ರೇಸ್ ನಿಂದ ಬಂಡಾಯವಾಗಿ ಒಬ್ಬರು ಸ್ಪರ್ಧೆಗೆ ಇಳಿದಿದ್ದು, ಅವರಿಗೆ ಬಿಜೆಪಿ ಮತ್ತು ಜೆಡಿಎಸ್ ಬೆಂಬಲ ದೊರಯಲಿದೆ. ಉಳಿದಂತೆ ಎಲ್ಲಾ ತಾಲ್ಲೂಕುಗಳಲ್ಲಿ ಆಯಾ ಪಕ್ಷಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಈಗಾಗಲೇ ಮುಖಂಡರು ಸೇರಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.

ಮಾಲೂರಿನಿಂದ ಕೋಚಿಮುಲ್ ಮಾಜಿ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ. ಬಂಗಾರಪೇಟೆಯಿAದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸ್ಪರ್ಧೆ ಮಾಡಲಿದ್ದಾರೆ. ಉಳಿದಂತೆ ಮರು ಆಯ್ಕೆಗೆ ಶ್ರೀನಿವಾಸಪುರ ಯಲ್ದೂರು ಕ್ಷೇತ್ರದಿಂದ ವಿ.ಹನುಮೇಶ ಕೋಲಾರದ ಹೋಳೂರು ಕ್ಷೇತ್ರದಿಂದ ಡಿ.ವಿ.ಹರೀಶ್, ಮುಳಬಾಗಿಲು ಕ್ಷೇತ್ರದಿಂದ ಕಾಡೇನಹಳ್ಳಿ ನಾಗರಾಜ್ ಇವರೂ ಸಹ ಅಭ್ಯರ್ಥಿಗಳಾಗಲಿದ್ದಾರೆ. ಉಳಿದಂತೆ ಹೊಸಮುಖಗಳು ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ.

ಚಿತ್ರ ೧೦ ಕೆ.ಎಲ್.ಆರ್. ೦೬ : ಕೋಚಿಮುಲ್ ಆಡಳಿತ ಕಛೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net