ವಿಜಯವಾಣಿ ಸುದ್ದಿಜಾಲ ಕೋಲಾರ
ಜಿಲ್ಲಾಡಳಿತ, ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಕೆ.ಜಿ.ಎಫ್. ಶಾಸಕಿ ರೂಪಕಲಾ ಪ್ರಥಮ ಬಾರಿಗೆ ಅಸಮಾಧಾನ ಹೊರ ಹಾಕಿದ್ದು, ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದರು ಸ್ಪಂದಿಸುವAತಹ ಕೆಲಸ ಆಗುತ್ತಿಲ್ಲ. ರೈತರು ಮತ್ತು ಮಹಿಳೆಯರಿಗೆ ಶೂನ್ಯ ಬಡ್ಡಿ ಸಾಲ ಸಿಗುತ್ತಿಲ್ಲ. ಇದರಿಂದ ಮೈಕ್ರೋ ಫೈನಾನ್ಸ್ಗಳಿಗೆ ಹೋಗುವಂತೆ ಆಗಿದೆ ಎಂದು ದೂರಿ ತಮ್ಮದೇ ಪಕ್ಷದ ಶಾಸಕರ ವಿರುದ್ಧರೂ ಹರಿಹಾಯ್ದಿದ್ದಾರೆ.
ಕೆ.ಜಿ.ಎಫ್.ಬಳಿಯ ಕೋಟಿ ಲಿಂಗೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಜಿಲ್ಲೆಯ ಕಾಂಗ್ರೇಸ್‌ನ ನಾಯಕರಲ್ಲಿಯೇ ಭಿನ್ನಮತ ತಾರಕ್ಕೇರಿದೆ. ನಗರದಲ್ಲಿ ಎರಡು ದಿನಗಳಿಂದ ನಡೆದ ರಾಜ್ಯಮಟ್ಟದ ಜನಪರ ಉತ್ಸವ ಕಾರ್ಯಕ್ರಮಕ್ಕೆ ಯಾರಿಗೆ ಅವಶ್ಯಕತೆ ಇತ್ತೋ ಅವರನ್ನು ಮಾತ್ರ ಕರೆದಿದ್ದಾರೆ. ಕಾರ್ಯಕ್ರಮದ ಬಗ್ಗೆ ಮಾಹಿತಿ ಇತ್ತು. ಆದರೆ ಆಹ್ವಾನ ಇರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಲ್ಲರ ಆಶೀರ್ವಾದದಿಂದ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅದನ್ನು ಜನಪ್ರತಿಗಳು ಆದವರು ತಿಳಿದುಕೊಳ್ಳಬೇಕು. ಈಗಾಗಲೇ ದೇವರು ನಮಗೆ ಆಶೀರ್ವಾದ ಮಾಡಿ ಆಗಿದೆ. ನಮಗೆ ಯಾರು ಏನು ಮಾಡಲು ಆಗುವುದಿಲ್ಲ. ಜಿಲ್ಲೆಯ ಅಭಿವೃದ್ದಿಯ ದೃಷ್ಟಿಯಿಂದ ಬಜೆಟ್‌ನಲ್ಲಿ ಜಿಲ್ಲೆಯ ಸಮಸ್ಯೆಗಳನ್ನು ಸೇರಿಸಬೇಕಾಗುತ್ತದೆ. ಜಿಲ್ಲೆಯ ಬೇಡಿಕೆ ಕುರಿತು ನಮ್ಮನ್ನು ಸಂಪರ್ಕ ಮಾಡಿಲ್ಲ. ನಾನು ಯಾವುದೇ ಗುಂಪುಗಾರಿಕೆಯಲ್ಲಿ ಇಲ್ಲ. ಮತ್ತು ಯಾರ ವಿರುದ್ಧವೂ ರಾಜಕೀಯವಾಗಿ ಅಸೂಯೆ ತೋರಿಸಿಲ್ಲ. ರಾಜಕೀಯವಾಗಿ ನಾವು ಯಾರ ಮೇಲಿಯೂ ಷಡ್ಯಂತರ ಮಾಡಿಲ್ಲ ಎಂದರು.
ಹಾಲು ಒಕ್ಕೂಟದಲ್ಲಿ ರೈತರಿಗೆ ನಿರ್ಲಕ್ಷö್ಯ ಮಾಡಿದ್ದಾರೆ. ಡಿಸಿಸಿ ಬ್ಯಾಂಕಿನಲ್ಲಿ ಸಹ ಷಡ್ಯಂತರ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಮೋಸ ಆಗುತ್ತಿದೆ. ರೈತರನ್ನು ಬೀದಿಗೆ ತಂದಿದ್ದಾರೆ. ರೈತರು ಕಟ್ಟಿದ ಸಂಸ್ಥೆಗಳನ್ನು ಹಾಳು ಮಾಡುತ್ತಿದ್ದಾರೆ. ಅಧಿಕಾರದಲ್ಲಿದ್ದವರೆ ರೈತರ ಸಂಸ್ಥೆಗಳನ್ನು ನೆಲಕಚ್ಚಿಸಿದ್ದಾರೆ. ನಮ್ಮಲ್ಲಿ ಗುಂಪುಗಾರಿಕೆ ಇಲ್ಲ. ಆದರೆ ಅಸಮಾಧಾನ ಇದೆ ಎಂದು ಯಾರ ಹೆಸರೂ ಹೇಳದೆ ಪರೋಕ್ಷವಾಗಿ ಕಾಂಗ್ರೇಸ್ ಶಾಸಕರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಕೋಚಿಮುಲ್ ಮತ್ತು ಡಿಸಿಸಿ ಬ್ಯಾಂಕ್‌ಗಳನ್ನು ಹಾಳು ಮಾಡಿದ್ದಾರೆ. ಆ ಸಂಸ್ಥೆಗಳನ್ನು ಕಟ್ಟಿದವರು ನಾವು. ಅದಕ್ಕಾಗಿ ನಾನು ಕೇಳುತ್ತಿದ್ದೇನೆ. ಹೆಣ್ಣು ಮಕ್ಕಳ ರಕ್ಷಣೆಗೆ ಇದ್ದ ಸಂಸ್ಥೆಗಳನ್ನು ಹಾಳು ಮಾಡುತ್ತಿದ್ದಾರೆಂದು ಆಕ್ರೋಷ ಹೊರ ಹಾಕಿ, ಕೆಡಿಪಿ ಸಭೆಗಳಿಗೆ ಆಗಮಿಸದೇ ಇರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ ಕೆಡಿಪಿ ಸಭೆಗಳನ್ನು ನಡೆಸಿದವರನ್ನೇ ಕೇಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ವಿರುದ್ಧ ಅಸಮಾಧಾನ ಹೊರ ಹಾಕಿದರು.
ರೈತರ ವಿಚಾರದಲ್ಲಿ ಯಾರೂ ಸ್ಪಂಧಿಸುತ್ತಿಲ್ಲ. ಕಳೆದ ೩ ವರ್ಷಗಳಿಂದ ರೈತರಿಗೆ ಆಗಿರುವ ಅನ್ಯಾಯ ಯಾರನ್ನು ಕೇಳಬೇಕು. ಅಸೂಯೆಯಿಂದ ರೈತರನ್ನು ಬಲಾಢ್ಯರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಮ್ಮ ಪಕ್ಷದ ಶಾಸಕರ ವಿರುದ್ಧವೇ ಶಾಸಕರು ಗುಡುಗಿದರು.
ಕೆ.ಜಿ.ಎಫ್. ತಾಲ್ಲೂಕಿನಲ್ಲಿ ಎಪಿಎಂಸಿ ಮಾರುಕಟ್ಟೆ ಆಗಲಿ. ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಗಳನ್ನು ಮಕ್ಕಳು ಚೆನ್ನಾಗಿ ಬರೆಯಿಲಿ. ಕೆ.ಜಿ.ಎಫ್.ನಗರದಲ್ಲಿ ಕೈಗಾರಿಕಾ ಪ್ರದೇಶ ನಿರ್ಮಾಣವಾಗಲಿ. ಸ್ಥಳೀಯರಿಗೆ ಉದ್ಯೋಗ ಸಿಗುವಂತೆ ಆಗಲಿ. ರಾಜ್ಯವನ್ನು ಆಕರ್ಷಿಸುವ ಕ್ಷೇತ್ರವಾಗಲಿ ಎಂದು ಕೋಟಿ ಲಿಂಗೇಶ್ವರ ದೇವಸ್ಥಾನದ ಈಶ್ವರ ದೇವರಲ್ಲಿ ಬೇಡಿಕೊಂಡಿರುವುದಾಗಿ ತಿಳಿಸಿದರು.
ಚಿತ್ರ ೨೬ ಕೆ.ಎಲ್.ಆರ್. ೦೨ : ಕೆ.ಜಿ.ಎಫ್.ಶಾಸಕಿ ರೂಪಕಲಾ ರವರ ಭಾವಚಿತ್ರ