ಕೋಟೆಗೆ ಬಂದ ಆಫ್ರಿಕಾದಲ್ಲಿ ಮೃತಪಟ್ಟಿದ್ದ ವ್ಯಾಪಾರಿ ಮೃತದೇಹ

16HDK02
Published on

ಎಚ್.ಡಿ.ಕೋಟೆ: ಆಫ್ರಿಕಾದ ಐವರಿ ಕೋಸ್ಟ್‌ನಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದ ತಾಲೂಕಿನ ಟೈಗರ್ ಬ್ಲಾಕ್ ನಿವಾಸಿ ಎಫ್ರಾಯಿಂ (19) ಮೃತದೇಹವನ್ನು ಶಾಸಕ ಅನಿಲ್ ಚಿಕ್ಕಮಾದು ಅವರ ಸಹಕಾರದಿಂದ 15 ದಿನದ ನಂತರ ಭಾನುವಾರ ಗ್ರಾಮಕ್ಕೆ ತರಲಾಯಿತು.

ಎಫ್ರಾಯಿಂ ಆಫ್ರಿಕಾ ದೇಶಕ್ಕೆ ಆರು ತಿಂಗಳ ಹಿಂದೆ ಸಂಬಂಧಿಕರ ಜತೆ ವ್ಯಾಪಾರಕ್ಕೆ ತೆರಳಿದ್ದನು. ಡೆಂೆ ಜ್ವರದಿಂದ ಬಳಲುತ್ತಿದ್ದ ಎಫ್ರಾಯಿಂನನ್ನು ಸಂಬಂಧಿಕರು ಆಫ್ರಿಕಾದ ಐವರಿ ಕೋಸ್ಟ್‌ನ ಸೆಂಟರ್ ಹಾಸ್ಪಿಟಲ್ ಮತ್ತು ಯೂನಿವರ್ಸಿಟೇರ್ ಡಿ.ಆಂಗ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದೆ 15 ದಿನಗಳ ಹಿಂದೆ ಮೃತಪಟ್ಟಿದ್ದ.

ಗ್ರಾಮಕ್ಕೆ ಶಾಸಕ ಅನಿಲ್ ಚಿಕ್ಕಮಾದು ತೆರಳಿದ್ದ ಸಂದರ್ಭದಲ್ಲಿ ಮೃತನ ಸಂಭಂದಿಕರು ಮೃತದೇಹವನ್ನು ಗ್ರಾಮಕ್ಕೆ ತರಿಸಿಕೊಡುವಂತೆ ಮನವಿ ಮಾಡಿದ್ದರು. ಶಾಸಕರು ಜಿಲ್ಲಾಡಳಿತ ಜತೆ ನಿರಂತರವಾಗಿ ಸಂಪರ್ಕದಲ್ಲಿದ್ದು ಸಹಕಾರ ನೀಡಿದರು. ಶನಿವಾರ ರಾತ್ರಿ ಬೆಂಗಳೂರಿಗೆ ವಿಮಾನದ ಮೂಲಕ ಮೃತದೇಹವನ್ನು ತರಲಾಯಿತು. ನಂತರ ಆಂಬುಲೆನ್ಸ್ ಮೂಲಕ ಬೆಳಗಿನ ಜಾವ ಗ್ರಾಮಕ್ಕೆ ಮೃತದೇಹವನ್ನು ತರಲಾಯಿತು. ನಂತರ ಗ್ರಾಮದ ಹೊರವಲಯದಲ್ಲಿ ಅಂತ್ಯಕ್ರಿಯೆ ನಡೆಯಿತು.

ಗ್ರಾಮಕ್ಕೆ ತಹಸೀಲ್ದಾರ್ ಸಣ್ಣರಾಮಪ್ಪ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ನಾರಾಯಣಸ್ವಾಮಿ ಭೇಟಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net